AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರಸಿಯಲ್ಲಿ ಉದ್ಯಮಿ ಮನೆಗೆ ನುಗ್ಗಿ 5 ಲಕ್ಕಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅಯೋಧ್ಯಾ ಕಾಲೋನಿಯಲ್ಲಿನ ಮನೆಯೊಂದರಲ್ಲಿ ಕಳ್ಳತನ ನಡೆದಿದೆ. ಹೊಲಿಗೆ ಮಷೀನ್ ಡೀಲರ್ ಆಗಿದ್ದ ಆಶೀಶ್ ಲೋಖಂಡೆ ಅವರ ಮನೆಗೆ ನಿನ್ನೆ(ಆ.23) ರಾತ್ರಿ 11 ಗಂಟೆಯಿಂದ ಇಂದು(ಆ.24) ಬೆಳಗ್ಗೆ 6 ಗಂಟೆಯ ನಡುವೆ ಕಳ್ಳರು ಕೈಚಳಕ ತೋರಿಸಿದ್ದು, ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿರಸಿಯಲ್ಲಿ ಉದ್ಯಮಿ ಮನೆಗೆ ನುಗ್ಗಿ 5 ಲಕ್ಕಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು
ಶಿರಸಿಯಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ಕಳ್ಳತನ
ವಿನಾಯಕ ಬಡಿಗೇರ್​
| Updated By: ಕಿರಣ್ ಹನುಮಂತ್​ ಮಾದಾರ್|

Updated on: Aug 24, 2023 | 8:30 PM

Share

ಉತ್ತರ ಕನ್ನಡ, ಆ.24: ಶಿರಸಿಯಲ್ಲಿ ಉದ್ಯಮಿ ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ ಘಟನೆ ಉತ್ತರ ಕನ್ನಡ (Uttara kannada) ಜಿಲ್ಲೆಯ ಶಿರಸಿಯ ಅಯೋಧ್ಯಾ ಕಾಲೋನಿಯಲ್ಲಿ ನಡೆದಿದೆ. ಹೊಲಿಗೆ ಮಷೀನ್ ಡೀಲರ್ ಆಗಿದ್ದ ಆಶೀಶ್ ಲೋಖಂಡೆ ಅವರ ಮನೆಗೆ ನಿನ್ನೆ(ಆ.23) ರಾತ್ರಿ 11 ಗಂಟೆಯಿಂದ ಇಂದು(ಆ.24) ಬೆಳಗ್ಗೆ 6 ಗಂಟೆಯ ನಡುವೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಇನ್ನು ನಗದು, ಚಿನ್ನಾಭರಣ ಸೇರಿ ಒಟ್ಟು 5ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರನ್ನು ಹಿಡಿಯಲು ಬಲೆ ಬಿಸಿದ್ದಾರೆ. ಬೆರಳಚ್ಚು ತಂಡ ಹಾಗೂ ಶ್ವಾನದಳದಿಂದ ಪರಿಶೀಲನೆ

ಇನ್ನು ಮಲಗುವ ಕೋಣೆಯ ಕಿಟಕಿಯ ಸರಳುಗಳನ್ನು ಕಟ್ ಮಾಡಿ ಒಳಹೊಕ್ಕ ಕಳ್ಳರು, ದೇವರ ಕೋಣೆಗೆ ನುಗ್ಗಿ, ದೇವರ ಮೇಲಿದ್ದ 1 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರದ ನೆಕ್ಲೇಸ್, 2 ವರೆ ಲಕ್ಷ ಮೌಲ್ಯದ ಲಾಕೆಟ್ ಇರುವ ರೋಪ್ ಚೈನ್, 86 ಸಾವಿರ ಮೌಲ್ಯದ ಬಂಗಾರದ ಬಳೆಗಳು, 20 ಸಾವಿರದ ಬೆಳ್ಳಿ ತಂಬಿಗೆ, 25 ಸಾವಿರ ಮೌಲ್ಯದ ಆರತಿ ಸೆಟ್ ಸೇರಿ ನಗದು ಕಳ್ಳತನ ಮಾಡಿದ್ದಾರೆ. ಬಳಿಕ ಮನೆಯ ಹಿಂದಿನ ಬಾಗಿಲಿನ ಕೀಯನ್ನು ಕಟ್ ಮಾಡಿ ಪರಾರಿಯಾಗಿದ್ದು, ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಬೆರಳಚ್ಚು ತಂಡ ಹಾಗೂ ಶ್ವಾನದಳ ಆಗಮಿಸಿದ್ದು, ಮನೆಯೊಳಗೆ ಹಾಗೂ ಸುತ್ತಮುತ್ತಲೂ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಬೇಗೂರಿನ ಎಲೆಕ್ಟ್ರಿಕ್ ಪ್ರಾಡಕ್ಟ್ಸ್ ಪಿವಿಟಿ ಲಿಮಿಟೆಡ್​ನಲ್ಲಿ ಕಳ್ಳತನ; ಲಕ್ಷಾಂತರ ರೂ. ಬೆಲೆ ಬಾಳುವ ಕಾಪರ್ ವಸ್ತು, ಸಿಸಿ ಟಿವಿ ದೂಚಿದ ಖದೀಮರು

ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ

ಹಾಸನ: ಕಳೆದ ಒಂದು ತಿಂಗಳ ಅವಧಿಯಲ್ಲಿ ನಾಯಿ, ಕುರಿ, ಕರು ಸೇರಿದಂತೆ ಹತ್ತುಕ್ಕೂ ಹೆಚ್ಚು ಸಾಕು ಪ್ರಾಣಿಗಳು ಚಿರತೆ ದಾಳಿಗೆ ಬಲಿಯಾಗಿದ್ದವು. ಈ ಹಿನ್ನಲೆ ಅವುಗಳನ್ನು ಸೆರೆ ಹಿಡಿಯುವಂತೆ ರೈತರು ಒತ್ತಾಯ ಮಾಡಿದ್ದರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬೋನು ಇಟ್ಟಿದ್ದರು. ಇದೀಗ ಚಿರತೆ ಬೋನಿಗೆ ಬಿದ್ದಿದ್ದು, ಸ್ಥಳಕ್ಕೆ ವನ್ಯಜೀವಿ ವೈದ್ಯರು ಅಗಮಿಸಿ ತಪಾಸಣೆ ನಡೆಸಿದ್ದಾರೆ. ಜೊತೆಗೆ ಬೋನಿಗೆ ಬಿದ್ದಿರುವ ಚಿರತೆ ನೋಡಲು ಜನರು ಮುಗಿಬಿದ್ದಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ