Viral Video: ಅಬ್ಬಬ್ಬಾ! ಉರಗ ತಜ್ಞರಿಂದ ಬೃಹತ್ ಕಾಳಿಂಗ ಸರ್ಪದ ರಕ್ಷಣೆ; ಹೇಗಿದೆ ನೋಡಿ
ಸಾಮಾನ್ಯವಾಗಿ ಹಾವನ್ನು ನೋಡುವುದಕ್ಕೇ ಭಯ ಆಗುತ್ತದೆ. ಅಂತಹ ಸಂದರ್ಭದಲ್ಲಿ ಕಾಳಿಂಗ ಸರ್ಪವನ್ನು ಹಿಡಿದು ಉರಗ ತಜ್ಞರು ಕಾಡಿಗೆ ಬಿಟ್ಟು ಜನರಿಗೆ ಅಭಯ ಹೇಳಿದ್ದಾರೆ. ಹಾವನ್ನು ಕೂಡ ರಕ್ಷಿಸಿದ್ದಾರೆ.
ಕಾರವಾರ: ಬೃಹತ್ ಕಾಳಿಂಗ ಸರ್ಪವನ್ನು ಸಂರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಕಾರವಾರದಲ್ಲಿ ನಡೆದಿದೆ. ಇಲ್ಲಿನ ಉರಗ ತಜ್ಞರು ಕಾಳಿಂಗ ಸರ್ಪವನ್ನು ಲೀಲಾಜಾಲವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಸಾಮಾನ್ಯವಾಗಿ ಹಾವನ್ನು ನೋಡುವುದಕ್ಕೇ ಭಯ ಆಗುತ್ತದೆ. ಅಂತಹ ಸಂದರ್ಭದಲ್ಲಿ ಕಾಳಿಂಗ ಸರ್ಪವನ್ನು ಹಿಡಿದು ಉರಗ ತಜ್ಞರು ಕಾಡಿಗೆ ಬಿಟ್ಟು ಜನರಿಗೆ ಅಭಯ ಹೇಳಿದ್ದಾರೆ. ಹಾವನ್ನು ಕೂಡ ರಕ್ಷಿಸಿದ್ದಾರೆ. ಅಂದಹಾಗೆ ಹಾವು ಹಿಡಿದ ಉರಗ ತಜ್ಞರ ಹೆಸರು ಪವನ್ ನಾಯ್ಕ್.
ಜಾನುವಾರು ಮೈ ತೊಳೆಯಲು ಹೋದಾಗ ಮೊಸಳೆ ದಾಳಿ
ಕೊಪ್ಪಳ: ಜಾನುವಾರು ಮೈ ತೊಳೆಯಲು ಹೋದಾಗ ಮೊಸಳೆ ದಾಳಿ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಯುವಕನ ಮೇಲೆ ಮೊಸಳೆ ದಾಳಿ ಮಾಡಿದೆ. ಗ್ರಾಮದ ರವಿಕುಮಾರ್ ಬರ್ಸಿ ಎಂಬ ಯುವಕನ ಮೇಲೆ ಮೊಸಳೆ ದಾಳಿ ಮಾಡಿದೆ. ರವಿಕುಮಾರ್ ಕೈಗೆ ಗಾಯವಾಗಿದೆ. ತುಂಗಭದ್ರಾ ನದಿಗೆ ಜಾನುವಾರು ಮೈ ತೊಳೆಯಲು ಹೋದಾಗ ಘಟನೆ ನಡೆದಿದೆ. ಮೊಸಳೆ ಕಚ್ಚುತ್ತಲೇ ಕಲ್ಲೆಸೆದು ರವಿಕುಮಾರ್ ಓಡಿ ಬಂದಿದ್ದಾರೆ. ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ರವಿಕುಮಾರ್ಗೆ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ: ಮೈಸೂರು: ಸಫಾರಿ ವೇಳೆ ಒಂದೆರಡಲ್ಲ, ಮೂರು ಹುಲಿಗಳ ದರ್ಶನ! ಪ್ರವಾಸಿಗರಿಗೆ ಧಮಾಕ; ವಿಡಿಯೋ ನೋಡಿ
ಇದನ್ನೂ ಓದಿ: Viral: ಪ್ರೇಮಿಗಳ ಜಗಳ ಬಿಡಿಸಲು ಹೋಗಿ ತಾನೇ ಜಗಳಕ್ಕೆ ನಿಂತ ಫುಡ್ ಡೆಲಿವರಿ ಬಾಯ್; ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್