ಉತ್ತರ ಕನ್ನಡ: ಗಾಂಜಾ ಮಾರಾಟ ಮಾಡುತ್ತಿದ್ದ ಅರ್ಚಕನ ಬಂಧನ

Uttara Kannada: ಆರೋಪಿಯ ಅಡುಗೆ ಕೊಣೆಗೆ ಹೊಕ್ಕಿದ್ದ ಸಿಬ್ಬಂದಿ, ಅಡುಗೆ ಮನೆಯ ಗ್ಯಾಸ್ ಕಟ್ಟೆಯ ಕೆಳಗಡೆ ಗಾಂಜಾ ಬಚ್ಚಿಟ್ಟಿದ್ದನ್ನು ಪತ್ತೆಹಚ್ಚಿದ್ದರು. 140 ಗ್ರಾಂ ಗಾಂಜಾ ಪ್ಯಾಕೇಟನ್ನು ಅಡುಗೆ ಮನೆಯ ಡಬ್ಬಾದಲ್ಲಿ ಪ್ಯಾಸ್ಟಿಕ್ ಚೀಲದಲ್ಲಿ ತುಂಬಿಡಲಾಗಿತ್ತು.

ಉತ್ತರ ಕನ್ನಡ: ಗಾಂಜಾ ಮಾರಾಟ ಮಾಡುತ್ತಿದ್ದ ಅರ್ಚಕನ ಬಂಧನ
ಗಾಂಜಾ ಮಾರಾಟ ಮಾಡುತ್ತಿದ್ದ ಅರ್ಚಕನ ಬಂಧನ
Edited By:

Updated on: Sep 30, 2021 | 4:34 PM

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕುಡಗುಂದ ಎಂಬಲ್ಲಿನ ಅರ್ಚಕರು ಒಬ್ಬರು ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣ ಬಯಲಾಗಿದೆ. ಇಲ್ಲಿನ ಮಾಯ್ನೇರಮನೆಯ ಚಂದ್ರಶೇಖರ ಭಟ್ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಸೆರೆಯಾಗಿದ್ದಾರೆ. ಅರ್ಚಕ ಚಂದ್ರಶೇಖರ್ ಭಟ್ ಮನೆಯಲ್ಲಿ ಗಾಂಜಾ ಪತ್ತೆಯಾಗಿದೆ. ಅಬಕಾರಿ ಅಧಿಕಾರಿಗಳ ದಾಳಿ ವೇಳೆ ಗಾಂಜಾ ಪತ್ತೆಯಾಗಿದೆ. ಅಡುಗೆ ಮನೆಯಲ್ಲಿ ಅಡಗಿಸಿಟ್ಟಿದ್ದ ಗಾಂಜಾ ಸಿಕ್ಕಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಿದ್ದಾಪುರ ತಾಲೂಕಿನ ಮಾಯ್ನೇರ್‌ಮನೆ ಕುಗ್ರಾಮವಾಗಿದೆ. ಇಲ್ಲಿನ ಚಂದ್ರಶೇಖರ್ ಭಟ್ ಸ್ಥಳೀಯ ದೇವಸ್ಥಾನದ ಪೂಜೆ ಮಾಡಿಕೊಂಡಿದ್ದರು. ಗಾಂಜಾ ವ್ಯವಹಾರ ನಡೆಯುತ್ತಿರುವ ಬಗ್ಗೆ ಮಾಹಿತಿ ಮಾಹಿತಿ ಮೇರೆಗೆ ಅರ್ಚಕರ ಮನೆಗೆ ಶಿರಸಿಯ ಅಬಕಾರಿ ಇಲಾಖೆ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿದ್ದರು. ಖಚಿತ ಮಾಹಿತಿ ಪಡೆದ ಅಬಕಾರಿ ಡಿ.ಎಸ್.ಪಿ. ಮಹೇಂದ್ರ ನಾಯ್ಕ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ಸಿಬ್ಬಂದಿ ಆರ್.ವಿ. ತಳೇಕರ್, ಎನ್.ಕೆ. ವೈದ್ಯ, ಲೋಕೇಶ್ವರ ಬೋರ್ಕರ್, ಗಜಾನನ ನಾಯ್ಕ, ಅಬ್ದುಲ್ ಮಕಾನದಾರ್, ಈರಣ್ಣ ಗಾಳಿ ಮತ್ತು ಧ್ರುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಅಧಿಕಾರಿಗಳು ಮನೆ ಶೋಧಕ್ಕಿಳಿದಾಗ ಏನೇನೋ ದಡಬಡಾಯಿಸಿದ ಆರೋಪಿ ಬಳಿಕ ಶೋಧಕ್ಕೆ ಅನುಮತಿ ನೀಡಿದ್ದರು. ಎಲ್ಲಿಯೂ ಗಾಂಜಾ ಸಿಗದೇ ಹೋಗಿತ್ತು. ಕೊನೆಗೆ ಆರೋಪಿಯ ಅಡುಗೆ ಕೊಣೆಗೆ ಹೊಕ್ಕಿದ್ದ ಸಿಬ್ಬಂದಿ, ಅಡುಗೆ ಮನೆಯ ಗ್ಯಾಸ್ ಕಟ್ಟೆಯ ಕೆಳಗಡೆ ಗಾಂಜಾ ಬಚ್ಚಿಟ್ಟಿದ್ದನ್ನು ಪತ್ತೆಹಚ್ಚಿದ್ದರು. 140 ಗ್ರಾಂ ಗಾಂಜಾ ಪ್ಯಾಕೇಟನ್ನು ಅಡುಗೆ ಮನೆಯ ಡಬ್ಬಾದಲ್ಲಿ ಪ್ಯಾಸ್ಟಿಕ್ ಚೀಲದಲ್ಲಿ ತುಂಬಿಡಲಾಗಿತ್ತು.

ಆರೋಪಿ ಚಂದ್ರಶೇಖರ್ ಭಟ್ ಈ ಹಿಂದಿನಿದಲೂ ಗಾಂಜಾ ಮಾರಾಟ ಮಾಡುವ ಬಗ್ಗೆ ಅನುಮಾನವಿತ್ತು. ಮನೆಯ ಬಳಿ ಕೆಲವು ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡುವ ಮಾಹಿತಿ ಕೂಡಾ ಲಭಿಸಿತ್ತು. ಕೊನೆಗೆ ಖಚಿತ ಮಾಹಿತಿ ಪಡೆದು ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದರು. ಅಧಿಕಾರಿಗಳ ದಾಳಿ ನಡೆಯುವ ದಿನವೂ ಮೂರ್ನಾಲ್ಕು ಕಾಲೇಜು ವಿದ್ಯಾರ್ಥಿಗಳು ಗಾಂಜಾ ಖರೀದಿಗೆ ಬಂದಿದ್ದರು ಎನ್ನಲಾಗಿದೆ. ಆದರೆ, ಅಧಿಕಾರಿಗಳ ಜೀಪ್ ಕಂಡು ವಿದ್ಯಾರ್ಥಿಗಳು ಪರಾರಿಯಾದ್ರು ಎಂದು ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಈಗಲ್ಟನ್ ರೆಸಾರ್ಟ್​ನಲ್ಲಿ ಗಾಂಜಾ ಬೆಳೆಯುತ್ತಿದ್ದ ಇರಾನ್ ಯುವಕನಿಗಿತ್ತು ಶಿವನ ಮೇಲೆ ಪ್ರೀತಿ, ಬಯಲಾಗಿದೆ ಅಚ್ಚರಿಯ ಸಂಗತಿ

ಇದನ್ನೂ ಓದಿ: ಟ್ರಕ್‌ನಲ್ಲಿ ಸಾಗಿಸುತ್ತಿದ್ದ 3,400 ಕೆಜಿ ಗಾಂಜಾ ಜಪ್ತಿ; 21 ಕೋಟಿ ರೂ. ಮೌಲ್ಯದ ಅಮಲು ಪದಾರ್ಥ ವಶಕ್ಕೆ

TV9 Web

TV9 Kannada

Read More
Loading...
Unable to load recommendations.
Follow Us