Devadasi System: ನಿಷೇಧದ 40 ವರ್ಷಗಳ ನಂತರವೂ ದೇವದಾಸಿ ಪದ್ದತಿ ಜೀವಂತವಾಗಿದೆ! ಇಲ್ಲಿದೆ ತಾಜಾ ಪ್ರಕರಣ

|

Updated on: Nov 09, 2023 | 10:57 AM

"ಅನೇಕರು ತಮ್ಮ ಶೋಚನೀಯ ಸ್ಥಿತಿಯ ನಡುವೆಯೂ ಸರ್ಕಾರ ದಂಡ ವಿಧಿಸುವ ಕ್ರಮಕ್ಕೆ ಹೆದರಿ ದೇವದಾಸಿಯರಾಗಿ ಹೊರಬರಲು ಹಿಂಜರಿಯುತ್ತಾರೆ" ಎಂದು ಮಿಷನ್ ವಿಜಯ ವನಿತೆಯ ಜಿಲ್ಲಾ ಸಂಯೋಜಕಿ ಮಂಜುಳಾ ಮಳಗಿ ವಿವರಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್​ ವರದಿ ಮಾಡಿದೆ.

Devadasi System: ನಿಷೇಧದ 40 ವರ್ಷಗಳ ನಂತರವೂ ದೇವದಾಸಿ ಪದ್ದತಿ ಜೀವಂತವಾಗಿದೆ! ಇಲ್ಲಿದೆ ತಾಜಾ ಪ್ರಕರಣ
ನಿಷೇಧದ 40 ವರ್ಷಗಳ ನಂತರವೂ ದೇವದಾಸಿ ಪದ್ದತಿ ಜೀವಂತವಾಗಿದೆ!
Follow us on

ಹೊಸಪೇಟೆ:   ಕರ್ನಾಟಕದಲ್ಲಿ ದೇವದಾಸಿ ಪದ್ಧತಿಯನ್ನು (Devadasi system) ನಿಷೇಧಿಸಿ (ban) ನಾಲ್ಕು ದಶಕಗಳು ಕಳೆದರೂ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಅತಿ ಹೆಚ್ಚು ಹಿಂದುಳಿದಿರುವ ವಿಜಯನಗರ ಜಿಲ್ಲೆಯಲ್ಲಿ (Hosapete) ಯುವತಿಯರು, ಮಹಿಳೆಯರು (young girls and women) ಇಂದಿಗೂ ‘ದೇವರಿಗೆ ಸಮರ್ಪಿತ’ರಾಗಿದ್ದಾರೆ. ವಿಜಯನಗರ ಜಿಲ್ಲಾಡಳಿತವು ದೇವದಾಸಿಯರಿಗಾಗಿ ಸ್ಥಾಪಿಸಿರುವ ಸಹಾಯ ಕೇಂದ್ರವಾದ ಮಿಷನ್ ವಿಜಯ ವನಿತೆ ನಡೆಸುತ್ತಿರುವ ಸಮೀಕ್ಷೆಯಲ್ಲಿ 18 ರಿಂದ 36 ವರ್ಷದೊಳಗಿನ 71 ದೇವದಾಸಿ ಮಹಿಳೆಯರನ್ನು ಪಟ್ಟಿ ಮಾಡಲಾಗಿದೆ. ಅವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿಗೆ, ಮುಖ್ಯವಾಗಿ ಮಾದಿಗ ಸಮುದಾಯಕ್ಕೆ (Scheduled Caste, mainly Madiga community) ಸೇರಿದವರಾಗಿದ್ದಾರೆ.

“ಅನೇಕರು ತಮ್ಮ ಶೋಚನೀಯ ಸ್ಥಿತಿಯ ನಡುವೆಯೂ ಸರ್ಕಾರ ದಂಡ ವಿಧಿಸುವ ಕ್ರಮಕ್ಕೆ ಹೆದರಿ ದೇವದಾಸಿಯರಾಗಿ ಹೊರಬರಲು ಹಿಂಜರಿಯುತ್ತಾರೆ” ಎಂದು ಮಿಷನ್ ವಿಜಯ ವನಿತೆಯ ಜಿಲ್ಲಾ ಸಂಯೋಜಕಿ ಮಂಜುಳಾ ಮಳಗಿ ವಿವರಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್​ ವರದಿ ಮಾಡಿದೆ.

ಸರಿತಾ (ಹೆಸರುಗಳನ್ನು ಬದಲಿಸಲಾಗಿದೆ) ಪ್ರಕರಣವನ್ನೇ ತೆಗೆದುಕೊಳ್ಳಿ. 2022 ರಲ್ಲಿ ಆಚರಣೆಯನ್ನು ಆಯೋಜಿಸುವ ಒಂದು ದಿನದ ಮೊದಲು ತನ್ನನ್ನು ದೇವದಾಸಿಯಾಗಿ ಸಮರ್ಪಿಸಲಾಗುವುದು ಎಂದು 21 ವರ್ಷದ ಯುವತಿಗೆ ತಿಳಿದಿತ್ತು. ಈಗ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ. ಅವಳು ಕೃಷಿ ಕೂಲಿಯಾಗಿ ಹೊಲಗಳಲ್ಲಿ ಕೆಲಸ ಮಾಡುವುದು ಕಷ್ಟ. ಆದರೆ ಬದುಕಲು ಬೇರೆ ಮಾರ್ಗಗಳಿಲ್ಲ.

Also Read: ‘ದೇವದಾಸಿ ಮಕ್ಕಳಿಗೆ ತಾಯಿ ಹೆಸರೇ ಅಂತಿಮ’ ನಿರ್ಣಯಕ್ಕೆ ಸರ್ಕಾರದಿಂದ ಸಹಮತ

ಆಕೆಯ ಸಂಕಟವನ್ನು ಹೆಚ್ಚಿಸಿರುವ ಮತ್ತೊಂದು ಸಂಗತಿಯೆಂದರೆ ಅವರು ರಾಜ್ಯದಲ್ಲಿ ಗರ್ಭಿಣಿಯರಿಗೆ ಸಲ್ಲುವ ಯೋಜನೆಗಳ ಅಡಿಯಲ್ಲಿ ಫಲಾನುಭವಿ ಆಗುತ್ತಾರೆಯೇ ಎಂಬುದು ಖಚಿತಪಟ್ಟಿಲ್ಲ. ಏಕೆಂದರೆ ಅವರು ಮಗುವಿನ ತಂದೆಯ ಹೆಸರನ್ನು ನಮೂದಿಸಲು ಸಾಧ್ಯವಿಲ್ಲ. ಇನ್ನು ಸ್ಥಳೀಯ ಅಂಗನವಾಡಿಯಲ್ಲಿ ಆಹಾರವನ್ನು ಪಡೆಯಲು ಸಹಾಯವಾದರೂ ಸಿಗುವುದಾ ಎಂದು ಅವರು ನಿರೀಕ್ಷಣೆಯಲ್ಲಿದ್ದಾರೆ. ಸರಿತಾ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದು, 1984ರಲ್ಲಿ ರಾಜ್ಯದಲ್ಲಿ ನಿಷೇಧಿಸಲ್ಪಟ್ಟ ಶೋಷಕ ದೇವದಾಸಿ ಪದ್ಧತಿಯಿಂದ ಇತ್ತೀಚೆಗೆ ಬದುಕುಳಿದವರಲ್ಲಿ ಒಬ್ಬರು.

ನಾನು ಗರ್ಭಧರಿಸುವವರೆಗೂ ದೇವದಾಸಿಯಾಗಿ ಹೊರಬರಲಿಲ್ಲ. ಇದು ಕಾನೂನಿಗೆ ವಿರುದ್ಧವಾಗಿರುವುದರಿಂದ ಇದು ನಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅವರು ಹೇಳುತ್ತಾರೆ. ನನ್ನೊಂದಿಗೆ ಸಂಬಂಧದಲ್ಲಿದ್ದ ವ್ಯಕ್ತಿಯು ನಾನು ಗರ್ಭಧಾರಣೆಯ ಬಗ್ಗೆ ತಿಳಿಸಿದ ನಂತರ ಮನೆಗೆ ಬರುವುದನ್ನು ಮತ್ತು ನನ್ನ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದನು. ಎಲ್ಲಕ್ಕಿಂತ ಮಿಗಿಲಾಗಿ ಅವನು ಬೇರೆಯವರ ಪತಿಯಾಗಿದ್ದು, ನೋಡಿಕೊಳ್ಳಲು ಸಂಸಾರವಿದೆ. ನಾನು ನನ್ನ ಗಂಡನ ಹೆಸರನ್ನು ಭರ್ತಿ ಮಾಡಬೇಕಾಗಿದ್ದ ಜಾಗದಲ್ಲಿ ಅದರ ಬದಲಿಗೆ ನನ್ನ ತಂದೆಯ ಹೆಸರನ್ನು ಸೇರಿಸಿದೆ ಎಂದು ಅವರು ತಮ್ಮ ಪಡಿಪಾಟಿಲಿನ ಬಗ್ಗೆ ಹೇಳುತ್ತಾರೆ.

ಅವಳು ಚಿಕ್ಕವನಿದ್ದಾಗ ಅವಳ ಪೋಷಕರು ಅವಳನ್ನು ದೇವದಾಸಿಯಾಗಿ ಅರ್ಪಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಇದು ತನ್ನ ಅನಾರೋಗ್ಯದ ತಂದೆಯನ್ನು ನೋಡಿಕೊಳ್ಳುವ ವ್ಯವಸ್ಥೆ ಎಂದು ಅವಳು ತಿಳಿದಿದ್ದಳು. ನಾನು ಕಿರಿಯವಳು ಮತ್ತು ನನ್ನ ಎಲ್ಲಾ ಹಿರಿಯ ಸಹೋದರಿಯರು ಮದುವೆಯಾಗಿದ್ದಾರೆ ಎಂದು ಅವರು ಹೇಳುತ್ತಾರೆ.

ಸರಿತಾ ನಂತರ, ಅವರ 19 ವರ್ಷದ ಸೋದರಸಂಬಂಧಿ ಸುಮಾರು ತಿಂಗಳುಗಳ ಹಿಂದೆ ಇದೇ ವ್ಯವಸ್ಥೆಗೆ ಸಮರ್ಪಿಸಲ್ಪಟ್ಟರು. ಕುಟುಂಬ ಮತ್ತು ಸಮಾಜದ ಯೋಗಕ್ಷೇಮಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಭಾವನೆ ತಳವೂರಿದ್ದು, ಮಹಿಳೆಯರನ್ನು ಜೀವಮಾನದ ಲೈಂಗಿಕ ಗುಲಾಮಗಿರಿಗೆ ತಳ್ಳಲು ಈ ಜಿಲ್ಲೆಯಲ್ಲಿ ಇನ್ನೂ ಬಳಸಲಾಗುತ್ತಿದೆ. ದೈಹಿಕ ಅಥವಾ ಮಾನಸಿಕ ಅಸಾಮರ್ಥ್ಯಗಳನ್ನು ಗುಣಪಡಿಸುವುದು ಅಥವಾ ದುರದೃಷ್ಟವನ್ನು ತಡೆಯುವುದು ಹೆಣ್ಣುಮಕ್ಕಳನ್ನು ದೇವದಾಸಿ ಪದ್ಧತಿಗೆ ತಳ್ಳಲು ಉಲ್ಲೇಖಿಸಿರುವ ಇತರ ಕಾರಣಗಳಾಗಿವೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ