ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಆತ್ಮಹತ್ಯೆ; ಅಸಹಜ ಸಾವು ಎಂದು ಸಹೋದರನಿಂದ ದೂರು ದಾಖಲು

ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಆತ್ಮಹತ್ಯೆ ಮಾಡಿಕೊಂಡು ಘಟನೆಗೆ ಸಂಬಂಧಿಸಿದಂತೆ ಮೃತ ಪ್ರತಾಪ ಕುಮಾರ್ ಸಹೋದರ ಪ್ರಭುದೇವ ಅವರು ಈ ಪ್ರಕರಣ ಸಂಬಂಧ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದು ಅಸಹಜ ಸಾವು. ಮಕ್ಕಳಾಗಿರಲಿಲ್ಲ ಎಂದು ಪ್ರತಾಪ್ ತೀವ್ರ ಬೇಸರದಲ್ಲಿದ್ದ. ಮಂಕಾಗಿ ತೀವ್ರ ಕಿನ್ನತೆಗೆ ಒಳಗಾಗಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಆತ್ಮಹತ್ಯೆ; ಅಸಹಜ ಸಾವು ಎಂದು ಸಹೋದರನಿಂದ ದೂರು ದಾಖಲು
ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಆತ್ಮಹತ್ಯೆ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಆಯೇಷಾ ಬಾನು

Updated on: Jul 09, 2024 | 10:08 AM

ದಾವಣಗೆರೆ, ಜುಲೈ.09: ಮಾಜಿ ಸಚಿವ ಬಿ.ಸಿ. ಪಾಟೀಲ್ (B.C. Patil) ಅವರ ಮಗಳ ಗಂಡ ಪ್ರತಾಪ್ ಕುಮಾರ್ ನಿಗೂಢವಾಗಿ ಸಾವನ್ನಪ್ಪಿದ್ದು, ಕಾರಿನಲ್ಲಿ ವಿಷ (Poison) ಸೇವಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಯಾವಾಗಲೂ ಲವಲವಿಕೆಯಿಂದ ಮಾವನ ರಾಜಕೀಯ ವ್ಯವಹಾರ ನೋಡಿಕೊಳ್ಳುತ್ತಿದ್ದವ ಹೀಗೆ ಸಾವನ್ನಪ್ಪಿರುವುದು ಬಿ.ಸಿ. ಪಾಟೀಲ ಕುಟುಂಬಕ್ಕೆ ಆಘಾತ ತಂದಿದೆ. ಇದೊಂದು ಆತ್ಮಹತ್ಯೆ ಪ್ರಕರಣ ಎನ್ನಲಾಗಿದ್ದು ಮೃತ ಪ್ರತಾಪ ಕುಮಾರ್ ಸಹೋದರ ಪ್ರಭುದೇವ ಅವರು ಈ ಪ್ರಕರಣ ಸಂಬಂಧ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದೊಂದು ಅಸಹಜ ಸಾವು ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ಠಾಣೆಗೆ ಪ್ರಭುದೇವ ಅವರು ದೂರು ಸಲ್ಲಿಸಿದ್ದಾರೆ. ಮದುವೆ ಆಗಿ 16 ವರ್ಷವಾಗಿತ್ತು, ಮಕ್ಕಳಾಗಿರಲಿಲ್ಲ ಎಂದು ಪ್ರತಾಪ್ ತೀವ್ರ ಬೇಸರದಲ್ಲಿದ್ದ. ಮಂಕಾಗಿ ತೀವ್ರ ಕಿನ್ನತೆಗೆ ಒಳಗಾಗಿದ್ದ ಎಂದು ಮೃತ ಪ್ರತಾಪ ಕುಮಾರ್ ಸಹೋದರ ಪ್ರಭುದೇವ ಅವರು ದೂರು ದಾಖಲಿಸಿದ್ದಾರೆ.

ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಸೂಸೈಡ್

ಹಾವೇರಿಯ ಪ್ರಭಾವಿ ರಾಜಕಾರಣಿ, ಮಾಜಿ ಸಚಿವ ಬಿ.ಸಿ.ಪಾಟೀಲ್ ಅವ್ರ ಅಳಿಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಸಿ.ಪಾಟೀಲ್ ಮೊದಲ ಪುತ್ರಿ ಸೌಮ್ಯ ಪತಿ ಪ್ರತಾಪ್ ಕುಮಾರ್ ಕಾರಿನಲ್ಲೇ ಸೂಸೈಡ್ ಮಾಡ್ಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಬಳಿ ಘಟನೆ ನಡೆದಿದೆ. ಅರಣ್ಯದ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಒಳಗೆ ವಿಷದ ಬಾಟಲ್ ಪತ್ತೆಯಾಗಿದೆ. ಸ್ಥಳಕ್ಕೆ ಬಂದ ಪೊಲೀಸ್ರು ಮೆಗ್ಗಾನ್ ಆಸ್ಪತ್ರೆಗೆ ಮೃತದೇಹ ಸಾಗಿಸಿ ಮರಣೋತ್ತರ ಪರೀಕ್ಷೆ‌ ನಡೆಸಿದ್ದು ಇಂದು ಅಂತ್ಯಸಂಸ್ಕಾರ ನಡೆಯಲಿದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಸ್ವಗ್ರಾಮ ಕತ್ತಲಗೆರೆ ಗ್ರಾಮದಲ್ಲಿ ಇಂದು ಪ್ರತಾಪ್ ಅಂತ್ಯಸಂಸ್ಕಾರ ನಡೆಯಲಿದೆ.

ಇದನ್ನೂ ಓದಿ: ನಮ್ಮ ಪಕ್ಷದ ಬಗ್ಗೆ ಮಾತನಾಡಲು ಹೆಚ್​ಡಿ ಕುಮಾರಸ್ವಾಮಿಗೆ ಯಾವ ನೈತಿಕತೆಯಿದೆ: ಬಿ.ಸಿ.ಪಾಟೀಲ್ ಪ್ರಶ್ನೆ

ಮಕ್ಕಳಾಗಲಿಲ್ಲ ಎಂದು ಸಾವಿಗೆ ಶರಣಾದ್ರಾ?

ಮೊದಲ ಪುತ್ರಿಯ ಅಳಿಯ ಪ್ರತಾಪ್ ಕುಮಾರ್ ಬಿಸಿ.ಪಾಟೀಲ್ ಜೊತೆಗಿದ್ದು ಎಲ್ಲಾ ವ್ಯವಹಾರ ನೋಡಿಕೊಳ್ತಿದ್ದರಂತೆ. ನಿನ್ನೆ ಬೆಳಗ್ಗೆ ಊರಿಗೆ ಹೋಗಿ ಬರ್ತೀನಿ ಅಂತೇಳಿ ಹಿರೇಕೆರೂರಿನಿಂದ ತೆರಳಿದ್ದರು. ಆದ್ರೆ ದಾರಿ ಮಧ್ಯವೇ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. 2008ರಲ್ಲಿ ವಿವಾಹವಾಗಿದ್ದ ಪ್ರತಾಪ್‌ಗೆ ಇನ್ನೂ ಮಕ್ಕಳಾಗಿರಲಿಲ್ಲ ಎಂಬ ಕೊರಗಿತ್ತು. ಕುಡಿತದ ಚಟವೂ ಇದ್ದು ಫ್ಯಾಟಿ ಲಿವರ್ ಆಗಿತ್ತು ಎನ್ನಲಾಗಿದೆ. ಬೆಂಗಳೂರಿನ ಪುನರ್ವಸತಿ ಕೇಂದ್ರದಲ್ಲಿ 2 ತಿಂಗಳು ಚಿಕಿತ್ಸೆ ಕೊಡಿಸಿದ್ದು, ಎಲ್ಲಾ ಸರಿ ಹೋಗಿತ್ತು ಎನ್ನುವಷ್ಟರಲ್ಲಿ ಮತ್ತೆ ಕುಡಿತದ ಅ‍ಭ್ಯಾಸ ಶುರು ಮಾಡಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿ ಅತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮಾಜಿ ಸಚಿವ ಬಿಸಿ ಪಾಟೀಲ್ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ