ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ: ಕಾರ್ಮಿಕರಿಂದ ಮಲಗುಂಡಿ ಸ್ವಚ್ಛಗೊಳಿಸಿದ ಪ್ರಕರಣ ಬಹಿರಂಗ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಭಗತ್ ಸಿಂಗ್ ನಗರದಲ್ಲಿ ಜನವರಿ 6ರಂದು ಕಾರ್ಮಿಕರಿಂದ ಮಲಗುಂಡಿ ಸ್ವಚ್ಛಗೊಳಿಸಿರುವಂತಹ ಅಮಾನವೀಯ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗುತ್ತಿಗೆದಾರ ಬೈಂದೂರಗೆ ಸಂಬಂಧಿಸಿದ ಹಳೆಯ ಕಟ್ಟಡದ ಶೌಚಗುಂಡಿಯನ್ನು ಇಬ್ಬರು ಕಾರ್ಮಿಕರು ಸ್ವಚ್ಛಗೊಳಿಸಿದ್ದಾರೆ. ಈವರೆಗೂ ನಗರಸಭೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.
ಕಾರವಾರ, ಜನವರಿ 08: ಕಾರ್ಮಿಕರಿಂದ ಮಲಗುಂಡಿ ಸ್ವಚ್ಛಗೊಳಿಸಿರುವಂತಹ ಅಮಾನವೀಯ ಘಟನೆ ಒಂದು ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯ ಭಗತ್ ಸಿಂಗ್ ನಗರದಲ್ಲಿ ಜನವರಿ 6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗುತ್ತಿಗೆದಾರ ಬೈಂದೂರಗೆ ಸಂಬಂಧಿಸಿದ ಹಳೆಯ ಕಟ್ಟಡದ ಶೌಚಗುಂಡಿ ಸ್ವಚ್ಛಗೊಳಿಸಲು ಇಬ್ಬರು ಕಾರ್ಮಿಕರ ಬಳಕೆ ಮಾಡಲಾಗಿದೆ. ಮಲ ತುಂಬಿದ್ದ ಬುಟ್ಟಿ ತಲೆ ಮೇಲೆ ಹೊತ್ತೊಯ್ದ ಕಾರ್ಮಿಕರು 100 ಮೀಟರ್ ಸಾಗಿ ಗೂಡ್ಸ್ ವಾಹನಕ್ಕೆ ಹಾಕಿದಿದ್ದಾರೆ. ಈವರೆಗೂ ನಗರಸಭೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.
ಶೌಚಾಲಯ ಕ್ಲೀನಿಂಗ್ ಮಾಡಿದ ವಿದ್ಯಾರ್ಥಿಗಳು
ಇತ್ತೀಚೆಗೆ ಶಿವಮೊಗ್ಗದಲ್ಲಿ ಶಿಕ್ಷಣ ಸಚಿವರ ಕ್ಷೇತ್ರದಲ್ಲಿ ಸರಕಾರಿ ಶಾಲೆಯ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸಿರುವ ಅಮಾನವೀಯ ಘಟನೆ ನಡೆದಿತ್ತು. ಭದ್ರಾವತಿ ತಾಲೂಕಿನ ಗುಡ್ಡದ ನೇರಲಕೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶೌಚಾಯಲ ಕ್ಲೀನಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಶಾಲಾ ಮಕ್ಕಳೇ ಟಾಯ್ಲೆಟ್ ಕ್ಲೀನಿಂಗ್ ಮಾಡುತ್ತಿದ್ದರು. ಈ ವರದಿಯನ್ನು ಟಿವಿ9 ಶಾಲೆಯಿಂದಲೇ ವರದಿ ಮಾಡಿತು. ಟಿವಿ9 ಮುಂದೆ ಟಾಯ್ಲೇಟ್ ಕ್ಲೀನ್ ಮಾಡಿದ ಮಕ್ಕಳು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಟಿವಿ9 ಇಂಪ್ಯಾಕ್ಟ್: ಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಪ್ರಕರಣ; ಶಿಕ್ಷಕ ಅಮಾನತ್ತು
ಶಾಲೆಯ ಮುಖ್ಯೋಪಾದ್ಯಯ ಶಂಕ್ರಪ್ಪ ಅವರು ಬಲವಂತದಿಂದ ಶಾಲೆ ಮತ್ತು ಟಾಯ್ಲೇಟ್ ಕ್ಲೀನ್ ಮಾಡಲು ಸೂಚನೆ ನೀಡುತ್ತಾರೆ. ಕಳೆದ ಎರಡು ವರ್ಷ ಹಿಂದೆ ಆಯಾ ಕೆಲಸ ಮಾಡುತ್ತಿದ್ದ ಗೀತಮ್ಮಳನ್ನು ಭದ್ರಾವತಿ ಬಿಇಓ ಕಚೇರಿಗೆ ವರ್ಗಾವಣೆ ಮಾಡಿದ್ದಾರೆ. ಇದರ ಬಳಿಕ ಶಾಲೆಯಲ್ಲಿ ಸ್ವಚ್ಛತೆ ಸಮಸ್ಯೆ ಎದುರಾಗಿದೆ. ಶಾಲೆಯಲ್ಲಿ 47 ಮಕ್ಕಳಿದ್ದಾರೆ. 1 ರಿಂದ 7 ನೇ ಕ್ಲಾಸ್ ವರೆಗೆ ವ್ಯಾಸ್ಯಾಂಗ ಮಾಡುತ್ತಿದ್ದಾರೆ. 23 ಹೆಣ್ಣು ಮಕ್ಕಳು ಮತ್ತು 24 ಗಂಡು ಮಕ್ಕಳಿದ್ಧಾರೆ.
ಇದನ್ನೂ ಓದಿ: ಬೆಂಗಳೂರು ಆಯ್ತು ಈಗ ಶಿವಮೊಗ್ಗ: ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್
ಈ ಮಕ್ಕಳಿಗೆ ಎರಡು ಶೌಚಾಲಯಗಳಿವೆ. ಈ ಶೌಚಾಲಯಗಳನ್ನು ಅನೇಕ ತಿಂಗಳಿನಿಂದ ವಿದ್ಯಾರ್ಥಿಗಳಿಂದಲೇ ಶಾಲಾ ಮುಖ್ಯೋಪಾದ್ಯಯರು ಮತ್ತು ಶಿಕ್ಷಕರು ಮಾಡಿಸುತ್ತಿದ್ದರಂತೆ. ಮಕ್ಕಳು ಪೋಷಕರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೋಷಕರು ಮಕ್ಕಳು ಕ್ಲೀನಿಂಗ್ ಮಾಡುತ್ತಿರುವ ವಿಡಿಯೋ ಮಾಡಿ ಶಿಕ್ಷನ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರಂತೆ. ಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಕುರಿತು ಪೋಷಕರು ಮತ್ತು ಮಕ್ಕಳು ಟಿವಿ9 ಮುಂದೆ ಸಮಸ್ಯೆಯನ್ನು ಹೊರಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.