ಮಲೆನಾಡಿನ ಪ್ರಸಿದ್ದ ಮಾಗೋಡು ಫಾಲ್ಸ್ ನೋಡಲು ಪ್ರವಾಸಿಗರ ಹಿಂದೇಟು; ಯಾಕೆ ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 19, 2023 | 5:37 PM

ಉತ್ತರ ಕನ್ನಡ ಜಿಲ್ಲೆ, ಪ್ರವಾಸಿತಾಣಕ್ಕೆ ಪ್ರಸಿದ್ಧವಾಗಿರುವ ಜಿಲ್ಲೆ. ಆದ್ರೆ, ಇಲ್ಲಿ ಕೆಲವು ಪ್ರಸಿದ್ದ ಪ್ರವಾಸಿತಾಣಕ್ಕೆ ಹೋಗಲು ರಸ್ತೆ ಸಂಪರ್ಕ ಹಾಳಾಗಿರುವ ಹಿನ್ನೆಲೆ, ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲಿನ ಅವ್ಯವಸ್ಥೆಯ ಕುರಿತು ಇಲ್ಲಿದೆ ಮಾಹಿತಿ. 

ಮಲೆನಾಡಿನ ಪ್ರಸಿದ್ದ ಮಾಗೋಡು ಫಾಲ್ಸ್ ನೋಡಲು ಪ್ರವಾಸಿಗರ ಹಿಂದೇಟು; ಯಾಕೆ ಗೊತ್ತಾ?
ಮಾಗೋಡು ಪಾಲ್ಸ್​
Follow us on

ಉತ್ತರ ಕನ್ನಡ, ನ.19: ಮಲೆನಾಡಿನ ಬೆಟ್ಟದ ನಡುವೆ ಸೀಳಿಕೊಂಡು ಬರುವ ಜಲಧಾರೆ, ಹಾಲ್ನೊರೆಯಾಗಿ ಧುಮ್ಮಿಕ್ಕುತ್ತಾ ಕೈ ಬೀಸಿ ಕರೆಯುವ ಜಲಪಾತ. ಹಸಿರ ಬೆಟ್ಟದಲ್ಲಿ ಸೌಂದರ್ಯ ಹೆಚ್ಚಿಸಿರುವ ಮಾಗೋಡು ಫಾಲ್ಸ್(Magod Falls). ಉತ್ತರ ಕನ್ನಡ(Uttara Kannada) ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಶಾಂತವಾಗಿ ಹರಿಯುತ್ತಿರುವ ಬೇಡ್ತಿ ನದಿಯಿಂದ ಮಾಗೋಡು ಜಲಪಾತ ಎಂಬ ಸುಂದರ ಫಾಲ್ಸ್​ ಸೃಷ್ಟಿಸುತ್ತದೆ. ಈ ಸುಂದರ ತಾಣವನ್ನು ಎಷ್ಟು ಬಾರಿ ನೋಡಿದರೂ ಮತ್ತೆ ನೋಡಬೇಕು ಎಂದು ಅನಿಸುತ್ತದೆ. ಆದ್ರೆ, ಸದ್ಯ ಆ ಸ್ಥಳಕ್ಕೆ ಪ್ರಯಾಣಿಕರು ಬರುವ ಸಂಖ್ಯೆ ಬಹಳ ಕಡಿಮೆ ಆಗಿದೆ.

ವಿಕೆಂಡ್ ಬಂದರೆ ಸಾಕು ಜನಜಂಗುಳಿಯಿಂದ ತುಂಬುತ್ತಿದ್ದ ಈ ತಾಣದಲ್ಲಿ ಬೆರಳಣಿಕೆಯ ಜನ ಮಾತ್ರ ಕಣಾಸಿಗುತ್ತಿದ್ದಾರೆ. ಇಲ್ಲಿನ ಪ್ರಕೃತಿ ಸೌಂದರ್ಯ ನೋಡಿ ಎಲ್ಲರೂ ಖುಷಿ ಪಡುತ್ತಾರೆ. ಆದ್ರೆ, ಇನ್ನೊಮ್ಮೆ ಇಲ್ಲಿಗೆ ಬರಬೇಕೆಂದು ಮನಸ್ಸು ಮಾಡಲ್ಲ. ಜೊತೆಗೆ ಯಾರಿಗೂ ಇಲ್ಲಿಗೆ ಹೋಗಬೇಡಿ, ಹೋಗೊದಾದ್ರೆ ಎಚ್ಚರಿಕೆಯಿಂದ ಹೋಗಿ ಎಂದು ಸಲಹೆ ಕೊಡುತ್ತಿದ್ದಾರೆ.

ಇದನ್ನೂ ಓದಿ:ಉತ್ತರ ಕನ್ನಡ ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ ಮಂಜೂರು ಮಾಡಿದ ಕರ್ನಾಟಕ ಸರ್ಕಾರ

ಸರಿಯಾದ ರಸ್ತೆಯಿಲ್ಲದೆ ಪ್ರವಾಸಿಗರ ಪರದಾಟ

ಮಾಗೋಡು ಫಾಲ್ಸ್ ಪ್ರತಿಯೊಬ್ಬ ಪ್ರವಾಸಿಗರನ್ನು ಮೂಖ ವಿಸ್ಮಿತ ಮಾಡುವುದ್ರಲ್ಲಿ ಎರಡು ಮಾತಿಲ್ಲ ಆದ್ರೆ, ಮಾಗೋಡು ಫಾಲ್ಸ್ ಗೆ ಹೋಗಲು ಇರುವ ರಸ್ತೆ ಬಹಳಷ್ಟು ಹಾಳಾಗಿದೆ, ಕಾರು, ಟ್ಯಾಕ್ಸಿ ಮೂಲಕ ಈ ಸ್ಥಳಕ್ಕೆ ಬಂದ್ರೆ ವಾಹನ ಡ್ಯಾಮೆಜ್ ಆಗುವುದು ಗ್ಯಾರೆಂಟಿ, ದೂರದೂರಿನಿಂದ ಇಲ್ಲಿಗೆ ಬಂದು ಕಾರು ಹಾಳಾದ್ರೆ ರಿಪೇರಿ ಮಾಡಲು ಕೂಡ ಇಲ್ಲಿ ಯಾರೂ ಸಿಗಲ್ಲ. ಎಷ್ಟೊ ಜನ ಪ್ರವಾಸಿಗರು ಪರದಾಡಿದ್ದು ಉಂಟು . ಹಾಗಾಗಿ ಇಲ್ಲಿಗೆ ಬರಲು ಪ್ರವಾಸಿಗರು ನಿತ್ಯ ಪರದಾಡುತ್ತಿದ್ದಾರೆ.

ಒಟ್ಟಾರೆಯಾಗಿ ರಾಜ್ಯದ ಪ್ರವಾಸಿ ತಾಣವನ್ನು ಉಳಿಸಿ ಬೆಳೆಸಬೇಕಿರುವ ಇಲಾಖೆಗಳು, ಇರುವ ಪ್ರವಾಸಿ ತಾಣಗಳಿಗೆ ಉತ್ತಮ ಮೂಲಭೂತ ವ್ಯವಸ್ಥೆ ಕಲ್ಪಸಿಕೊಟ್ಟರೆ ಎಷ್ಟೋ ಪ್ರವಾಸಿ ತಾಣಗಳು ಜಿವಂತವಾಗಿ ಉಳಿಯುತ್ತವೆ. ಆದ್ರೆ, ಸಂಬಂಧಪಟ್ಟವರು ಮಾತ್ರ ಜಾಣ ಮೌನ ವಹಿಸಿರುವುದು ನಿಜಕ್ಕೂ ವಿಷಾದನೀಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ