ದೇವಾತನಯಂ ಸಮ್ಮೇಳನಕ್ಕೆ ಚಾಲನೆ: ವಿಜಯನಗರ ಸಾಮ್ರಾಜ್ಯ ದಲ್ಲಿ ಹುಟ್ಟಿದ ನಾವೆಲ್ಲರೂ ಹೆಮ್ಮೆಪಡಬೇಕು -ಸಚಿವ ಆನಂದ್ ಸಿಂಗ್

ಹಂಪಿಯಲ್ಲಿ ನಡೆಯುತ್ತಿರುವ ದೇವಾತನಯಂ ಸಮ್ಮೇಳನದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿದ್ರು. ಗಂಡುಮೆಟ್ಟಿದ ನಾಡಿನಲ್ಲಿ ನಾವು ನಿಂತಿದ್ದೇವೆ. ವಿದ್ಯಾರಣ್ಯರ ಕನಸಿನಿಂದ ವಿಜಯನಗರ ಸಾಮ್ರಾಜ್ಯ ಆರಂಭವಾಯಿತು. -ಸಚಿವ ಆನಂದ್ ಸಿಂಗ್

ದೇವಾತನಯಂ ಸಮ್ಮೇಳನಕ್ಕೆ ಚಾಲನೆ: ವಿಜಯನಗರ ಸಾಮ್ರಾಜ್ಯ ದಲ್ಲಿ ಹುಟ್ಟಿದ ನಾವೆಲ್ಲರೂ ಹೆಮ್ಮೆಪಡಬೇಕು -ಸಚಿವ ಆನಂದ್ ಸಿಂಗ್
ವಿಜಯನಗರದಲ್ಲಿ ದೇವಾತನಯಂ ಸಮ್ಮೇಳನ
Follow us
TV9 Web
| Updated By: ಆಯೇಷಾ ಬಾನು

Updated on:Feb 25, 2022 | 1:15 PM

ವಿಜಯನಗರ: ಹೊಸಪೇಟೆ ತಾಲೂಕಿನ ಕಮಲಾಪುರದ ಪಟ್ಟಾಭಿರಾಮ ದೇವಾಯಲದಲ್ಲಿ ದೇವಾಲಯ ವಾಸ್ತುಶಿಲ್ಪ ಕುರಿತು ದೇವಾಯತನಂ ಸಮ್ಮೇಳನಕ್ಕೆ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಕಿಷನ್ ರೆಡ್ಡಿ ಚಾಲನೆ ನೀಡಿದ್ದಾರೆ. ಸಾರಿಗೆ ಸಚಿವ ಬಿ.ಶ್ರೀರಾಮುಲು, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಶಾಸಕ ಸೋಮಶೇಖರ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಹಂಪಿಯಲ್ಲಿ ನಡೆಯುತ್ತಿರುವ ದೇವಾತನಯಂ ಸಮ್ಮೇಳನದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿದ್ರು. ಗಂಡುಮೆಟ್ಟಿದ ನಾಡಿನಲ್ಲಿ ನಾವು ನಿಂತಿದ್ದೇವೆ. ವಿದ್ಯಾರಣ್ಯರ ಕನಸಿನಿಂದ ವಿಜಯನಗರ ಸಾಮ್ರಾಜ್ಯ ಆರಂಭವಾಯಿತು. ವಿಜಯನಗರ ಸಾಮ್ರಾಜ್ಯದಲ್ಲಿ ಹುಟ್ಟಿದ ನಾವೆಲ್ಲರೂ ಹೆಮ್ಮೆಪಡಬೇಕು. ವಾಸ್ತುಶಿಲ್ಪ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಕೃಷ್ಣದೇವರಾಯ ಸೇರಿದಂತೆ ಮಹಾನ್ ಪುರುಷರು ಓಡಾಡಿರುವ ಈ ಸ್ಥಳದ ಕುರಿತು ಶಿಲ್ಪಕಲೆಗಳಿಂದ ಗೊತ್ತಾಗುತ್ತೆ. ಇಂದು ನಾವು ಪ್ರಕೃತಿಯನ್ನು ಹಾಳು ಮಾಡುತ್ತಿದ್ದೇವೆ. ನಾವು ಈ ಯಾವ ಸ್ಮಾರಕಗಳನ್ನೂ ಉಳಿಸುತ್ತಿಲ್ಲ. ಇದನ್ನು ಉಳಿಸುವುದು ಬೆಳೆಸುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜವಾಬ್ದಾರಿ. ಇವು ರಕ್ಷಣೆ ಆದರೆ ಮಾತ್ರ ಮುಂದಿನ ಜನಾಂಗಕ್ಕೆ ಇತಿಹಾಸ ತಿಳಿಸೋಕೆ ಸಾಧ್ಯ. ಈ ಇತಿಹಾಸವನ್ನು ಕಟ್ಟಲು ಪ್ರಪಂಚದ ಯಾರಿಗೂ ಸಾಧ್ಯವಿಲ್ಲ, ಇದಕ್ಕೆ ಪರ್ಯಾಯ ಯಾವುದೂ ಇಲ್ಲ. ಅಧಿಕಾರಿಗಳು ಹೇಳ್ತಿದ್ರು, ವಿಜಯನಗರದ 10% ಸಹ ನಾವೂ ಕಂಡುಹಿಡಿದಿಲ್ಲ ಅಂತ ಎಂದು ಭಾಷಣದಲ್ಲಿ ಆನಂದ್ ಸಿಂಗ್ ವಿಜಯನಗರ ವೈಭವವನ್ನು ಹಾಡಿ ಹೊಗಳಿದ್ರು.

ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, ಈ ಸಮ್ಮೇಳನ ಹಂಪಿಯಲ್ಲಿ ನಡೆಯುತ್ತಿರುವುದು ಸಂತೋಷ. ರಾಜ್ಯದಲ್ಲಿ ಪ್ರವಾಸೋದ್ಯಮದ ಮುಕುಟಕ್ಕೆ ಕಿರೀಟ ಹಂಪಿ. ಹಂಪಿಯ ಪ್ರತಿ ಕಲ್ಲಿನಲ್ಲಿ ಸಂಸ್ಕೃತಿ ಕಾಣುತ್ತದೆ. ವಿಶ್ವದಲ್ಲಿ ಹಂಪಿಯದ್ದೇ ಪ್ರತ್ಯೇಕ ಗುರುತಿಸುವಿಕೆ ಇದೆ. ಶ್ರೀಕೃಷ್ಣದೇವರಾಯನ‌ ಕಾಲ ಬಂಗಾರದಲ್ಲಿ ಬರೆದು ಇಡಬೇಕಾದ ಕಾಲ. ಕಲೆ ತಂತ್ರಜ್ಞಾನ ವಿಜ್ಞಾನದ ಕಾಲದಲ್ಲಿಯೂ ಇಲ್ಲಿಯ ವಾಸ್ತುಶಿಲ್ಪ ಹೆಸರುವಾಸಿಯಾಗಿದೆ. ಜಗತ್ತಿನಲ್ಲಿ ವಾಸ್ತುಶಿಲ್ಪದ ಬಗ್ಗೆ ಸಂಶೋಧನೆ ಮಾಡಿದವರು ಹಂಪಿಯನ್ನು ಕಲಿಕೆಯ ವಿಶ್ವವಿದ್ಯಾಲಯ ಎಂದು ಕರೆಯುತ್ತಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ದೇವಾಲಯಗಳ ಜೀರ್ಣೋದ್ಧಾರ ಕೆಲಸ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೇರಿ ಮಾಡೋಣ ಎಂದು ಹೇಳಿದ್ರು.

ಕರ್ನಾಟಕದ ಬೇಲೂರು, ಹಳೆಬೀಡು ಸೋಮನಾಥಪುರವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಬೇಡಿಕೆ ಇಡಲಾಗಿದೆ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಕೇಂದ್ರ ಸಚಿವ ಕಿಷನ್ ರೆಡ್ಡಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಭಾರತ ಸರ್ಕಾರ ಈ ಬಾರಿ 2023 ಆಗಸ್ಟ್ 15 ರವರೆಗೂ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮವಿದೆ. ಕೊರೊನಾ ಕಾರಣದಿಂದ ಕಾರ್ಯಕ್ರಮ ಆರಂಭವಾಗಿಲ್ಲ. ದೇವರ ಆಶೀರ್ವಾದದಿಂದ ಕೊರೊನಾ ಕಡಿಮೆಯಾಗಿದೆ. ಜನರ ಭಾಗವಹಿಸುವಿಕೆಯಲ್ಲಿ ಇನ್ಮೇಲೆ ದೇಶಾದ್ಯಂತ ಬೇರೆ ಬೇರೆ ಕಾರ್ಯಕ್ರಮ ನಡೆಯಲಿವೆ. ದೇವಾಲಯದ ವಾಸ್ತುಶಿಲ್ಪ ರಕ್ಷಣೆ, ತಂತ್ರಜ್ಞಾನದ ಕುರಿತು ಸಮ್ಮೇಳನ ನಡೆಯಲಿದೆ. ಇದು ಆರಂಭ ಮಾತ್ರ ಮುಂದಿನ ದಿನಗಳಲ್ಲಿ ಜನರ ಬಳಿಗೆ ಈ ವಿಚಾರ ತೆಗೆದುಕೊಂಡು ಹೋಗುತ್ತೇವೆ. ಕಳೆದ ವರ್ಷ ಆಂಧ್ರದ ರಾಮಪ್ಪ ದೇವಸ್ಥಾನ ಯುನೆಸ್ಕೋ ಪರವಾನಿಗೆ ಪಡೆದಿದೆ. ಕರ್ನಾಟಕದ ಬೇಲೂರು, ಹಳೆಬೀಡು ಸೋಮನಾಥಪುರವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಕಳಿಸಲಾಗಿದೆ. ಸಿಎಂ ಬೊಮ್ಮಾಯಿ ಆನಂದ್ ಸಿಂಗ್ ಅವರಿಗೂ ಪತ್ರ ಬರೆದು ತಿಳಿಸಲಾಗಿದೆ. ಪ್ರತಿನಿಧಿಗಳು ಬರುವುದರೊಳಗೆ ಬೇಕಾದ ವ್ಯವಸ್ಥೆ ಮಾಡುಕೊಳ್ಳಲು ತಿಳಿಸಲಾಗಿದೆ. ಸ್ಮಾರಕಗಳನ್ನು ರಕ್ಷಿಸಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. ಮುಂದಿನ ಪೀಳಿಗೆಗೆ ತಿಳಿಸಲು ಪ್ರಯತ್ನಿಸಲಾಗುತ್ತಿದೆ. ಪುರಾತತ್ವ ಇಲಾಖೆ ಪರವಾನಿಗೆ ನೀಡಿದರೆ ಇನ್ನಷ್ಟು ದೇವಾಲಯಗಳನ್ನು ಜೀರ್ಣೋದ್ದಾರ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಸಿಲುಕಿರುವ ಮೊಮ್ಮಗನನ್ನು ನೆನೆದು ಬಾಗಲಕೋಟೆಯಲ್ಲಿ ಕಣ್ಣೀರಿಟ್ಟ ಅಜ್ಜಿ

ಕಾರವಾರದಲ್ಲಿ ಮನೆಯ ಮುಂದೆ ಇಟ್ಟಿದ್ದ ಅಡಕೆ ಮೂಟೆ ಕಳ್ಳತನ! ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Published On - 11:50 am, Fri, 25 February 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ