ಶಿರೂರು ಗುಡ್ಡ ದುರಂತದಲ್ಲಿ ಅನಾಥವಾಗಿದ್ದ ಶ್ವಾನ ಮ್ಯಾರಥಾನ್​​ನಲ್ಲಿ ಓಟ: ಬೆಳ್ಳಿ ಪದಕ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 09, 2025 | 5:40 PM

ಕೊಡಗು ಜಿಲ್ಲೆಯ ಕಾಪರ್ ಹೆಸರಿನ ಶ್ವಾನ ರಾಷ್ಟ್ರಮಟ್ಟದ ಪೊಲೀಸ್ ಮೀಟ್‌ ಸ್ಪರ್ಧೆಯಲ್ಲಿ ಘಟಾನುಘಟಿ ತಂಡಗಳನ್ನ ಸೋಲಿಸುವ ಮೂಲಕ ಬೆಳ್ಳಿ ಪದಕ ಗೆದ್ದು ಬೀಗಿದೆ. ಇದೇ ರೀತಿಯಾಗಿ ಇನ್ನೊಂದೆಡೆ ಶಿರೂರು ಗುಡ್ಡ ಕುಸಿತದಲ್ಲಿ ತನ್ನ ಮಾಲೀಕನನ್ನು ಕಳೆದುಕೊಂಡಿದ್ದ ಶ್ವಾನ ಇಂದು ಉತ್ತರ ಕನ್ನಡ ಪೊಲೀಸರ ಮ್ಯಾರಥಾನ್‌ನಲ್ಲಿ 5 ಕಿಮೀ ಓಡಿ ಬೆಳ್ಳಿ ಪದಕ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಶಿರೂರು ಗುಡ್ಡ ದುರಂತದಲ್ಲಿ ಅನಾಥವಾಗಿದ್ದ ಶ್ವಾನ ಮ್ಯಾರಥಾನ್​​ನಲ್ಲಿ ಓಟ: ಬೆಳ್ಳಿ ಪದಕ
ಶಿರೂರು ಗುಡ್ಡ ದುರಂತದಲ್ಲಿ ಅನಾಥವಾಗಿದ್ದ ಶ್ವಾನ ಮ್ಯಾರಥಾನ್​​ನಲ್ಲಿ ಓಟ: ಬೆಳ್ಳಿ ಪದಕ
Follow us on

ಉತ್ತರ ಕನ್ನಡ, ಮಾರ್ಚ್​ 09: ಶಿರೂರು ಗುಡ್ಡ ಕುಸಿತ (Shiruru Hill Collapse) ದುರಂತ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಈ ಘಟನೆಯಲ್ಲಿ ಅದೊಂದು ಶ್ವಾನ (dog) ತಮ್ಮ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿತ್ತು. ಇದರ ವಿಡಿಯೋ ಕೂಡ ಸಾಕಷ್ಟು ವೈರಲ್​ ಆಗಿತ್ತು. ಆದರೆ ಇದೀಗ ಈ ಶ್ವಾನ ಮತ್ತೆ ಎಲ್ಲರ ಗಮನ ಸೆಳೆಯುತ್ತಿದೆ. ಉತ್ತರ ಕನ್ನಡ ಪೊಲೀಸ್ ಆಯೋಜಿಸಿದ್ದ ಮ್ಯಾರಥಾನ್​​ನಲ್ಲಿ ಐದು ಕಿ.ಮೀ ಓಡುವ  ಮೂಲಕ ಅಚ್ಚರಿಗೊಳಿಸಿದ್ದು,  ಬೆಳ್ಳಿ ಪದಕ ಪಡೆದುಕೊಂಡಿದೆ. ಶಾಸಕ ಸತೀಶ್ ಸೈಲ್ ಶ್ವಾನಕ್ಕೆ ಪದಕ ತೊಡಿಸಿದರು.

ಜುಲೈ 16 ರಂದು ನಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಲಕ್ಷ್ಮಣ್ ನಾಯ್ಕ ಕುಟುಂಬ ಸೇರಿ ಹನ್ನೊಂದು ಜನರು ಮೃತಪಟ್ಟಿದ್ದರು. ಈ ವೇಳೆ ಮಾಲೀಕ ಲಕ್ಷ್ಮಣ್ ನಾಯ್ಕ ಮೃತಪಟ್ಟ ಘಟನೆ ಸ್ಥಳದಲ್ಲಿ ಶ್ವಾನ ರೋಧಿಸಿತ್ತು.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ

ಇದನ್ನೂ ಓದಿ
ಶಿರೂರು ಗುಡ್ಡ ಕುಸಿತ ಪ್ರಕರಣ: ಚಾಲಕ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
ಶಿರೂರು ದುರಂತ: ಇನ್ನೂ 4 ದೇಹಗಳಿಗಾಗಿ ಮುಂದುವರಿದ ಶೋಧ ಕಾರ್ಯಾಚರಣೆ
ವಿಡಿಯೋ: ಅಂಕೋಲಾ ಗುಡ್ಡ ಕುಸಿತ: ಮಾಲೀಕನಿಗಾಗಿ ಕಾದು ಸುಸ್ತಾದ ಸಾಕು ನಾಯಿ

ಶ್ವಾನ ಗಮನಿಸಿದ್ದ ಉತ್ತರ ಕನ್ನಡ ಎಸ್​​ಪಿ ಎಂ ನಾರಾಯಣ್​ ತನ್ನ ಮನೆಗೆ ತಂದು ಸಾಕಿದ್ದಾರೆ. ಶ್ವಾನಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ತರಬೇತಿ ಕೂಡ ನೀಡಲಾಗಿದೆ. ಇಂದು ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಮ್ಯಾರಥಾನ್​​ನಲ್ಲಿ ಎಸ್​​ಪಿ ಎಂ ನಾರಾಯಣ್ ಜೊತೆ ಶ್ವಾನ ಓಡುವ ಮೂಲಕ ಎಲ್ಲರನ್ನು ಗಮನ ಸೆಳೆದಿದೆ.

ರಾಷ್ಟ್ರಮಟ್ಟದ ಪೊಲೀಸ್ ಮೀಟ್​ನಲ್ಲಿ ಘಟಾನುಘಟಿ ತಂಡಗಳನ್ನ ಬಗ್ಗು ಬಡಿದ ಕಾಪರ್​ ಹೆಸರಿನ ಶ್ವಾನ

ನಮ್ಮ ಕರ್ನಾಟಕ ರಾಜ್ಯದ ಕೊಡಗು ಜಿಲ್ಲಾ ಪೊಲೀಸ್​ ಇಲಾಖೆಯ ಕಾಪರ್ ಡಾಗ್​ ನ್ಯಾಷನಲ್​ ಲೆವೆಲ್ ಪೊಲಿಸ್ ಮೀಟ್​ನಲ್ಲಿ ಪಾಲ್ಗೊಂಡು ಎಲ್ಲಾ ತಂಡಗಳನ್ನ ಮಣಿಸಿ ಬೆಳ್ಳಿ ಪದಕ ಜಯಿಸಿದೆ. ಹೌದು.. ಜಾರ್ಖಂಡ್​ ರಾಜ್ಯದ ರಾಂಚಿಯಲ್ಲಿ ಇತ್ತೀಚೆಗೆ ನಡೆದ ಆಲ್​ ಇಂಡಿಯಾ ಪೊಲಿಸ್ ಮೀಟ್​ನಲ್ಲಿ ಶ್ವಾನ ಕರ್ನಾಟಕ ತಂಡವನ್ನ ಪ್ರತನಿಧಿಸಿದೆ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದ ಈ ಶ್ವಾನ,
ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನ ಪ್ರತಿನಿಧಿಸಿ ನಾರ್ಕೋಟಿಕ್​ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದೆ.

ಈ ಕಾಪರ್​ ಕೊಡಗು ಜಿಲ್ಲಾ ಪೊಲೀಸ್​ ಶ್ವಾನ ದಳದ ಸಕ್ರಿಯ ಸದಸ್ಯ. ಈಗಷ್ಟೇ ಎರಡೂವರೆ ವರ್ಷ,
ಜರ್ಮನ್ ಶೆಫರ್ಡ್​ ಬ್ರೀಡ್​ನ ಈ ಶ್ವಾನವನ್ನ ಶ್ವಾನದಳದ ಪೊಲೀಸ್ ಪೇದೆ ಮನೋಹರ್ ತರಬೇತಿ ಗೊಳಿಸಿದ್ದಾರೆ. ಇತರ ಎಲ್ಲಾ ಶ್ವಾನಗಳಿಗಿಂತಲೂ ಇದರದ್ದು ವಿಶಿಷ್ಟ ಬುದ್ಧಿವಂತಿಕೆ. ಇದೇ ಬುದ್ಧಿವಂತಿಕೆ
ಪ್ರದರ್ಶಿಸಿ ಇದೀಗ ಬಿಎಸ್​ಎಫ್, ಸಿಆರ್​ಪಿಎಫ್​, ಸಿಐಎಸ್​ಎಫ್​ , ಎಸ್​​ಎಸ್​ಬಿ, ಐಟಿಬಿಪಿ ನಂತಹ ಭದ್ರತಾ ಪಡೆಗಳ ಶ್ವಾನಗಳನ್ನ ಮಣಿಸಿ ಬೆಳ್ಳಿ ಪದಕ ಜಯಿಸಿದೆ. ಈ ಸ್ಪರ್ಧೆಯಲ್ಲಿ ದೇಶದ ವಿವಿಧೆಡೆಯ 118
ಶ್ವಾನಗಳು ಭಾಗವಹಿಸಿದ್ದವು.

ಕಾಪರ್

ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಅತಿ ಕಠಿಣ ಸವಾಲುಗಳಿದ್ದವು. ಗಾಂಜಾ ಚೆರಸ್, ಹೆರಾಯಿನ್​, ಹ್ಯಾಶ್ ಆಯಿಲ್ ನಂತಹ ಮಾದಕ ದ್ರ್ಯವಗಳನ್ನ ಭೂಮಿಯಡಿ ಅಡಗಿಸಿಟ್ಟು ಅದನ್ನು ಹುಡುಕುವಂತೆ ಸೂಚಿಸಲಾಗುತ್ತಿತ್ತು. ಈ ಸವಾಲನ್ನ ಸಮಯಮಿತಿಯಲ್ಲಿ ಉಳಿದ ಶ್ವಾನಗಳಿಗಿಂತ ವೇಗವಾಗಿ ಪತ್ತೆ ಹಚ್ಚುವಲ್ಲಿ ಕಾಪರ್ ಯಶಸ್ವಿಯಾಗಿತ್ತು.

ಇದನ್ನೂ ಓದಿ: ಅಂಕೋಲಾ ಹೆದ್ದಾರಿಯಲ್ಲಿ ಗುಡ್ಡ ಕುಸಿತ: ಮಾಲೀಕನಿಗಾಗಿ ಕಾದು ಸುಸ್ತಾದ ಸಾಕು ನಾಯಿ, ವಿಡಿಯೋ ನೋಡಿ

ಈ ಕಾಪರ್​ನ ಹೆಚ್ಚುಗಾರಿಕೆ ಅಂದರೆ ಅದು ಕೆಲಸ ಮಾಡುವಾಗ ಎಲ್ಲೂ ಕೂಡ ಏಕಾಗ್ರತೆ ಕಳೆದುಕೊಳ್ಳುವುದಿಲ್ಲ. ತರಬೇತುದಾರನ ಮಾತನ್ನ ಚಾಚು ತಪ್ಪದೆ ಪಾಲಿಸಿ ಅಪರಾಧ ಪತ್ತೆ ಹಚ್ಚುತ್ತದೆ. ಕೊಡಗು ಜಿಲ್ಲೆಯಲ್ಲೂ ಕೂಡ ಹತ್ತು ಹಲವು ಮಾದಕ ವಸ್ತುಗಳನ್ನ ಪತ್ತೆಹಚ್ಚುವಲ್ಲಿ ಕಾಪರ್ ಪ್ರಮುಖ ಪಾತ್ರ ವಹಿಸಿತ್ತು. ಕಾಪರ್​ನಿಂದಾಗಿ ಇಂದು ಕೊಡಗು ಮಾತ್ರವಲ್ಲದೆ ಕರ್ನಾಟಕ ಪೊಲೀಸ್​ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:37 pm, Sun, 9 March 25