AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಪಕ್ಷದ ಬಗ್ಗೆ ಮಾತನಾಡಲು ಹೆಚ್​ಡಿ ಕುಮಾರಸ್ವಾಮಿಗೆ ಯಾವ ನೈತಿಕತೆಯಿದೆ: ಬಿ.ಸಿ.ಪಾಟೀಲ್ ಪ್ರಶ್ನೆ

ನಮ್ಮ ಪಕ್ಷದ ಬಗ್ಗೆ ಮಾತನಾಡಲು ಹೆಚ್​.​ಡಿ. ಕುಮಾರಸ್ವಾಮಿಗೆ ಯಾವ ನೈತಿಕತೆಯಿದೆ? ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು  ಖಂಡಿಸುತ್ತೇನೆ ಎಂದು ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ನಮ್ಮ ಪಕ್ಷದ ಬಗ್ಗೆ ಮಾತನಾಡಲು ಹೆಚ್​ಡಿ ಕುಮಾರಸ್ವಾಮಿಗೆ ಯಾವ ನೈತಿಕತೆಯಿದೆ: ಬಿ.ಸಿ.ಪಾಟೀಲ್ ಪ್ರಶ್ನೆ
ಹೆಚ್​.ಡಿ ಕುಮಾರಸ್ವಾಮಿ, ಬಿ.ಸಿ ಪಾಟೀಲ್​
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Feb 09, 2023 | 4:43 PM

Share

ಕಾರವಾರ: ಈ ದೇಶದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಸಿಎಂ ಆಗಲು 25 ವರ್ಷ ಆಗಿರಬೇಕು ಮತ್ತು ತಲೆ ಸರಿಯಿರಬೇಕು. ನಮ್ಮ ಪಕ್ಷದ ಸಿಎಂ ನಿರ್ಧರಿಸೋಕೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಯಾರು ಎಂದು ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ (B.C. Patil) ಪ್ರಶ್ನೆ ಮಾಡಿದರು. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಅಂಡಗಿ ಗ್ರಾಮದಲ್ಲಿ ಮಾತನಾಡಿ, ನಮ್ಮ ಪಕ್ಷದ ಬಗ್ಗೆ ಮಾತನಾಡಲು ಹೆಚ್​.​ಡಿ. ಕುಮಾರಸ್ವಾಮಿಗೆ ಯಾವ ನೈತಿಕತೆಯಿದೆ? ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು  ಖಂಡಿಸುತ್ತೇನೆ ಎಂದು ಹೇಳಿದರು. ಕುಮಾರಸ್ವಾಮಿ ಸಿಡಿ ಬಿಡುವುದಾಗಿ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಪ್ರತ್ರಿಕ್ರಿಯೆ ನೀಡಿದ್ದು, ಹೆಚ್​.ಡಿ.ಕುಮಾರಸ್ವಾಮಿ ಬಗ್ಗೆ ಹೇಳೋಕೆ ಹೋದ್ರೆ ಬೇಕಾದಷ್ಟು ಇದೆ. ತಾಜ್​ ವೆಸ್ಟೆಂಡ್​​ ಹೋಟೆಲ್ ಯಾತ್ರೆ ನೋಡಿದ್ರೆ ಬೇಕಾದಷ್ಟು ಆಗುತ್ತೆ. ತನ್ನ ಚಟ ಬಿಟ್ಟು ಗಾಂಧೀಜಿ ಬೇರೆಯವರಿಗೆ ಹೇಳಿದರಂತೆ, ಅದೇ ರೀತಿ ಮೊದಲು ಇವರಿಗೆ ಇರುವ ಚಟ ಬಿಡಲಿ ಎಂದು ಬಿ.ಸಿ.ಪಾಟೀಲ್ ಕಿಡಿಕಾರಿದರು.

55% ಸಿಬ್ಬಂದಿ ಕೊರತೆ ಇರೋದು ನಿಜ

ಇನ್ನು ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿ, ಕೆ.ಪಿ.ಎಸ್.ಸಿ ಮೂಲಕ ಸದ್ಯ ಸಿಬ್ಬಂದಿ ನೇಮಕ ಕಾಲ್ ಫಾರ್ ಆಗುತ್ತೆ. 6000 ಡಿಪ್ಲೊಮಾ ಅದವ್ರನ್ನ ಹೊರಗುತ್ತಿಗೆ ಮೇಲೆ ತಗೊಳೋಕೆ ಆರ್ಥಿಕ ಇಲಾಖೆ ಹಾಗೂ ಮುಖ್ಯಮಂತ್ರಿಗಳಲ್ಲಿ ಅನುಮತಿ ಕೇಳಿದ್ದೇವೆ. ಅನುಮತಿ ಸಿಕ್ಕ ತಕ್ಷಣ ಮಾಡಲಿದ್ದೇವೆ. 55% ಸಿಬ್ಬಂದಿ ಕೊರತೆ ಇರೋದು ನಿಜ ಎಂದು ಬಿ.ಸಿ ಪಾಟೀಲ್ ತಿಳಿಸಿದರು.

ಇದನ್ನೂ ಓದಿ: ಪ್ರಹ್ಲಾದ್ ಜೋಶಿ ಸಿಎಂ ಆಗಬಾರದು ಎಂದು ಹೇಳಿಲ್ಲ, ಅವರ ಹಿನ್ನೆಲೆ ಹೇಳಿದ್ದೇನೆ ಅಷ್ಟೇ: ಕುಮಾರಸ್ವಾಮಿ ಸ್ಪಷ್ಟನೆ

ಬ್ರಾಹ್ಮಣರು ಅಂತಾ ಅಲ್ಲ, ಅರ್ಹತೆ ಇದ್ದವರನ್ನು ಸಿಎಂ ಮಾಡುತ್ತಾರೆ: ರಘುಪತಿ ಭಟ್  

ಇನ್ನು ಈ ಕುರಿತಾಗಿ ಶಾಸಕ ರಘುಪತಿ ಭಟ್​ ತಿರುಗೇಟು ನೀಡಿದ್ದು, ಬ್ರಾಹ್ಮಣರು ಸಿಎಂ ಆಗಬಾರದು ಅಂತಾ ಎಲ್ಲೂ ಪಾಲಿಸಿ ಇಲ್ಲ. ನಮ್ಮಲ್ಲಿ ಅರ್ಹತೆ ಆಧಾರದ ಮೇಲೆ ಪರಿಗಣಿಸ್ತಾರೆ. ಯಾರು ಸಿಎಂ ಆಗಬೇಕು ಅಂತಾ ನಾನು ನಿರ್ಧಾರ ಮಾಡುವುದಿಲ್ಲ. ಹೈಕಮಾಂಡ್​, ಶಾಸಕಾಂಗ ಪಕ್ಷದ ಅಭಿಪ್ರಾಯ ಪಡೆದು ತೀರ್ಮಾನ ಮಾಡಲಾಗುತ್ತದೆ. ಬ್ರಾಹ್ಮಣರು ಅಂತಾ ಅಲ್ಲ ಅರ್ಹತೆ ಇದ್ದವರನ್ನು ಸಿಎಂ ಮಾಡುತ್ತಾರೆ. ಜಾತಿಯ ರಾಜಕಾರಣ ಕುಮಾರಸ್ವಾಮಿ ಮನಸ್ಥಿತಿಯಲ್ಲೇ ಬಂದಿದೆ. ರಾವಣ ಬ್ರಾಹ್ಮಣನಾದ್ರೂ ಅವನ ನಡವಳಿಕೆಯಿಂದ ದ್ವೇಷಿಸಲಾಗುತ್ತೆ. ರಾವಣನನ್ನು ಜಾತಿಯಿಂದ ನೋಡಲ್ಲ ಎಂದು ಬೆಂಗಳೂರಿನಲ್ಲಿ ಹೇಳಿದರು.

ಇದನ್ನೂ ಓದಿ: ನಮ್ಮಲ್ಲಿ ಮುಖ್ಯಮಂತ್ರಿ ಆಗಬೇಕಾದರೆ ಟ್ಯಾಲೆಂಟ್​ ಇರಬೇಕು, ಸಿಎಂ ಯಾರಾಗಬೇಕೆಂದು ಕೇಂದ್ರದಲ್ಲಿ ತೀರ್ಮಾನ ಆಗುತ್ತೆ: ಆರ್​.ಅಶೋಕ್

ಕುಮಾರಸ್ವಾಮಿಗೆ ಸಿ.ಟಿ. ರವಿ ಟಾಂಗ್​

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿರವಿ ಮಾತನಾಡಿದ್ದು, ಜೆಡಿಎಸ್​ನ ಹೆಸರನ್ನು ಜಾತ್ಯತೀತ ಜನತಾ ದಳ ಎನ್ನುವ ಬದಲು ಜಾತಿಯ ದಳ ಎಂದು ಹೆಸರು ಬದಲಿಸಿದರೆ ಒಳ್ಳೆಯದು ಎಂದು ಹೆಚ್.​ಡಿ. ಕುಮಾರಸ್ವಾಮಿಗೆ ಸಲಹೆ ನೀಡಿದ್ದಾರೆ. ಪ್ರತೀ ಬಾರಿ ಲಾಟರಿ ಹೊಡೆಯಲು ಸಾಧ್ಯವಿಲ್ಲ. ಈ ಹಿಂದೆ ಕುಮಾರಸ್ವಾಮಿಗೆ ಲಾಟರಿ ಹೊಡೆದಿತ್ತು, ಹಾಗಾಗಿ ಅದೇ ವಾದ ಅವರದ್ದಾಗಿದೆ. ಬಿಜೆಪಿ ಪಕ್ಷದಲ್ಲಿ ಬ್ರಾಹ್ಮಣ ಸಿಎಂ ವಿಚಾರ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇಂಥ ಚರ್ಚೆಗಳು ಎದುರಾಗಿದ್ದವು. ಜಾತ್ಯತೀತ ನಾಯಕರೆನಿಸಿಕೊಂಡವರು ಜಾತಿ ಬಗ್ಗೆ ಮಾತನಾಡುವುದು ಸರಿಯಲ್ಲ. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವುದು ಬಿಜೆಪಿಯ ಸಿದ್ಧಾಂತವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ ಎಂದು ಹೇಳಿದರು. 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.