Karnataka Cabinet: ಹಲವು ಯೋಜನೆ, ಅನುದಾನಗಳಿಗೆ ರಾಜ್ಯ ಸಂಪುಟ ಒಪ್ಪಿಗೆ; ಇಲ್ಲಿದೆ ಪಟ್ಟಿ

Bommai Cabinet Approves Many Projects: ರಿನಿವಬಲ್ ಎನರ್ಜಿ ನೀತಿ ತಿದ್ದುಪಡಿ, ನೂತನ ಕೃಷಿ ಸಂಶೋಧನಾ ಕಾಲೇಜು ಇತ್ಯಾದಿ ಹಲವು ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಇಂದಿನ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ.

Karnataka Cabinet: ಹಲವು ಯೋಜನೆ, ಅನುದಾನಗಳಿಗೆ ರಾಜ್ಯ ಸಂಪುಟ ಒಪ್ಪಿಗೆ; ಇಲ್ಲಿದೆ ಪಟ್ಟಿ
ಜೆಸಿ ಮಾಧುಸ್ವಾಮಿ, ಕಾನೂನು ಸಚಿವರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 09, 2023 | 2:42 PM

ಬೆಂಗಳೂರು: ಬಜೆಟ್ ಅಧಿವೇಶನ (Karnataka Budget Session) ಆರಂಭಕ್ಕೆ ಒಂದು ದಿನ ಮುನ್ನ ಸಭೆ ಸೇರಿದ ರಾಜ್ಯ ಸಚಿವ ಸಂಪುಟ (Karnataka State Cabinet) ಹಲವು ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ. ಇದರಲ್ಲಿ ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ನೂತನ ಕೃಷಿ ಸಂಶೋಧನಾ ಕಾಲೇಜು ನಿರ್ಮಾಣ ಯೋಜನೆಯೂ ಒಳಗೊಂಡಿದೆ. ಶಿವಮೊಗ್ಗದ ಸೊರಬದಲ್ಲಿ ವಿಸ್ತಾರಸೌಧ ನಿರ್ಮಾಣಕ್ಕೆ ಸುಮಾರು 50 ಕೋಟಿ ರೂನಷ್ಟು ಅನುದಾನ ಬಿಡುಗಡೆಗೂ ಸಂಪುಟ ಒಪ್ಪಿಕೊಂಡಿದೆ.

ಉತ್ತರಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಬುಡಕಟ್ಟು ಜನಾಂಗಕ್ಕೆ ಹಾಸ್ಟೆಲ್, ಮಡಿಕೇರಿಯಲ್ಲಿ ಎಸ್​ಪಿ ಕಚೇರಿ, ಶಿಗ್ಗಾಂವಿಯಲ್ಲಿ ವಿದ್ಯುತ್ ಸರಬರಾಜು ಕೇಂದ್ರ ಮತ್ತಿತರ ಯೋಜನೆಗಳಿಗೆ 13 ಸಾವಿರ ಕೋಟಿ ರೂ ಸಾಲದ ವ್ಯವಸ್ಥೆ ಇತ್ಯಾದಿಗೆ ಸಂಪುಟ ಸಭೆಯಲ್ಲಿ ಸಮ್ಮತಿ ಕೊಡಲಾಗಿದೆ.

ಇದನ್ನೂ ಓದಿ: ಪಕ್ಷ ನನಗೆ ಎಲ್ಲವನ್ನೂ ನೀಡಿದೆ, ಕಡೆಗಣಿಸಲಾಗುತ್ತಿದೆ ಎಂಬ ಅಪವಾದ ಸತ್ಯಕ್ಕೆ ದೂರ: ಬಿಎಸ್ ಯಡಿಯೂರಪ್ಪ

ಕಾನೂನು ಸಚಿವ ಮಾಧುಸ್ವಾಮಿ ಇಂದಿನ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗೋಷ್ಠಿ ನಡೆಸಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಯಾವ್ಯಾವ ಯೋಜನೆಗಳು, ಅನುದಾನಕ್ಕೆ ಒಪ್ಪಿಗೆ ಕೊಡಲಾಗಿದೆ ಎಂಬ ಪಟ್ಟಿ ಇಲ್ಲಿದೆ:

* ಬಳ್ಳಾರಿ ಜಿಲ್ಲೆ ಹಗರಿಯಲ್ಲಿ ನೂತನ ಕೃಷಿ ಸಂಶೋಧನಾ ಕಾಲೇಜು

* ನವೀಕರಿಸಬಹುದಾದ ಇಂಧನ ನೀತಿಯ ತಿದ್ದುಪಡಿ

* ದಾವಣಗೆರೆಯ ಹೊನ್ನಾಳಿಯಲ್ಲಿರುವ 200 ಬೆಡ್​ಗಳ ಸರ್ಕಾರಿ ಆಸ್ಪತ್ರೆಯನ್ನು 300 ಬೆಡ್​​ಗಳ ಮೇಲ್ದರ್ಜೆಗೆ

* ಚಿಕ್ಕಬಳ್ಳಾಪುರ, ನೆಲಮಂಗಲ ರಸ್ತೆ ಅಭಿವೃದ್ಧಿ ಯೋಜನೆ ಮೊತ್ತ 8.40 ಕೋಟಿ ಯಿಂದ 10.13 ಕೋಟಿ ರೂಗೆ ಪರಿಷ್ಕರಣೆ

* ಶಿವಮೊಗ್ಗದ ಸೊರಬದಲ್ಲಿ ವಿಸ್ತಾರಸೌಧ ನಿರ್ಮಾಣಕ್ಕೆ 49.60 ಕೋಟಿ ರೂ ಅನುದಾನ

* ಉತ್ತರಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಬುಡಕಟ್ಟು ಜನಾಂಗಕ್ಕೆ ಹಾಸ್ಟೆಲ್ ನಿರ್ಮಾಣಕ್ಕೆ ಜಾಗ ಮಂಜೂರು

* ಚಾಮರಾಜನಗರದ 166 ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆಗೆ 26 ಕೋಟಿ ರೂ ಅನುದಾನ; ಇದರಲ್ಲಿ 14.5 ಕೋಟಿ ರೂ ಅನುದಾನ ರಾಜ್ಯ ಸರ್ಕಾರದಿಂದ

* ಶಿಗ್ಗಾಂವ್​ನ ಕಲ್ಯಾಣ ಗ್ರಾಮದಲ್ಲಿ ಸರ್ಕಾರಿ ಉಪಕರಣಗಾರ ಹಾಗೂ ತರಬೇತಿ ಕೇಂದ್ರಕ್ಕೆ 73.75 ಕೋಟಿ ರೂ ಅನುದಾನ

* ಹಾವೇರಿಯ ನೆಲನೊಳು ಗ್ರಾಮದಲ್ಲಿ ಬಹುಕೌಶಲ್ಯ ತರಬೇತಿ ಕೇಂದ್ರದ ಬಾಲಕರ ಹಾಸ್ಟೆಲ್ ನಿರ್ಮಾಣಕ್ಕೆ 37.55ಕೋಟಿ ರೂ ಅನುದಾನ

* ವಿದ್ಯುತ್ ಸರಬರಾಜು ಕೇಂದ್ರಗಳಿಗೆ 13 ಸಾವಿರ ಕೋಟಿ ರೂ ಸಾಲಕ್ಕೆ ಅನುಮೋದನೆ

* ಮಡಿಕೇರಿಯಲ್ಲಿ ಎಸ್​ಪಿ ಕಚೇರಿ ನಿರ್ಮಾಣಕ್ಕೆ 12 ಕೋಟಿ ರೂ ಅನುದಾನ ಬಿಡುಗಡೆ

* ಕಲಬುರ್ಗಿಯಲ್ಲಿ ಪಿಪಿಪಿ ವ್ಯವಸ್ಥೆಯಲ್ಲಿ ಬಸ್ ನಿಲ್ದಾಣ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ

* ಕೆಪಿಎಸ್​ಸಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಅಧಿಕಾರ ಸಿಎಂಗೆ

ಇದನ್ನೂ ಓದಿ: Election Time: ಉಚಿತ ಸೀರೆಗಳ ಪಡೆಯಲು ಮುಗಿಬಿದ್ದ ಮಹಿಳೆಯರು! ಬಿಜೆಪಿ ಮುಖಂಡನಿಂದ ಭರ್ಜರಿ ಬಾಡೂಟ, ಸೀರೆ ವಿತರಣೆ!

ನಾಳೆಯಿಂದ ಬಜೆಟ್ ಅಧಿವೇಶನ ನಡೆಯಲಿದ್ದು, ಫೆಬ್ರುವರಿ 24ರವರೆಗೂ ಮುಂದುವರಿಯುತ್ತದೆ. ಫೆ. 17ರಂದು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಇದು ಈ ಸರ್ಕಾರದ ಕೊನೆಯ ಬಜೆಟ್ ಆಗಿರುವುದರಿಂದ ಬಹಳಷ್ಟು ನಿರೀಕ್ಷೆಗಳಿವೆ. ಮುಂಬರುವ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಬಜೆಟ್ ಈ ಸರ್ಕಾರದ ಪಾಲಿಗೆ ಜನರನ್ನು ಮೆಚ್ಚಿಸಲು ಇರುವ ಕೊನೆಯ ಅಸ್ತ್ರವಾಗಿದೆ.