ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ; ಎತ್ತಿಗೆ ಮುತ್ತಿಟ್ಟ ಸಿಎಂ ಬೊಮ್ಮಾಯಿ

ಕಾರ್ಯಕ್ರಮ ವೇದಿಕೆಯಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಜನಪ್ರಿಯ ಕಾರ್ಯಕ್ರಮಗಳನ್ನು ಬಂದ್ ಮಾಡಬೇಕೆಂದು‌ ಸಿಎಂ ಎದುರಿಗೆ ಭಾಷಣ ಮಾಡಿದ್ದಾರೆ. ತಾಳಿ ಭಾಗ್ಯ ಬೇಡ, ಅನ್ನ ಭಾಗ್ಯ ಬೇಡ ಇತ್ಯಾದಿ‌ ಭಾಗ್ಯಗಳು ಬೇಡ. ಇವೆಲ್ಲಾ ದರಿದ್ರ ಮಾಡೋ ಯೋಜನೆಗಳು ಎಂದು ಯತ್ನಾಳ್‌ ವಾಗ್ದಾಳಿ ನಡೆಸಿದ್ರು.

ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ; ಎತ್ತಿಗೆ ಮುತ್ತಿಟ್ಟ ಸಿಎಂ ಬೊಮ್ಮಾಯಿ
ಎತ್ತಿಗೆ ಮುತ್ತಿಟ್ಟ ಸಿಎಂ ಬೊಮ್ಮಾಯಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Apr 26, 2022 | 4:22 PM

ವಿಜಯಪುರ: ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರು ಗ್ರಾಮದ ಬಳಿ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕೊಡಗಾನೂರು ಗ್ರಾಮದ ಬಳಿ ನಡೆದ ಕಾರ್ಯಕ್ರಮದಲ್ಲಿ ವಿದ್ಯುತ್ ಗುಂಡಿ ಒತ್ತುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ತಾಳಿಕೋಟೆ, ದೇವರಹಿಪ್ಪರಗಿ ತಾಲೂಕಿನ 38 ಗ್ರಾಮಗಳ 50 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಯೋಜನೆ ಇದಾಗಿದೆ.

ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಯುಕೆಪಿ ಹಂತ 3 ಪೂರ್ಣಗೊಳಿಸಲು ಕಾಲ ಕೂಡಿ ಬಂದಿದೆ. ಅದಕ್ಕಾಗಿ ಕಾನೂನಾತ್ಮಕ ಹೋರಾಟ ನಡೆದಿದೆ. ಇನ್ನೆರೆಡು ಅಥವಾ ಮೂರು ತಿಂಗಳಲ್ಲಿ ಆದೇಶ ಬರಲಿದೆ. ನಮ್ಮ‌ ರಾಜ್ಯದ ಪಾಲಿನ 130 ಟಿಎಂಸಿ ನೀರು ಸಿಗಲಿದೆ‌. ಆಲಮಟ್ಟಿ ಅಣೆಕಟ್ಟು ಎತ್ತರವಾಗಲಿದೆ. ಸುಮಾರು ಐವತ್ತು ಸಾವಿರಕೋಟಿ ರೂಪಾಯಿ ಹಣ ಬೇಕಿದೆ. ಆದೇಶ ಬಂದ ತಕ್ಷಣ ಎಷ್ಟು ಹಣ ಬೇಕೋ ಅಷ್ಟು ಹಣ ಒದಗಿಸುವುದಾಗಿ ಸಿಎಂ ತಿಳಿಸಿದರು. ಹಿಂದೆ ಇದೇ ಯೋಜನೆ ವಿಚಾರದಲ್ಲಿ ಆಗಿನ ಸಿಎಂ ಎಸ್ ಎಂ ಕೃಷ್ಣ ಕೋರ್ಟ್ ಗೆ ಹೋಗಿ ಕ್ಷಮೆ ಕೇಳಿದ್ದರು ಎಂದು ನನಗೆ ಹೆದರಿಸಿದ್ದರು. ಇದು ರಾಜ್ಯದ ರೈತರ ವಿಷಯ ನಾನು ಕ್ಷಮೆ ಅಲ್ಲ ಗಲ್ಲಿಗೇರಿಸಿದರೂ ಅದಕ್ಕೆ ಸಿದ್ದ ಎಂದಿದ್ದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾಷಣದಲ್ಲಿ ಹೇಳಿದ್ದಾರೆ.

ಹೀಗಾಗಿ ಯುಕೆಪಿ ನೀರಾವರಿಗೆ ಎಷ್ಟೇ ಹಣ ಖರ್ಚಾದರೂ ಅದಕ್ಕೆ ಬದ್ದ. ಯಾರು ಯಾವ ಪಕ್ಷದಲ್ಲಿ ಇರುತ್ತಾರೆ ಎಂಬುದು ಮುಖ್ಯ ಅಲ್ಲ. ನಮಗೆ ರೈತರು ಮುಖ್ಯ. ರೈತರು ಯಾವುದೇ ಪಕ್ಷಕ್ಕೆ ಸೇರಿಲ್ಲ. ಎಲ್ಲ ಪಕ್ಷಗಳೂ ರೈತರಿಗೆ ಸೇರಿದ್ದು. ನೀರಾವರಿ ವಿಚಾರದಲ್ಲಿ ವಿಜಯಪುರ ಜಿಲ್ಲೆಯ ತ್ಯಾಗ ದೊಡ್ಡದು. ನೀರಾವರಿಗೆ ಜಮೀನು ಕಳೆದುಕೊಂಡ ರೈತರಿಗೆ ಅನಂತ ಪ್ರಣಾಮ ಎಂದರು. ರೈತರು ತ್ಯಾಗ ಮಾಡದೇ ಇದ್ದರೇ ಉತ್ತರ ಕರ್ನಾಟಕದಲ್ಲಿ ನೀರಾವರಿ ಸಾಧ್ಯವಿರಲಿಲ್ಲ. ಅಜ್ಜ ಮುತ್ತಜ್ಜನ ಕಾಲದಿಂದ ಉಳಿಸಿಕೊಂಡು ಬಂದ ಜಮೀನು ತ್ಯಾಗ ಮಾಡಿದ್ದು, ಅವರ ತ್ಯಾಗ ದೊಡ್ಡದು. ನಾನು ನೀರಾವರಿ ಸಚಿವನಾದ ಮೇಲೆ ನ್ಯಾಯಾಧೀಕರಣದಿಂದಾಗಿ ನನ್ನ ಕೈ ಕಟ್ಟಿ ಹಾಕಲಾಗಿತ್ತು ಅದಾಗ್ಯೂ ಗುತ್ತಿ ಬಸವಣ್ಣ, ಮುಳವಾಡ ಚಿಮ್ಮಲಗಿ ಏತ ನೀರಾವರಿಗೆ ಅಡಿಗಲ್ಲು ಹಾಕಿದೇವು ಆಲಮಟ್ಟಿ ಅಣೆಕಟ್ಟು ಎತ್ತರಿಸಿದಾಗ ಈ ಎಲ್ಲ ನೀರಾವರಿ ಯೋಜನೆ ಸಾಧ್ಯವಾಗಲಿದೆ.

ನನಗೆ ಭಗೀರಥ ಆಗುವ ಕನಸು, ಮನಸ್ಸು ಎರಡೂ ಇಲ್ಲ. ಆದರೆ ನನ್ನ ರೈತರು ಎಂದಿಗೂ ನೀರಿಗೆ ಕೈಯೊಡ್ಡಬಾರದು. ಈ ಭೂ ತಾಯಿಗೆ ಹಸಿರು ಉಡಿಸಬೇಕೆಂಬುದಷ್ಟೇ ನನ್ನ ಕನಸು. ನಾವೆಲ್ಲ ನಿಮ್ಮ ಶಕ್ತಿ, ನಿಮ್ಮ ಬೆಂಬಲದಿಂದ ಆಯ್ಕೆಯಾದವರು ನಿಮ್ಮ ಬೇಡಿಕೆಗೆ ನ್ಯಾಯ ಕಲ್ಪಿಸುವುದು ನಮ್ಮ ಜವಾಬ್ದಾರಿ. ಬೂದಿಹಾಳ- ಪೀರಾಪುರ ಯೋಜನೆಯ ಮೂಲಕ ಐವತ್ತು ಸಾವಿರ ಎಕರೆ ನೀರಾವರಿ ಗೊಳಪಡಿಸಲಾಗುತ್ತಿದೆ. ಬೂದಿಹಾಳ ಪೀರಾಪೂರ ಏತ ನೀರಾವರಿಯನ್ನು ಕಾಲಮಿತಿಯಲ್ಲಿ‌ ಮುಗಿಸಿ ನೀರು ಕಲ್ಪಿಸಲಾಗುವುದು ಅಡ್ಡಿಗಲ್ಲು ಹಾಕಿದ ಮಾತ್ರಕ್ಕೆ‌ ನಮಗೆ ಸಮಾಧಾನ ಇಲ್ಲ. ಯಾವಾಗ ರೈತರ ಜಮೀನಿಗೆ ನೀರು ಹರಿಯುವುದೋ ಆಗ ನಮಗೆ ಸಮಾಧಾನ. ಅಲ್ಲಿಯವರೆಗೆ ವಿಶ್ರಮಿಸಲ್ಲ ಎಂದು ಹೇಳಿದರು.

ಎತ್ತಿಗೆ ಮುತ್ತಿಟ್ಟ ಸಿಎಂ ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆ ಮೊದಲ ಹಂತ ಉದ್ಘಾಟನೆ ಹಾಗೂ ಎರಡನೇ ಹಂತದ ಕಾಮಗಾರಿ ಶಂಕುಸ್ಥಾಪನೆ ಮುನ್ನ ಸಿಎಂ ಬೊಮ್ಮಾಯಿ ಗೋವಿಗೆ ಪೂಜೆ ಸಲ್ಲಿಸಿದ್ರು. ಕೊಡಗಾನೂರ ಗ್ರಾಮದಲ್ಲಿ ಬಂಟನೂರು ಗ್ರಾಮದ ರೈತರು ಸಿಎಂ ಬೊಮ್ಮಾಯಿಗೆ ಜೋಡೆತ್ತು ಹಾಗೂ ಹಸು ಕಾಣಿಕೆ ಕೊಟ್ಟರು. ಈ ವೇಳೆ ಎತ್ತಿನ ಮೈಮೇಲೆ ಕೈಯಾಡಿಸಿ ಸಿಎಂ ಬೊಮ್ಮಾಯಿ ಎತ್ತಿಗೆ ಮುತ್ತಿಟ್ಟಿದ್ದಾರೆ. ಬಳಿಕ ಸಿಎಂ ಹಸು ಮಟ್ಟಲು ಹೋದಾಗ ಹಸು ಗಲಿಬಿಲಿಗೊಂಡಿತು ಆಗ ರೈತರು ಹಸುವನ್ನು ಸಮಾಧಾನಪಡಿಸಿದರು. ನಂತರ ಕಾರ್ಯಕ್ರಮದಲ್ಲಿ ಸಿಎಂ ಹಾಗೂ ಇತರೆ ನಾಯಕರು ಭಾಗಿಯಾದ್ರು.

ಅನ್ನಭಾಗ್ಯ ಯೋಜನೆ ಜನರನ್ನ ದರಿದ್ರ ಮಾಡುತ್ತದೆ ಇನ್ನು ಕಾರ್ಯಕ್ರಮ ವೇದಿಕೆಯಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಜನಪ್ರಿಯ ಕಾರ್ಯಕ್ರಮಗಳನ್ನು ಬಂದ್ ಮಾಡಬೇಕೆಂದು‌ ಸಿಎಂ ಎದುರಿಗೆ ಭಾಷಣ ಮಾಡಿದ್ದಾರೆ. ತಾಳಿ ಭಾಗ್ಯ ಬೇಡ, ಅನ್ನ ಭಾಗ್ಯ ಬೇಡ ಇತ್ಯಾದಿ‌ ಭಾಗ್ಯಗಳು ಬೇಡ. ಇವೆಲ್ಲಾ ದರಿದ್ರ ಮಾಡೋ ಯೋಜನೆಗಳು ಎಂದು ಯತ್ನಾಳ್‌ ವಾಗ್ದಾಳಿ ನಡೆಸಿದ್ರು. ಅನ್ನಭಾಗ್ಯ ಯೋಜನೆ ಜನರನ್ನ ದರಿದ್ರ ಮಾಡುತ್ತದೆ. ಈ ಯೋಜನೆಗಳನ್ನ ಬಂದ್ ಮಾಡಿ ಎಂದು ವೇದಿಕೆ ಮೇಲೆ ಸಿಎಂಗೆ ಮನವಿ ಮಾಡಿದ್ರು.

ಯೋಜನೆ ಬಂದ್ ಮಾಡಲು ಧೈರ್ಯ ಮಾಡಿ ಆಗಿದ್ದಾಗಲಿ ಎಂದು ಸಿಎಂಗೆ ಯತ್ನಾಳ್ ಒತ್ತಾಯ ಮಾಡಿದ್ದಾರೆ. ದೇವರ ಹಿಪ್ಪರಗಿ ಶಾಸಕರ ಮೇಲೆ ಸಿಎಂಗೆ ಲವ್ ಇದೆ. ಹಾಗಾಗಿ ಶಾಸಕ ಸೋಮನಗೌಡರ ಕೆಲಸಗಳನ್ನು ಮಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಸೋಮನಗೌಡ ಪಾಟೀಲ್ ಪರ‌ಮತ ಚಲಾಯಿಸಬೇಕೆಂದು ಭಾಷಣದ ವೇಳೆ ಸ್ವಪಕ್ಷೀಯ ಶಾಸಕ ನಡಹಳ್ಳಿ ಹಾಗೂ ಸಂಸದ ಜಿಗಜಿಣಗಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಬೊಮ್ಮಾಯಿ ಮತ್ತೆ ಸಿಎಂ ಆದ್ರೆ ನಮಗೇನು ತಕರಾರು ಇಲ್ಲ ಮುಂದಿನ ಬಾರಿಯೂ ಬೊಮ್ಮಾಯಿರವರೇ ಸಿಎಂ ಆಗ್ತಾರೆ. ಬೊಮ್ಮಾಯಿ ಮತ್ತೆ ಸಿಎಂ ಆದ್ರೆ ನಮಗೇನು ತಕರಾರು ಇಲ್ಲ ಎಂದು ಯತ್ನಾಳ್ ಹೇಳಿದ್ದು ಯತ್ನಾಳ್ ಮಾತಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಕೈ ಮುಗಿದ್ರು.

ಇದನ್ನೂ ಓದಿ: ಹಾವೇರಿ: 9 ವರ್ಷದ ಬಾಲಕಿ ಮೇಲೆ ಲೈಗಿಂಕ ದೌರ್ಜನ್ಯ ಎಸಗಿದ 59 ವರ್ಷದ ವೃದ್ದ

Published On - 2:59 pm, Tue, 26 April 22

ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ