ವಿಜಯಪುರದ ಹೂವಿನ ಮಾರುಕಟ್ಟೆಯಲ್ಲಿ ದಲ್ಲಾಳಿ ಮತ್ತು ರೈತರ ನಡುವೆ ಗಲಾಟೆ, ರಸ್ತೆಗೆ ಹೂವು ಎಸೆದು ಪ್ರತಿಭಟನೆ
ವಿಜಯಪುರದಲ್ಲಿ ರೈತರಿಗೆಂದೇ ಇರುವ ಹೂವಿನ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಮಾರಾಟ ಮಾಡಲು ಯಾವುದೇ ಅನುಮತಿಯಿಲ್ಲದಿದ್ದರೂ ಅಕ್ರಮವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ಹೀಗಾಗಿ ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.
ವಿಜಯಪುರ ಸೆ.15: ನಗರದ ಉಪ್ಪಲಿ ಬುರ್ಜ್ ಬಳಿಯ ಹೂವಿನ ಮಾರುಕಟ್ಟೆಯಲ್ಲಿ ದಲ್ಲಾಳಿ (Broker) ಮತ್ತು ರೈತರ (Farmer) ನಡುವಿನ ಗಲಾಟೆ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ದಲ್ಲಾಳಿಗಳು ಬೇರೆ ಬೇರೆ ಜಿಲ್ಲೆಗಳಿಂದ ಹೂವು ತರಿಸಿ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಇಂದು (ಸೆ.15) ದಲ್ಲಾಳಿಗಳ ವಿರುದ್ಧ ಘೋಷಣೆ ಕೂಗಿ ರಸ್ತೆ ಮೇಲೆ ಹೂವು ಚೆಲ್ಲಿ, ಪ್ರತಿಭಟನೆ ಮಾಡಿದ್ದಾರೆ. ದಲ್ಲಾಳಿಗಳ ಈ ಕ್ರಮದಿಂದ ನಮಗೆ ನಷ್ಟವಾಗುತ್ತಿದೆ. ರೈತರಿಗೆಂದೇ ಇರುವ ಹೂವಿನ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಮಾರಾಟ ಮಾಡಲು ಯಾವುದೇ ಅನುಮತಿಯಿಲ್ಲದಿದ್ದರೂ ಅಕ್ರಮವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ಹೀಗಾಗಿ ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.
ಸೇವಂತಿ ಹೂವಿನ ದರ ಕುಸಿತ ಹಿನ್ನೆಲೆ ಸಸಿಗಳನ್ನ ನಾಶ ಮಾಡಿದ ರೈತ
ಮಂಡ್ಯ: ಸೇವಂತಿ ಹೂವಿನ ದರ ಕುಸಿತಗೊಂಡ ಹಿನ್ನೆಲೆಯಲ್ಲಿ ಪಾಂಡವಪುರ ತಾಲೂಕಿನ ಬೆಳ್ಳಾಳೆ ಗ್ರಾಮದ ರೈತ ಹೂವಿನ ಗಿಡಗಳನ್ನು ನಾಶ ಮಾಡಿದ್ದಾರೆ. ಬೆಲೆ ಇಳಿಯಾಗಿದ್ದರಿಂದ, ಹೂವಿನ ಕೃಷಿಗೆ ಖರ್ಚು ಮಾಡಿದ ಹಣ ಕೂಡ ಬರುವುದಿಲ್ಲ. ಹೀಗಾಗಿ ರೈತ ಅಭಿಷೇಕ್ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹೂವಿನ ಸಸಿಗಳನ್ನು ಟ್ರ್ಯಾಕ್ಟರ್ನಿಂದ ನಾಶ ಮಾಡಿದ್ದಾರೆ. ಇನ್ನು ಕೆಲವು ರೈತರು ಹೂಗಳನ್ನು ನದಿಗೆ ಎಸೆದು ಬರಿಗೈಲಿ ವಾಪಸು ಬಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:54 am, Fri, 15 September 23