ಮಿನಿಸ್ಟರ್ ಕಡೆಯಿಂದ ಪ್ರೆಶರ್ ಬಂತು: ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣದ ಆಡಿಯೋ ವೈರಲ್

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರ ನಡುವೆ ನಡೆದಿತ್ತು ಎಂದರಾದ ಸಂಭಾಷಣೆಯ ಆಡಿಯೋ ಒಂದು ಈಗ ವೈರಲ್ ಆಗಿದೆ. ಅಂದ ಹಾಗೆ ಈ ಸಂಭಾಷಣೆ ನಡೆದ ನಂತರ ಚಂದ್ರಶೇಖರ್ ಆತ್ಮಹತ್ಯೆ ಕೂಡ ನಡೆದಿದೆ. ಈ ಆಡಿಯೋದಲ್ಲಿ ಅಧ್ಯಕ್ಷರು, ಸಚಿವರ ಕಡೆಯಿಂದ ಒತ್ತಡ ಎಂಬ ಪದಗಳು ಬಳಕೆಯಾಗಿದ್ದು ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆಡಿಯೋದಲ್ಲಿ ಏನಿದೆ ಎಂಬ ವಿವರ ಇಲ್ಲಿದೆ.

ಮಿನಿಸ್ಟರ್ ಕಡೆಯಿಂದ ಪ್ರೆಶರ್ ಬಂತು: ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣದ ಆಡಿಯೋ ವೈರಲ್
ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ
Follow us
| Updated By: ಡಾ. ಭಾಸ್ಕರ ಹೆಗಡೆ

Updated on:Jul 09, 2024 | 11:19 AM

ಬೆಂಗಳೂರು, ಜುಲೈ 9: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೇ 24ರಂದು ಬೆಂಗಳೂರಿನ ಹೋಟೆಲ್​​ನಲ್ಲಿ ನಡೆದಿತ್ತಾ ರಹಸ್ಯ ಮೀಟಿಂಗ್ ಎಂಬ ಅನುಮಾನ ಇದೀಗ ಬಲವಾಗಿದೆ. ಇದಕ್ಕೆ ಕಾರಣ ಆಡಿಯೋವೊಂದು ವೈರಲ್ ಆಗಿರುವುದು. ಪ್ರಕರಣದ ಆರೋಪಿಗಳ ನಡುವೆ ನಡೆದಿದೆ ಎನ್ನಲಾದ ಆಡಿಯೋ, ವಿಡಿಯೋ ವೈರಲ್ ಆಗಿದೆ. ಇದು ಲೆಕ್ಕ ಪರಿಶೋಧಕ ಪರಶುರಾಮ್ ಮತ್ತು ಎಂಡಿ ಪದ್ಮನಾಭ್ ನಡುವಣ ಮಾತುಕತೆಗೆ ಸಂಬಂಧಿಸಿದ್ದಾಗಿದೆ.

ಹೋಟೆಲ್​ಗೆ ಪರಶುರಾಮ್​ರನ್ನು ಕರೆಸಿಕೊಂಡಿದ್ದ ಎಂಡಿ ಪದ್ಮನಾಭ್ ಸಭೆ ನಡೆಸಿದ್ದರು. ಸದ್ಯ ಪ್ರಕರಣದಲ್ಲಿ ಪದ್ಮನಾಭ್ ಎ7 ಹಾಗೂ ಪರಶುರಾಮ್ ಎ8 ಆಗಿದ್ದಾರೆ. ಉಭಯರ ನಡುವೆ ನಡೆದ ಮಾತುಕತೆ ವೇಳೆ, ‘ಹಗರಣದ ವಿಚಾರ ಅಧ್ಯಕ್ಷರಿಗೆ ಹೇಳೋಣ್ವಾ’ ಎಂದು ಪರಶುರಾಮ್ ಹೇಳಿದ್ದರು. ಇದಕ್ಕುತ್ತರವಾಗಿ, ‘ಹೇಳಿದ್ರೆ ರಾದ್ಧಾಂತ ಆಗುತ್ತೆ, ಸ್ವಲ್ಪ ದಿನ ಬೇಡ’ ಎಂದು ಪದ್ಮನಾಭ್ ಹೇಳಿದ್ದರು. ಇದಾದ ಎರಡೇ ದಿನಗಳಲ್ಲಿ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದರು.

ವೈರಲ್ ಆಡಿಯೋದಲ್ಲೇನಿದೆ?

  • ಅಕೌಂಟೆಂಟ್ ಪರಶುರಾಮ್ (A8); ಏನ್ ಸಾರ್ ಹೆಂಗಾಯಿತು?
  • ಪದ್ಮನಾಭ (A7); ಮಿನಿಸ್ಟರ್ ಕಡೆಯಿಂದ ಪ್ರೆಶರ್ ಬಂತು, ನೆಕ್ಕಂಟಿ ನಾಗರಾಜ್ ಹೇಳಿದ್ರು ನಾವು ಮಾಡಿದ್ವಿ.
  • ಅಕೌಂಟೆಂಟ್ ಪರಶುರಾಮ್; ಸರ್ ಇದನ್ಮು ಅಧ್ಯಕ್ಷರಿಗೆ ಹೇಳೋನೋ ಬೇಡ್ವೋ…
  • ಪದ್ಮನಾಭ; ಏ ಅವರಿಗೆ ಇದು ಗೊತ್ತಿಲ್ಲ, ಅಧ್ಯಕ್ಷರ ಗಮನಕ್ಕೆ ತರೋದು ಬೇಡ. ಅವರಿಗೆ ಏನಾದ್ರೂ ಗೊತ್ತಾದರೆ ದೊಡ್ಡ ರಾದ್ಧಾಂತ ಮಾಡ್ತಾರೆ.
  • ಅಕೌಂಟೆಂಟ್ ಪರಶುರಾಮ್; ಮಿನಿಸ್ಟರ್ ಗಮನಕ್ಕೆ ಇಲ್ವಾ?
  • ಪದ್ಮನಾಭ; ಆ ದಿನ ಶಾಂಗ್ರಲಾ ಹೋಟೆಲ್​ನಲ್ಲಿ ಮಂತ್ರಿಯವರು ಕರೆಸಿ ಹೇಳಲಿಲ್ವಾ?
  • ಪರಶುರಾಮ್: ಸರ್…. ಇದರಿಂದ ಹೊರಗೆ ಬರೋದು ಹೇಗೆ ಸರ್? ದುಡ್ಡು ಕಟ್ಲಿಲ್ಲಾ ಅಂದ್ರೆ ಸರ್, ನಾನು ನಿಮ್ಮ ಕಾಲು ಹಿಡ್ಕೊಳ್ತೀನಿ ಸರ್… ನಾನು ನಿಮ್ಮನ್ನ ನಂಬಿದ್ದೇನೆ. ನೀವೇ ನಮ್ಮ ಜತೆ ಇರಬೇಕು.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ನಿಗಮದ 10 ವರ್ಷದ ಆಯವ್ಯಯ ನೀಡುವಂತೆ ಸರ್ಕಾರಕ್ಕೆ ಪತ್ರ

ಏನಿದು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ?

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಯಿಂದ 18 ಖಾತೆಗಳಿಗೆ ಬರೋಬ್ಬರಿ 94.73 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿತ್ತು. ಎಂಜಿ ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಹಣ ವರ್ಗಾವಣೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ಹಗರಣ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್, ಮಾಜಿ ಸಚಿವ ಬಿ. ನಾಗೇಂದ್ರ ಅವರ ಅಪ್ತ ಎನ್ನಲಾದ ನಾಗರಾಜ್ ನೆಕ್ಕುಂಟಿ, ನಾಗೇಶ್ವರ್ ರಾವ್ ಎಂಬುವವರನ್ನು ಎಸ್‌ಐಟಿ ಬಂಧಿಸಿದ್ದು ವಿಚಾರಣೆಗೆ ಒಳಪಡಿಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:36 am, Tue, 9 July 24