ಕಾರವಾರ, (ಫೆಬ್ರವರಿ 19): ಓವರಟೇಕ್ ಮಾಡುವ ಭರದಲ್ಲಿ ಲಾರಿ ಎದುರಿಗೆ ಬರುತ್ತಿದ್ದ ಕಾರಿಗೆ ಗುದ್ದಿದೆ. ಪರಿಣಾಮ ಒಂದೇ ಕಟುಂಬದ ಮೂವರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರವಾಸಕ್ಕೆಂದು ಕೊಪ್ಪಳದಿಂದ ಅಂಕೋಲಾ ಕಡೆಗೆ ಹೊರಟಿದ್ದ ಇಡೀ ಕುಟುಂಬ ಗಂಡ, ಹೆಂಡ್ತಿ ಹಾಗೂ ಮಗು ದುರಂತ ಅಂತ್ಯಕಂಡಿದ್ದಾರೆ. ಪತಿ ಆರ್ ವೆಂಕಟೇಶ್, ಪತ್ನಿ ಚೈತ್ರಾ ಹಾಗೂ 7 ತಿಂಗಳದ ಚಿಕ್ಕ ಮಗು ಶ್ರೀಹಾನ್ ಮೃತ ದುರ್ದೈವಿಗಳು.
ಮೃತ ಕುಟುಂಬ ಕೊಪ್ಪಳದಿಂದ ಪ್ರವಾಸಕ್ಕೆಂದು ಅಂಕೋಲಾ ಕಡೆಗೆ ಹೊರಟಿತ್ತು. ಆದ್ರೆ, ದುರದೃಷ್ಟವಶಾತ್ ಅರಬೈಲ್ ಘಟ್ಟ ಬಳಿ ಲಾರಿಯೊಂದು ಓವರಟೇಕ್ ಮಾಡುವ ಭರದಲ್ಲಿ ಎದುರಿನ ಕಾರಿಗೆ ಗುದ್ದಿದೆ. ಲಾರಿ ಗುದ್ದಿದ ರಭಸಕ್ಕೆ ಕಾರು ನುಜ್ಜಗುಜ್ಜಾಗಿದೆ. ಘಟನೆಯಲ್ಲಿ ಪತಿ, ಪತ್ನಿ ಹಾಗೂ ಮಗು ಸಹ ಮೃತಪಟ್ಟಿದೆ. ಇನ್ನು
ಮೃತ ವೆಂಕಟೇಶನ ಸಹೋದರ ಶ್ರೀಕಾಂತ ರೆಡ್ಡಿಗೂ ಸಹ ಎರಡು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವೇಗವಾಗಿ ಕಾರಿಗೆ ಗುದ್ದಿದ ಲಾರಿ ಚಾಲಕ ಪ್ರಶಾಂತ ಕುಂಬಾರ ವಿಜಯಪುರ ಮೂಲದವನಾಗಿದ್ದು, ಇದೀಗ ಪ್ರಶಾಂತ ಕುಂಬಾರ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 6:08 pm, Wed, 19 February 25