ಕಾರವಾರ. (ಮಾರ್ಚ್ 03): ನಟ ಶಿವರಾಜ್ ಕುಮಾರ್ (Shiva Rajkumar) ಸಕ್ರಿಯ ರಾಜಕಾರಣದಿಂದ ದೂರ ಇದ್ದಾರೆ. ಆದ್ರೆ, ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shiva Rajkumar) ಚುನಾವಣಾ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಜೆಡಿಎಸ್ನಿಂದ ಚುನಾವಣೆಗೆ ಸ್ಪರ್ಧಿಸಿದ್ದ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡಿದ್ದರು. ಇದೀಗ ಮತ್ತೊಮ್ಮೆ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ. ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸುಲು ತೀರ್ಮಾನಿಸಿದ್ದಾರೆ. ಹೆಂಡತಿ ತೀರ್ಮಾನಕ್ಕೆ ಶಿವರಾಜ್ ಕುಮಾರ್ ಸಹ ಸೈ ಎಂದಿದ್ದಾರೆ. ‘ನನ್ನ ಪತ್ನಿ ಸಂಸದೆ ಆಗುವುದನ್ನು ನೋಡುವ ಆಸೆಯಿದೆ’ ಎಂದಿದ್ದಾರೆ. ಆದ್ರೆ, ಈಡಿಗ ಸಮುದಾಯದ ಸ್ವಾಮಿಜಿ ಪ್ರಣವಾನಂದ ಸ್ವಾಮೀಜಿ ಬೆಂಬಲ ನೀಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.
ಕಾರವಾದರದಲ್ಲಿ ಮಾತನಾಡಿದ ಈಡಿಗ ಸಮುದಾಯದ ಸ್ವಾಮಿಜಿ ಪ್ರಣವಾನಂದ ಶ್ರೀ , ಶಿವಮೊಗ್ಗ ಲೋಕಸಭೆಗೆ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿದರೇ ಬೆಂಬಲ ಕೊಡುವುದಿಲ್ಲ. ದಿವಂಗತ ಡಾ. ರಾಜಕುಮಾರ್ ರವರಿಗೆ ಮುಖ್ಯಮಂತ್ರಿ ಸ್ಥಾನದ ಅವಕಾಶ ಸಿಕ್ಕರೂ ಅದನ್ನು ಒಪ್ಪಲಿಲ್ಲ. ದೊಡ್ಡ ಅವಕಾಶ ಬಂದ್ರು ಡಾ . ರಾಜಕುಮಾರ್ ರಾಜಕಾರಣಕ್ಕೆ ಹೋಗಿಲ್ಲ. ಅವರ ಕುಟುಂಬವೂ ರಾಜಕಾಣಕ್ಕೆ ಬರಬಾರದು. ಅವರಂತೆ ಇರಬೇಕು ಎಂಬಯದೇ ನನ್ನ ಭಾವನೆ ಎಂದು ಹೇಳಿದರು.
ಇದನ್ನೂ ಓದಿ: ಪತ್ನಿ ಗೀತಾ ಸಂಸದೆ ಆಗುವುದನ್ನು ನೋಡಬಯಸುತ್ತೇನೆ: ಶಿವರಾಜ್ ಕುಮಾರ್
ಶಿವರಾಜ್ ಕುಮಾರ್ ಕ್ರಿಕ್ರೆಟಿಗ ಸಚಿನ್ ತೆಂಡೂಲ್ಕರ್ ಹೇಳಿದಂತೆ ಹೇಳಿಕೆ ಕೋಡುತ್ತಾರೆ. ನಾನು ಸಿಕ್ಸ್ ಹೊಡೆದಿಲ್ಲ ನನ್ನ ಕೈ ಹೊಡೆದಿದೆ ಎಂದು ಸಚಿನ್ ಹೇಳುತ್ತಾರೆ. ರಾಜಕೀಯ ವಿಚಾರದಲ್ಲೂ ಶಿವರಾಜ್ ಕುಮಾರ್ ಅದೇ ರಿತಿ ಹೇಳಿಕೆ ಕೊಡುತ್ತಾರೆ. ಗೀತಾ ಶಿವರಾಜ್ ಕುಮಾರ್ ಚುನಾವಣೆಗೆ ನಿಂತರೆ ಖಂಡಿತ ಬೆಂಬಲ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಇದೇ ವೇಳೆ ತಮ್ಮ ಸಮುದಾಯದ ನಾಯಕ ಬಿ.ಕೆ ಹರಿಪ್ರಸಾದ್ ವಿರುದ್ಧವು ಸಹ ಪ್ರಣಾವನಂದ ಶ್ರೀ ಕಿಡಿಕಾರಿದ್ದಾರೆ. ಬಿಕೆ ಹರಿಪ್ರಸಾದ್ ಕೊಡವ ಎಲ್ಲಾ ಹೇಳಿಕೆಗೆ ನಮ್ಮ ಸಹಕಾರ ಇಲ್ಲ. ಈ ದೇಶದ ಮೇಲೆ ಭಕ್ತಿ ಇರುವವರು, ಈ ದೇಶದ ಅನ್ನ ಗಾಳಿ ತೊಗೊಂಡು ಯಾರೂ ಕೂಡ ದೇಶದ ವಿರುದ್ಧ ಮಾತನಾಡಬಾರದು. ದೇಶದ ವಿರುದ್ದ ಮಾತನಾಡಿದ್ರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ . ದೇಶದ್ರೂಹದ ಹೇಳಿಕೆಗಳನ್ನ ನಾವು ನಮ್ಮ ಸಮಾಜದವರು ಎಂದೂ ಕೊಡುವುದಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Sun, 3 March 24