ಜಾಮೂನ್​ಗೆ ಮೈಸೂರು ಪಾಕ್​ ಟಾರ್ಗೆಟ್​: ಶ್ವೇತಾಳನ್ನ ಹನಿಟ್ರ್ಯಾಪ್ ಗೆ ಬಳಸಿಕೊಂಡ್ರಾ ವರ್ತೂರ್ ಪ್ರಕಾಶ್?

| Updated By: ರಮೇಶ್ ಬಿ. ಜವಳಗೇರಾ

Updated on: Dec 25, 2024 | 3:47 PM

ರಾಜಕಾರಣಿಗೆ ಉಡುಗೊರೆ ನೀಡಲು ಚಿನ್ನದ ವ್ಯಾಪಾರಿಗಳಿಗೆ ಕನ್ನ ಹಾಕಿರುವ ಕಿಲಾಡಿ ಲೇಡಿ ಗೋಲ್ಡ್ ಶ್ವೇತಾ ಗೌಡ ವಂಚನೆ ಕಹಾನಿ ಒಂದೊಂದೇ ಬಯಲಾಗುತ್ತಿದೆ. ಆರಂಭದಲ್ಲಿ ಚಿನ್ನದ ಉಡುಗೊರೆ ಕೊಟ್ಟು ದೊಡ್ಡ ದೊಡ್ಡವರ ಜತೆ ಸ್ನೇಹ ಬೆಳೆಸುತ್ತಿದ್ದ ಶ್ವೇತಾ, ಬಳಿಕ ಅವರನ್ನೇ ಬಳಸಿಕೊಂಡು ಚಿನ್ನದ ವ್ಯಾಪಾರಿಗಳಿಗೆ ಯಾಮಾರಿಸುತ್ತಿದ್ದಳು. ಇದೇ ಕಿಲಾಡಿ ಜತೆ ಸ್ನೇಹ ಬೆಳೆಸಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್‌ಗೂ ಸಂಕಷ್ಟ ಎದುರಾಗಿದೆ. ಇದಷ್ಟೇ ಅಲ್ಲ, ಇದೀಗ ಸ್ವೀಟಿ ಬಲೆಯ ಕಹಾನಿ ಬಯಲಾಗಿದೆ.

ಜಾಮೂನ್​ಗೆ ಮೈಸೂರು ಪಾಕ್​ ಟಾರ್ಗೆಟ್​: ಶ್ವೇತಾಳನ್ನ ಹನಿಟ್ರ್ಯಾಪ್ ಗೆ ಬಳಸಿಕೊಂಡ್ರಾ ವರ್ತೂರ್ ಪ್ರಕಾಶ್?
ವರ್ತೂರ್ ಪ್ರಕಾಶ್-ಶ್ವೇತಾಗೌಡ
Follow us on

ಬೆಂಗಳೂರು, (ಡಿಸೆಂಬರ್ 25): ಶ್ವೇತಾ ಗೌಡ ಚಿನ್ನದ ವ್ಯಾಪಾರಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ರಾಜಕೀಯ ದ್ವೇಷಕ್ಕೆ ವಂಚಕಿ ಶ್ವೇತಾಳನ್ನ ಮಾಜಿ ಸಚಿವ ವರ್ತೂರ್ ಪ್ರಕಾಶ್​ ಬಳಸಿಕೊಂಡ್ರಾ ಎನ್ನುವ ಅನುಮಾನ ಶುರುವಾಗಿದೆ. ರಾಜಕೀಯ ಎದುರಾಳಿಯನ್ನ ಮಟ್ಟ ಹಾಕುವುದಕ್ಕೆ ಶ್ವೇತಾಳ ಮೂಲಕ ಹನಿಟ್ರ್ಯಾಪ್​ಗೆ ಯತ್ನಿಸಿದ್ರಾ? ಎನ್ನುವ ಶಂಕೆ ವ್ಯಕ್ತವಾಗಿದೆ. ಯಾಕಂದ್ರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಲಪತಿ ಮತ್ತು ವರ್ತೂರು ಪ್ರಕಾಶ್ ಮಧ್ಯೆ ಕೋಲಾರ ಟಿಕೆಟ್​ಗೆ ಫೈಟ್ ನಡೆಡಿರುವುದು.

ಬಿಜೆಪಿ ಮುಖಂಡನನ್ನ ಟಾರ್ಗೆಟ್ ಮಾಡಿದ್ರಾ ವರ್ತೂರ್?

ಹೌದು.. ಅಸಲಿ ಕಾರಣ ಏನು ಅಂದ್ರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಟಿಕೆಟ್​ಗೆ ವರ್ತೂರ್ ಪ್ರಕಾಶ್​, ಬಿಜೆಪಿ ಮುಖಂಡ ಓಂ ಶಕ್ತಿ ಛಲಪತಿ ಮಧ್ಯೆ ಫೈಟ್ ಇತ್ತು. ವಲಸೆ ಬಂದ ವರ್ತೂರ್​ಗೆ ಟಿಕೆಟ್​ ಬೇಡ ಎಂದು ಚಲಪತಿ ಪಟ್ಟು ಹಿಡಿದಿದ್ದರಂತೆ. ನಾನು ಲೋಕಲ್​, ನನಗೆ ಟಿಕೆಟ್ ಕೊಡಬೇಕೆಂದು ಹೋರಾಟ ಮಾಡಿದ್ದರು. ಆದ್ರೆ ಕೊನೆಗೂ ಬಿಜೆಪಿ ಟಿಕೆಟ್​ ಗಿಟ್ಟಿಸಿಕೊಂಡ ವರ್ತೂರ್, ಚುನಾವಣೆಯಲ್ಲಿ ಸೋಲು ಕಂಡಿದ್ದರು. ಆದ್ರೆ ಎಲ್ಲಾ ಲೆಕ್ಕಾಚಾರ ಹಾಕಿದ ವರ್ತೂರ್, ಹೀಗೆ ಬಿಟ್ರೆ ಆಗುವುದಿಲ್ಲ, ಮುಂದಿನ ಚುನಾವಣೆಯಲ್ಲಿ ಚಲಪತಿ ಅಡ್ಡಿಯಾಗುವ ಆತಂಕದಿಂದ ಅವರನ್ನು ರಾಜಕೀಯವಾಗಿ ಮಟ್ಟ ಹಾಕುವುದಕ್ಕೆ ವರ್ತೂರ್ ಪ್ಲ್ಯಾನ್ ಮಾಡಿದ್ರಾ? ಎನ್ನುವ ಅನುಮಾನ ಶುರುವಾಗಿದೆ.. ಈ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಶ್ವೇತಾ ಗೌಡ ಜತೆ ವರ್ತೂರ್‌ ಪ್ರಕಾಶ್‌ ಎಂಗೇಜ್​ಮೆಂಟ್​ಗೆ ಸಿದ್ಧತೆ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

ಶ್ವೇತಾಗೌಡ ಗಾಳ ಹೇಗಿತ್ತು!?

ಅಂದಹಾಗೆ ಎದುರಾಳಿಗೆ ಖೆಡ್ಡಾ ತೋಡಲು ಶ್ವೇತಾಗೌಡಳ ಮೂಲಕ ವರ್ತೂರ್ ಪ್ಲ್ಯಾನ್ ಮಾಡಿದ್ದತಂತೆ. ಹಾಗಾದ್ರೆ, ಏನಿದು ಮೈಸೂರ್ ಪಾಕ್​, ಗುಲಾಬ್ ಜಾಮೂನ್ ರಹಸ್ಯ? ಎನ್ನುವುದನ್ನು ನೋಡುವುದಾದರೆ, ಬಿಜೆಪಿ ಮುಖಂಡ ಓಂ ಶಕ್ತಿ ಚಲಪತಿಗೆ ಗಾಳ ಹಾಕುವುದಕ್ಕೆ ಶ್ವೇತಾಗೌಡ ರೆಡಿಯಾಗಿದ್ದಳು, ಬ್ಯುಸಿನೆಸ್​ ಹೆಸರಿನಲ್ಲಿ ಕಾಂಟ್ಯಾಕ್ಟ್ ಮಾಡುವುದಕ್ಕೆ ಶ್ವೇತಾಗೌಡ ಪ್ರಯತ್ನ ಮಾಡಿದ್ದಾಳೆ. ಓಂ ಶಕ್ತಿ ಚಲಪತಿಯ ಬಗ್ಗೆ ಮೊದಲೇ ಶ್ವೇತಾಗೌಡಗೆ ವರ್ತೂರ್ ಪ್ರಕಾಶ್​ ಮಾಹಿತಿ ಕೊಟ್ಟಿದ್ದರಂತೆ. ಅವನ ಬಳಿ ಸಾಕಷ್ಟು ಹಣ ಇದೆ, ಇನ್ವೆಸ್ಟ್ ಮಾಡಿಸಬಹುದೆಂದು ವರ್ತೂರ್ ಮಾಹಿತಿ ಕೊಟ್ಟಿದ್ದಾರೆ. ಬಳಿಕ ವರ್ತೂರ್ ಪ್ರಕಾಶ್, ಫೇಸ್​ಬುಕ್​ ಮೂಲಕ ಚಲಪತಿಯನ್ನ ಕಾಂಟ್ಯಾಕ್ಟ್​ ಮಾಡಿದ್ದ ಶ್ವೇತಾ, ಬ್ಯುಸಿನೆಸ್​ಗೆ ಇನ್ವೆಸ್ಟ್ ಮಾಡಲು ಚಲಪತಿಗೆ ಶ್ವೇತಾಗೌಡ ಒಪ್ಪಿಸಿದ್ದಾಳೆ. ಶ್ವೇತಾ ಚಲಪತಿ ಹೆಸರನ್ನ ಫೋನ್​ನಲ್ಲಿ ಮೈಸೂರ್ ಪಾಕ್ ಎಂದು ಸೇವ್ ಮಾಡಿಕೊಂಡಿರುವುದು ಪತ್ತೆಯಾಗಿದೆ.

ರೇಣುಕಾಸ್ವಾಮಿಯ ಕೊಲೆ ಆರೋಪಿಗಳಿಗೂ ನಂಟು!

ಇದಿಷ್ಟೇ ಅಲ್ಲ. ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೂ ಶ್ವೇತಾ ಜೊತೆ ನಂಟು ಇದೆ ಅಂತೆ. ಪವಿತ್ರಾಗೌಡ ಹಾಗೂ ವಿನಯ್​​ಗೆ ಶ್ವೇತಾಗೌಡ ಫ್ರೆಂಡ್​ ಆಗಿದ್ದಾಳೆ. ಈ ಹಿಂದೆ ಜೈಲಿನಲ್ಲಿರೋವಾಗ ಪರಪ್ಪನ ಅಗ್ರಹಾರ ಜೈಲಿಗೂ ಶ್ವೇತಾಗೌಡ ಭೇಟಿ ಕೊಟ್ಟಿದ್ದಳು. ಪವಿತ್ರಾಗೌಡ ಸ್ನೇಹಿತೆ ಸಮತಾ ಜೊತೆ ಭೇಟಿ ಕೊಟ್ಟಿದ್ದಳಂತೆ, ಶ್ವೇತಾ ಕೇಸ್​​ನಲ್ಲಿ ಪವಿತ್ರಾ, ಸಮತಾ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ವರ್ತೂರ್ ಪ್ರಕಾಶ್​ ನಡೆ ಬಗ್ಗೆ ನೂರೆಂಟು ಅನುಮಾನ

ಮಾಜಿ ಸಚಿವ ವರ್ತೂರ್ ಪ್ರಕಾಶ್​, ಪೊಲೀಸರ ವಿಚಾರಣೆಯಲ್ಲೊಂದು ಹೇಳಿಕೆ ಕೊಟ್ಟಿದ್ರೆ, ವಿಚಾರಣೆ ಬಳಿಕವೂ ಬೇರೆ ಹೇಳಿಕೆ ಕೊಟ್ಟಿದ್ದಾರೆ. ಒಂದ್ಕಡೆ ಆಕೆ ಸ್ನೇಹಿತೆ ಅಲ್ಲ, ಸುಳ್ಳು ಸುದ್ದಿ ಅಂದ್ರೆ, ಮತ್ತೊಂದ್ಕಡೆ, ನನ್ನ ಹೆಸರು ಬಳಸಿ ಚಿನ್ನಾಭರಣ ಖರೀದಿಸಿದ್ದಾಳೆ, ಚಿನ್ನದ ಅಂಗಡಿಯವರು ಚಿನ್ನ ಹೇಗೆ ಕೊಟ್ರೋ ಗೊತ್ತಿಲ್ಲ ಅಂದಿದ್ದಾರೆ. ಹೀಗಾಗಿ ಬೇರೆ ಬೇರೆ ರೀತಿ ಹೇಳಿಕೆ ಕೊಟ್ಟಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.. ಎಲ್ಲಾ ಆರೋಪದ ಬಗ್ಗೆಯೂ ಪೊಲೀಸರ ತನಿಖೆಯಿಂದ್ಲೇ ಬಯಲಾಗಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ