ದತ್ತಮಾಲೆ ಹಾಕುವೆ ಎಂದ ಕುಮಾರಸ್ವಾಮಿಯ ನಡೆಯನ್ನು ಸ್ವಾಗತಿಸಿದ ಹಿಂದೂ ಸಂಘಟನೆಗಳು

| Updated By: ರಮೇಶ್ ಬಿ. ಜವಳಗೇರಾ

Updated on: Nov 20, 2023 | 12:53 PM

ದತ್ತ ಮಾಲೆ ಏಕೆ ಹಾಕಬಾರದು. ಸಮಯ ಬಂದರೆ ದತ್ತ ಮಾಲೆಯನ್ನೂ ಹಾಕುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್​, ಬಜರಂಗದಳ ಸ್ವಾಗತಿಸಿವೆ. ಅಲ್ಲದೇ ಮುಂದೆ ನಡೆಯಲಿರುವ ದತ್ತಮಾಲಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡುವ ಸಾಧ್ಯತೆಗಳಿವೆ.

ದತ್ತಮಾಲೆ ಹಾಕುವೆ ಎಂದ ಕುಮಾರಸ್ವಾಮಿಯ ನಡೆಯನ್ನು ಸ್ವಾಗತಿಸಿದ ಹಿಂದೂ ಸಂಘಟನೆಗಳು
ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು, (ನವೆಂಬರ್ 20): ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರ ರಾಜಕೀಯ ಸಮೀಕರಣ ಬದಲಾದಂತೆ ಅವರ ಧಾರ್ಮಿಕ ನಿಲುವುಗಳಲ್ಲೂ ಸಹ ಬದಲಾಗುತ್ತಿವೆ. ಹೌದು…ಮೊದಲೆಲ್ಲಾ ಬಲಪಂಥಿಯ ನಿಲುವುಗಳನ್ನು ವಿರೋಧ ಮಾಡುತ್ತಾ ಬಂದಿರುವ ಕುಮಾರಸ್ವಾಮಿ ಇದೀಗ ಬಲಪಂಥಿದ ಕಡೆ ವಾಲಿದ್ದಾರೆ. ಇದಕ್ಕೆ ಪೂರಕವೆಂಬಂತೆ ದತ್ತ ಮಾಲೆ ಏಕೆ ಹಾಕಬಾರದು. ಸಮಯ ಬಂದರೆ ದತ್ತ ಮಾಲೆಯನ್ನೂ ಹಾಕುತ್ತೇವೆ ಎಂದು ಹೇಳಿದ್ದಾರೆ. ಇದನ್ನು ವಿಶ್ವ ಹಿಂದೂ ಪರಿಷತ್​ ಮತ್ತು ಬಜರಂಗದಳ ಸ್ವಾಗತ ಮಾಡಿವೆ.

ಟ್ವೀಟ್(ಎಕ್ಸ್) ​​​ ಮೂಲಕ ವಿಹೆಚ್​ಪಿ ಕಾರ್ಯಕರಣಿ ಸದಸ್ಯ ರಘು ಅವರು ಕುಮಾರಸ್ವಾಮಿಯವರು ದತ್ತಮಾಲಾಧಾರಣೆ ಮಾಡಲು ನಿರ್ಧರಿಸುವುದು ಸ್ವಾಗತಾರ್ಹ, ನಿಮ್ಮ ರಾಜಕೀಯ ಭವಿಷ್ಯ ಬದಲಾಗಲಿದ್ದು, ಇನ್ನಷ್ಟು ಶಕ್ತಿ ನೀಡಲಿ ಎಂದು ದತ್ತಾತ್ರೇಯ ಸ್ವಾಮಿಯಲ್ಲಿ ಬೇಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಡಿಸೆಂಬರ್ 17 ರಿಂದ 26ರವರೆಗೆ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಡೆಯಲಿರುವ ದತ್ತಮಾಲಾ ಅಭಿಯಾನ ನಡೆಯಲಿದ್ದು, ಇದರಲ್ಲಿ ಪಾಲ್ಗೊಳುವಂತೆ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಸಂಘಟನೆಗಳು ಹೆಚ್​​ಡಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡುವ ಸಾಧ್ಯತೆಗಳಿವೆ.

ಕುಮಾರಸ್ವಾಮಿ ಹೇಳಿದ್ದೇನು?

ನಿನ್ನೆ(ನವೆಂಬರ್ 19) ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ದತ್ತ ಮಾಲೆ ಏಕೆ ಹಾಕಬಾರದು. ಸಮಯ ಬಂದರೆ ದತ್ತ ಮಾಲೆಯನ್ನೂ ಹಾಕುತ್ತೇನೆ. ದತ್ತಮಾಲೆ ಹಾಕುವುದು ದೇವರ ಕಾರ್ಯಕ್ರಮ, ಕಾನೂನು ಬಾಹಿರ ಅಲ್ಲ. ಕಾನೂನು ಬಾಹಿರವಾದ ಯಾವುದೇ ಕೆಲಸ ಮಾಡುವುದಿಲ್ಲ. ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ