ಹಿಂದೂಗಳ ರಕ್ತಪಾತಕ್ಕೆ ಪಂಡಿತ ಜವಾಹರಲಾಲ್ ನೆಹರು ಕಾರಣ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ

ಹಿಂದೂಗಳ ರಕ್ತಪಾತಕ್ಕೆ ಪಂಡಿತ ಜವಾಹರಲಾಲ್ ನೆಹರು ಕಾರಣ ಎಂದು ವಿಜಯಪುರ ನಗರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.

ಹಿಂದೂಗಳ ರಕ್ತಪಾತಕ್ಕೆ ಪಂಡಿತ ಜವಾಹರಲಾಲ್ ನೆಹರು ಕಾರಣ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ
Follow us
TV9 Web
| Updated By: ವಿವೇಕ ಬಿರಾದಾರ

Updated on:Aug 15, 2022 | 8:55 PM

ವಿಜಯಪುರ: ಹಿಂದೂಗಳ (Hindu) ರಕ್ತಪಾತಕ್ಕೆ ಪಂಡಿತ ಜವಾಹರಲಾಲ್ ನೆಹರು (Jawaharlal Nehru)  ಕಾರಣ ಎಂದು ವಿಜಯಪುರ (Vijaypur) ನಗರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ (Basanagouda Patil Yatnal) ಹೇಳಿದ್ದಾರೆ. ನಗರದ ಸಿದ್ದೇಶ್ವರ ದೇವಸ್ಥಾನ ಬಳಿ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆಯ ಕಾರ್ಯಕ್ರಮದಲ್ಲಿ ಭಾಗಿಯಾದ‌ ಬಳಿಕ ಮಾತನಾಡಿದ ಅವರು ಸರ್ಕಾರಿ ಜಾಹೀರಾತಿನಲ್ಲಿ ನೆಹರು ಪೊಟೋ ಬಿಟ್ಟ ವಿಚಾರಚವಾಗಿ ಮಾತನಾಡಿದ ಅವರು ಪೊಟೋ ಬಿಟ್ಟಿದ್ದು ತಪ್ಪೇನಲ್ಲ, ನೆಹರು ಕೊಡುಗೆ ದೇಶಕ್ಕೇನಿದೆ ? ದೇಶದ ಮೊದಲ ಪ್ರಧಾನಿ ನೆಹರು ಇರಬಹುದು, ಆದರೆ ನಮ್ಮ ಲೆಕ್ಕದಲ್ಲಿ ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಷಚಂದ್ರ ಭೋಸ್ ಎಂದು ಹೇಳಿದರು.

ದೇಶದ ಈ‌ ಪರಿಸ್ಥಿತಿಗೆ ನೆಹರು ಕಾರಣ. ನೆಹರು ಕಾಶ್ಮೀರಕ್ಕೆ 370 ವಿಶೇಷ ಆರ್ಟಿಕಲ್ ಕೊಟ್ಟರು. ಭಾರತ ಪಾಕಿಸ್ತಾನ ದೇಶ ಒಡೆದದ್ದೇ ನೆಹರು ಸಲುವಾಗಿ. ನೆಹರುನ ಪ್ರಧಾನಿ ಮಾಡಲು ದೇಶ ಒಡೆಯಲಾಗಿದೆ. ದೇಶ ಇಬ್ಬಾಗವಾಗಲು ಪಂಡಿತ ಜವಾಹರಲಾಲ್ ನೆಹರು ಪ್ರಮುಖ ಕಾರಣ ಎಂದು ಆರೋಪಿಸಿದ್ದಾರೆ.

ಸರ್ದಾರ್ ವಲ್ಲಭಾಯಿ ಪಟೇಲ್ ಅಥವಾ ನೇತಾಜಿ ಸುಭಾಷ ಚಂದ್ರಭೋಸ ಪ್ರಧಾನಿಯಾಗಿದ್ದರೆ ದೇಶ ಇಬ್ಬಾಗ ಆಗುತ್ತಿರಲಿಲ್ಲ. ಗಾಂಧಿ ಅವರು ನೆಹರು ಪ್ರಧಾನಿಯಾಗಲಿ ಎಂದು ಹಠ ಹಿಡಿದರು, ಅದಕ್ಕಾಗಿ ದೇಶ ಇಬ್ಬಾಗ ಮಾಡಿ ಕೊಟ್ಟರು. ಪಾಕಿಸ್ತಾನಕ್ಕೆ ಅನುಕೂಲವಾಗಲು ಕಾಶ್ಮೀರಕ್ಕೆ 370 ಕೊಟ್ಟರು. ಒಂದು ವೇಳೆ ವಲ್ಲಭಭಾಯಿ ಪಟೇಲ್ ಇರದಿದ್ದರೆ ಹೈದ್ರಬಾದ್ ನಮ್ಮ ಭಾಗದಲ್ಲಿ ಇರತಿರಲಿಲ್ಲ ಎಂದು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪಾಕಿಸ್ತಾನ ಇಬ್ಬಾಗಕ್ಕೆ ವಿರೋಧಿಸಿದ್ದರು ಭಾರತ ಒಡೆಯಬೇಡಿ ಎಂದು ಅಂಬೇಡ್ಕರ್ ಹೇಳಿದ್ದರು. ಒಂದು ವೇಳೆ ಅನಿವಾರ್ಯ ಬಂದರೆ ರಾಷ್ಟ್ರಾಂತರ ಮಾಡಿ ಎಂದಿದ್ದರು. ಪಾಕಿಸ್ತಾನದಲ್ಲಿನ ಹಿಂದುಗಳನ್ನು ಭಾರತಕ್ಕೆ ತನ್ನಿ, ಇಲ್ಲಿರುವ ಮುಸ್ಲಿಂ ಅವರನ್ನು ಪಾಕಿಸ್ತಾನ ಕಳುಹಿಸಿ ಎಂದಿದ್ದರು‌ ಅಂಬೇಡ್ಕರ್ ಎಂದು ತಿಳಿಸಿದರು.

ಇಸ್ಲಾಂ ಧರ್ಮದಲ್ಲಿ ಮತ್ತೊಂದು ಧರ್ಮದವರನ್ನು ಸಹೋದರರಂತೆ ನೋಡುವ ಸಂಸ್ಕೃತಿ ಇಲ್ಲ. ಪಾಕಿಸ್ತಾನದ ದಲಿತರಿಗೆ ಅಂಬೇಡ್ಕರ್ ಕರೆ ಕೊಟ್ಟರು. ನೀವೆಲ್ಲ ಭಾರತಕ್ಕೆ ಬನ್ನಿ ಅಲ್ಲಿ ನೀವು ಸುರಕ್ಷಿತರಿಲ್ಲ ಎಂದು ಹೇಳಿದ್ದರು. ಕೇವಲ ಪಂಡಿತ ಜವಾಹರಲಾಲ್ ನೆಹರು ಕಾರಣದಿಂದ ಭಾರತ ಇಭ್ಬಾಗವಾಯಿತು. ಇವರ ಕಾರಣದಿಂದಲೇ ಕೋಟ್ಯಾಂತರ ಹಿಂದುಗಳ ರಕ್ತಪಾತವಾಯಿತು ಎಂದು ವಾಗ್ದಾಳಿ ಮಾಡಿದರು.

ಹೀಗಾಗಿ ನೆಹರು ಅವರನ್ನು ಜಾಹಿರಾತಿನಿಂದ ಬಿಟ್ಟಿದ್ದು ಯಾವುದೇ ಬೇಸರವಿಲ್ಲ. ನಮ್ಮ ಆದರ್ಶ ಏನಿದ್ದರು ವಲ್ಲಭಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ ಚಂದ್ರ ಭೋಸ, ವಾಜಪೇಯಿ, ಮೋದಿ ಎಂದು ಮಾತನಾಡಿದರು.

ಲಾಲ್ ಸಿಂಗ್ ಚಡ್ಡಾ ಚಿತ್ರ ವಿವಾದ ವಿಚಾರ ಕುರಿತು ಮಾತನಾಡಿದ ಅವರು ನಟ ಅಮೀರ ಖಾನ್ ನಾಗರ ಹಾವಿಗೆ ಹಾಲು ಹಾಕುವದು ಅವಮಾನ ಎನ್ನುತ್ತಾನೆ. ಹಾಗಾದರೆ ಬಕ್ರೀದ ವೇಳೆ ಕುರಿ ಕೊಯ್ಯೋದು ಅದನ್ನೇಕೆ ಮೂಡ ನಂಬಿಕೆ ಅನ್ನಲ್ಲ ? ಹಿಂದುಗಳ ದೇವತೆಗಳನ್ನು ಅಸಹ್ಯಕರವಾಗಿ ಚಿತ್ರಿಸುತ್ತಾನೆ. ಹಿಂದು ಧರ್ಮದ ವಿರುದ್ದ ಅವನ ಚಿತ್ರಗಳು ಬರುತ್ತವೆ. ಶಾರುಕ ಖಾನ್, ಸಲ್ಮಾನ ಖಾನ್, ಸೈಫಲಿ ಖಾನ್, ಅಮೀರ್ ಖಾನ್ ಪಾಕಿಸ್ತಾನದ ಎಜೆಂಟರಾಗಿ ಕೆಲಸ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದೇಶದ ಅನ್ನ ತಿಂದು, ಈ ದೇಶದ ಅಭಿಮಾನಿಗಳು ಚಿತ್ರ ನೋಡಿ ಹಣ ಕೊಟ್ಟಿರುತ್ತಾರೆ. ಹಿಂದುತ್ವಕ್ಕೆ ಅಪಮಾನ ಮಾಡಿದ್ದಾರೆ ಅದಕ್ಕೆ ತಕ್ಕ ಶಾಸ್ತಿ ಆಗಬೇಕು. ಅಮೀರ್ ಖಾನ್ ಚಡ್ಡಿ ತೊಯ್ಯೂವಂತೆ ದೇಶದ ಹಿಂದುಗಳು ಮಾಡಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಹುಟ್ಟಿರೋದೆ ಹಿಂದೂರಾಷ್ಟ್ರ ಮಾಡಲಿಕ್ಕೆ ಮತ್ತು ಅಖಂಡ ಭಾರತ ಮಾಡಲಿಕ್ಕೆ. ಹಿಂದೂಗಳು ಹೆಚ್ಚಿರೋದು ಹಿಂದು ರಾಷ್ಟ್ರ. ಮುಸ್ಲಿಂಮರು ಹೆಚ್ಚಿರೋದು ಪಾಕಿಸ್ತಾನ. ಮಹಾತ್ಮ ಗಾಂಧಿ ಇದೇ ರೀತಿ ದೇಶ ಒಡೆದುಕೊಟ್ಟಿದ್ದಾರೆ. ಪಾಕಿಸ್ತಾನ ಯಾಕೆ ಒಡೆದುಕೊಟ್ಟರು ಗೊತ್ತಿಲ್ಲ. ಆ ಪುಣ್ಯಾತ್ಮ (ಗಾಂಧಿಜಿ) ಮಾಡಿದ ತಪ್ಪಿನಿಂದ ಕೋಟ್ಯಾಂತರ ಹಿಂದೂಗಳು ಸತ್ತರು ಎಂದರು.

ಪಾಕಿಸ್ತಾನಕ್ಕೆ 50 ಕೋಟಿ ನೀಡುವಂತೆ ಗಾಂಧಿಜೀ ಉಪವಾಸ ಕುಳಿತರು. ಇವರು ದೊಡ್ಡವರಾಗೋಕೆ ಕೋಟ್ಯಾಂತರ ಹಿಂದೂಗಳ ರಕ್ತಪಾತವಾಯಿತು. ಮುಂದೇ ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರವೇ ಭಾರತದ ವಶವಾಗಲಿದೆ. ಪ್ರಧಾನಿ ಮೋದಿ ಅಂತಹ ನಾಯಕರ ಇರುವಾಗ ಇದು ಸಾಧ್ಯವಿದೆ ಎಂದು ಮಾತನಾಡಿದರು.

Published On - 3:03 pm, Mon, 15 August 22

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ