ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಕನಸು ನನಸಾಗಲು ಬೇಕಿನ್ನೆಷ್ಟು ಕಾಲ?
ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಹುಬ್ಬಳ್ಳಿಯಲ್ಲಿ ಏಮ್ಸ್ ಸ್ಥಾಪಿಸಲು ಕನಸು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಕನಸೇನಾದರೂ ಫಲಿಸಿದಲ್ಲಿ ಉತ್ತರ ಕನ್ನಡಕ್ಕೆ ಈಬಾರಿಯೂ ಮಲ್ಟಿ ಸ್ಪೆಶಲ್ ಆಸ್ಪತ್ರೆ ಹೋರಾಟಕ್ಕೆ ಹಿನ್ನೆಡೆ ಆಗುವ ಸಾಧ್ಯತೆಯೂ ಇದೆ.
ಕಾರವಾರ: ಮಲೆನಾಡು, ಕರಾವಳಿ ಮತ್ತು ಅರೆ ಬಯಲುಸೀಮೆಯನ್ನು ಒಳಗೊಂಡಿರುವ ವಿಶಾಲ ಜಿಲ್ಲೆ ಉತ್ತರ ಕನ್ನಡಕ್ಕೊಂದು ತುರ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆನ್ನುವ ಆಸೆ ಮತ್ತೊಮ್ಮೆ ಚಿಗುರೊಡೆದಿದೆ. ಇತ್ತೀಚಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಕಾರ್ಡಿಯೋಲಜಿ ವಿಭಾಗದ ಮುಖ್ಯಸ್ಥರಾದ ಡಾ.ಪದ್ಮನಾಭ ಕಾಮತ್ ಅವರು ಸಾಮಾಜಿಕ ಜಾಲತಾಣದ ಖಾತೆಯಲ್ಲಿ, ಉತ್ತರ ಕನ್ನಡ ಜಿಲ್ಲೆಗೊಂದು ತುರ್ತು ಆಸ್ಪತ್ರೆಯ ಅಗತ್ಯತೆಯಿದೆ. ಆದರೆ ಇದಕ್ಕೆ ನನ್ನೊಬ್ಬನ ಪ್ರಯತ್ನ ಸಾಲುವುದಿಲ್ಲ. ಜನರ ಬೆಂಬಲವೂ ಬೇಕಿದೆ ಎಂದು ಬರೆದುಕೊಂಡಿದ್ದಾರೆ. ಜತೆಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಉತ್ತರ ಕನ್ನಡಕ್ಕೊಂದು ಏಮ್ಸ್ ಅಗತ್ಯತೆಯಿದೆ ಎಂದು ಹಂಚಿಕೊಂಡಿದ್ದಾರೆ.
ಈಹಿಂದೆ ಕುಮಟಾ ಶಾಸಕ ದಿನಕರ ಶೆಟ್ಟಿ ಉದ್ಯಮಿ ಬಿ.ಆರ್.ಶೆಟ್ಟಿಯವರ ಜತೆ ಮಾತುಕತೆ ನಡೆಸಿ ಖಾಸಗಿ ಆಸ್ಪತ್ರೆ ನಿರ್ಮಾಣದ ಕುರಿತು ಚರ್ಚಿಸಿದ್ದರು. ಕುಮಟಾ ತಾಲೂಕಿನ ಮಿರ್ಜಾನ್ ಬಳಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಕೂಡ ಬಹುತೇಕ ಖಚಿತಪಡಿಸಿದ್ದರು. ಹೀಗಾಗಿ ಜನ ಜಿಲ್ಲೆಯಲ್ಲೊಂದು ತುರ್ತು ಆಸ್ಪತ್ರೆಯಾಗಲಿದೆ ಎಂಬ ಕನಸು ಕಂಡಿದ್ದರು. ಆದರೆ ಬಿ.ಆರ್.ಶೆಟ್ಟಿಯವರ ಉದ್ಯಮ ಸಾಮ್ರಾಜ್ಯದ ಕುಸಿತದಿಂದ ಈ ಬೆಳವಣಿಗೆ ಅಲ್ಲಿಗೇ ನಿಂತಿತ್ತು.
ಈಹಿಂದೆ ಉತ್ತರ ಕನ್ನಡಕ್ಕೆ ಒಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬೇಕು ಎಂದು #WewantsSuperSpecialityHospitalInUttaraKannada ಎಂಬ ಹ್ಯಾಶ್‌ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಅಭಿಯಾನ ನಡೆಸಿದ್ದರು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರ ಗಮನ ಕೂಡ ಸೆಳೆದಿದ್ದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಗಮನ ಸೆಳೆಯಲು ಸಹ ಅವರ ಅಭಿಯಾನ ಯಶಸ್ವಿಯಾಗಿತ್ತು. ಕುಮಾರಸ್ವಾಮಿಯವರು ಸಹ ಭರವಸೆ ನೀಡಿದ್ದರು,
ಇದೀಗ ಉತ್ತರ ಕನ್ನಡ ಜಿಲ್ಲೆಗೆ ಏಮ್ಸ್ ಬೇಕೆಂದು ಆಗ್ರಹಿಸಿರುವ ಡಾ.ಕಾಮತ್ ಅವರನ್ನು ಶಾಸಕ ದಿನಕರ ಶೆಟ್ಟಿ ಭೇಟಿಯಾಗಿ ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಪಡೆದುಕೊಳ್ಳುವಲ್ಲಿ ಸಹಕಾರ, ಮಾರ್ಗದರ್ಶನ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಹುಬ್ಬಳ್ಳಿಯಲ್ಲಿ ಏಮ್ಸ್ ಸ್ಥಾಪಿಸಲು ಕನಸು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಕನಸೇನಾದರೂ ಫಲಿಸಿದಲ್ಲಿ ಉತ್ತರ ಕನ್ನಡಕ್ಕೆ ಈಬಾರಿಯೂ ಮಲ್ಟಿ ಸ್ಪೆಶಲ್ ಆಸ್ಪತ್ರೆ ಹೋರಾಟಕ್ಕೆ ಹಿನ್ನೆಡೆ ಆಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ:
Uttara Kannada Flood: ಉತ್ತರ ಕನ್ನಡ: ಪ್ರವಾಹ, ಭೂಕುಸಿತದಿಂದ 737 ಕೋಟಿ ಮೌಲ್ಯದ ಮೂಲಭೂತ ಸೌಕರ್ಯಕ್ಕೆ ಹಾನಿ
Uttara Kannada Flood: ಚಿತ್ರನೋಟ: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟ ಭೂಕುಸಿತಕ್ಕೊಳಗಾದ ಕಳಚೆ ಗ್ರಾಮ ಹೇಗಿದೆ?
(Uttara Kannada people demand Super Speciality Hospital AIMS)