ಉತ್ತರ ಕನ್ನಡ: ಟೋಲ್ ಸಿಬ್ಬಂದಿಯಿಂದ ಪ್ರಯಾಣಿಕರ ಮೇಲೆ ಹಲ್ಲೆ ಪ್ರಕರಣ; ಕೇಸ್ ದಾಖಲಿಸಿಕೊಳ್ಳಲು ಕುಮಟಾ ಪೊಲೀಸರ ಮಿನಾಮೇಷ ಆರೋಪ
ಫೆ.16 ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹೊಳೆಗದ್ದೆ ಟೋಲ್ನಲ್ಲಿ ಟೋಲ್ ಸಿಬ್ಬಂದಿ ಸೇರಿಕೊಂಡು ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ್ದು 20 ಕ್ಕೂ ಹೆಚ್ಚು ಜನ. ಆದರೆ, ಪ್ರಕರಣ ದಾಖಲಾಗಿದ್ದು ಮಾತ್ರ ಕೇವಲ ನಾಲ್ಕು ಜನರ ಮೇಲೆ, ಹೀಗಾಗಿ ಪೊಲೀಸರಿಂದ ಅಪರಾಧಿಗಳ ರಕ್ಷಣೆ ಆಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರವಿತಾ ಆಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
ಉತ್ತರ ಕನ್ನಡ, ಮಾ.01: ಕುಮಟಾ ಹೊಳಗದ್ದೆ ಟೋಲ್‌ಗೇಟ್(Kumata Holegadde toll)ನಲ್ಲಿ ಮಂಗಳೂರಿನ ಕುಟುಂಬದ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಿಳೆಯರ ಬಟ್ಟೆ ಹರಿದು ಹಲ್ಲೆ ಮಾಡಿದ್ರೂ, ಪ್ರಕರಣ ದಾಖಲಿಸಿಕೊಳ್ಳಲು ಕುಮಟಾ(Kumta) ಪೊಲೀಸರು ಮಿನಾಮೇಷ ಮಾಡುತ್ತಿದ್ದಾರೆ. ಹಲ್ಲೆ ಮಾಡಿದ್ದು 20 ಕ್ಕೂ ಹೆಚ್ಚು ಜನ, ಆದರೆ, ಪ್ರಕರಣ ದಾಖಲಾಗಿದ್ದು ಮಾತ್ರ ಕೇವಲ ನಾಲ್ಕು ಜನರ ಮೇಲೆ, ಹೀಗಾಗಿ ಪೊಲೀಸರಿಂದ ಅಪರಾಧಿಗಳ ರಕ್ಷಣೆ ಆಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರವಿತಾ ಆಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
ಅಪರಾಧಿಗಳನ್ನ ಪೊಲೀಸ್ರೆ ರಕ್ಷಿಸಿದ್ರೆ, ನ್ಯಾಯಕ್ಕಾಗಿ ಎಲ್ಲಿ ಹೋಗೊದು-ಸಂತ್ರಸ್ಥ ಮುಜೀಬ್
ಪೊಲೀಸರೇ ಅಪರಾಧಿಗಳನ್ನು ರಕ್ಷಿಸಿದ್ರೆ ನ್ಯಾಯಕ್ಕಾಗಿ ಎಲ್ಲಿ ಹೋಗೊದೆಂದು ಸಂತ್ರಸ್ತ ಮುಜೀಬ್ ಅಳಲು ತೊಡಿಕೊಂಡಿದ್ದಾರೆ. ಹಲ್ಲೆ ನಡೆಸಿದ ಟೋಲ್ ಗೇಟ್ ಸಿಬ್ಬಂದಿ ಹಾಗೂ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂತ್ರಸ್ತ ಮುಜೀಬ್ ಹಾಗೂ ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ. ಹೊಳೆಗದ್ದೆ ಟೋಲ್‌ಗೇಟ್‌ನವರು, ಮಹಿಳೆಯರು, ಪುರುಷರೆನ್ನದೇ ಹಲ್ಲೆ ನಡೆಸಿದ್ದಾರೆ. ಅಪ್ರಾಪ್ತ ಬಾಲಕಿಯ ಬಟ್ಟೆ ಎಳೆದು, ದೌರ್ಜನ್ಯ ನಡೆಸಿ ಆಕೆಯ ಮೈಮೇಲೆ ಇದ್ದ ಚಿನ್ನದ ಆಭರಣಗಳನ್ನು ಕೂಡ ಎಳೆದಾಡಿದ್ದರು.
ಇದನ್ನೂ ಓದಿ:ಉತ್ತರ ಕನ್ನಡ: ಟೋಲ್ ಸಿಬ್ಬಂದಿಯಿಂದ ಪ್ರಯಾಣಿಕರ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು
ಘಟನೆ ವಿವರ
ಕಳೆದ ತಿಂಗಳ ಫೆ.16 ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹೊಳೆಗದ್ದೆ ಟೋಲ್ನಲ್ಲಿ ಟೋಲ್ ಸಿಬ್ಬಂದಿ ಸೇರಿಕೊಂಡು ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿತ್ತು.ಮಂಗಳೂರು ನಗರದ ಪಲ್ನೀರಿನ ಮುಜೀಜ್ ಎಂಬಾತನ ಕುಟುಂಬ, ಮಂಗಳೂರಿನಿಂದ ಕುಮಟಾ ಮಾರ್ಗವಾಗಿ ಗದಗದ ಲಕ್ಷ್ಮೀಶ್ವರಕ್ಕೆ ಹೋಗುತಿದ್ದರು. ಈ ವೇಳೆ ಕುಮಟಾ ಟೋಲ್ ಗೇಟ್ನಲ್ಲಿ ಫಾಸ್ಟ್ ಟ್ಯಾಗ್ನಿಂದ ಹಣ ಕಡಿತವಾಗದೇ ಸಮಸ್ಯೆಯಾದಾಗ, ಟೋಲ್ ಸಿಬ್ಬಂದಿಗಳಾದ ಕಿರಣ್, ಸತೀಶ್ ಹಾಗೂ ಮಂಜುನಾಥ್ ಎಂಬುವವರಿಂದ ಗಲಾಟೆಯಾಗಿದ್ದು, ಮಾತಿಗೆ ಮಾತು ಬೆಳೆದು ಸಹ ಸಿಬ್ಬಂದಿ ಮಜೀಜ್ ಸೈಯದ್ ರವರ ಕಾರಿನ ಗಾಜು ಪುಡಿ ಮಾಡಿದ್ದಲ್ಲದೆ, ಮಹಿಳೆಯರ ಮೇಲೆ ಸಹ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಆಯಿಷಾ, ಫಾತೀಮಾ, ಮಜೀಜ್ ಸೈಯದ್ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ