ವಿಜಯಪುರದಲ್ಲಿ ಮುಂದುವರೆದ ಡೋಣಿ ನದಿ ಪ್ರವಾಹ: ನೂರಾರು ಎಕರೆ ಕೃಷಿ ಭೂಮಿ ಜಲಾವೃತ, ಸಂಚಾರ ಬಂದ್

ಜಮೀನುಗಳಿಗೆ ಡೋಣಿ ನದಿ ಪ್ರವಾಹದ ನೀರು ನುಗ್ಗಿದ್ದು, ನೂರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ಜಲಾವೃತವಾಗಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.

ವಿಜಯಪುರದಲ್ಲಿ ಮುಂದುವರೆದ ಡೋಣಿ ನದಿ ಪ್ರವಾಹ: ನೂರಾರು ಎಕರೆ ಕೃಷಿ ಭೂಮಿ ಜಲಾವೃತ, ಸಂಚಾರ ಬಂದ್
ಡೋಣಿ ನದಿ ಪ್ರವಾಹ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 07, 2022 | 10:19 AM

ವಿಜಯಪುರ: ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ (flood) ಮುಂದುವರೆದಿದ್ದು, ಪ್ರವಾಹದಲ್ಲಿ ತಾಳಿಕೋಟೆ ಬಳಿಯ ಹಳೆಯ ಸೇತುವೆ ಮುಳುಗಿದೆ. ಹಳೆಯ ಸೇತುವೆ ಮೇಲೆ 7 ರಿಂದ 8 ಅಡಿಯಷ್ಟು ನೀರು ಹರಿಯುತ್ತಿದೆ. ರಾಜ್ಯ ಹೆದ್ದಾರಿ 61 ರಲ್ಲಿ ಸಂಚಾರ ಬಂದ್ ಆಗಿದೆ. ವಿಜಯಪುರ ತಾಳಿಕೋಟೆ ಹಾಗೂ ಇತರ ಭಾಗಗಳ ಸಂಪರ್ಕ ಕಡಿತವಾಗಿದ್ದು, 50 ಕ್ಕೂ ಆಧಿಕ ಕಿಲೋ ಮೀಟರ್ ಸುತ್ತು ಹಾಕೋ ಅನಿವಾರ್ಯತೆ ಎದುರಾಗಿದೆ. ಹೊಸ ಸೇತುವೆ ಬಿರುಕು ಬಿಟ್ಟು ವಾಲಿದ ಕಾರಣ ಅದರ ಮೇಲೆ ಸಂಚಾರ ನಿಷೇಧ ಮಾಡಲಾಗಿದೆ. ಆದರು ಅಪಾಯವನ್ನೂ ಲೆಕ್ಕಿಸದೇ ಶಿಶಿಲವಾದ ಸೇತುವೆ ಮೇಲೆ ಜನರು ಓಡಾಡುತ್ತಿದ್ದಾರೆ. ಡೋಣಿ ನದಿ ಪ್ರವಾಹದಿಂದಾಗಿ ತಾಳಿಕೋಟೆ ಪಟ್ಟಣದ ಹೊರ ಭಾಗದ ಡೋಣಿ ನದಿ ತಟದಲ್ಲಿರೋ ಆಂಜನೇಯ ಸ್ವಾಮಿ ದೇವಸ್ಥಾನ ಜಲಾವೃತವಾಗಿದ್ದು, ದೇವರಿಗೂ ಜಲದಿಗ್ಭಂಧನವೆನ್ನುವಂತ್ತಾಗಿದೆ. ದೇವಸ್ಥಾನದ ಅರ್ಧ ಭಾಗದವರೆಗೂ ಪ್ರವಾಹದ ನೀರು ಆವರಿಸಿಕೊಂಡಿದ್ದು, ಆಂಜನೇಯ ದೇವರ ಮೂರ್ತಿಯ ಭಾಗ ನೀರಲ್ಲಿ ಮುಳುಗಿದೆ. ಪೂಜೆ ಪುನಸ್ಕಾರಗಳಿಗೂ ಪ್ರವಾಹ ಬ್ರೇಕ್ ಹಾಕಿದೆ.

ಇದನ್ನೂ ಓದಿ: Karnataka Rain: ಕರ್ನಾಟಕದಾದ್ಯಂತ ಇಂದಿನಿಂದ 3 ದಿನ ಮಳೆಯಿಂದ ಹಳದಿ ಅಲರ್ಟ್​ ಘೋಷಣೆ

ಜಮೀನುಗಳಿಗೆ ಡೋಣಿ ನದಿ ಪ್ರವಾಹದ ನೀರು ನುಗ್ಗಿದ್ದು, ನೂರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ಜಲಾವೃತವಾಗಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ತಾಳಿಕೋಟೆ ತಾಲೂಕಿನ ಬೋಳವಾಡ, ಗುತ್ತಿಹಾಳ, ಬೊಮ್ಮನಹಳ್ಳಿ, ಹಡಗಿನಾಳ, ಮೂಕಿಹಾಳ, ಹರನಾಳ , ಕಲ್ಲದೇವರಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬೆಳೆ ಹಾನಿಯಾಗಿದ್ದು, ಪರಿಹಾರದ ಭರವಸೆ ನೀಡದೇ ಸೂಕ್ತ ಪರಿಹಾರ ನೀಡಲು ಅನ್ನದಾತರು ಒತ್ತಾಯಿಸುತ್ತಿದ್ದಾರೆ.

ಧಾರಾಕಾರ ಮಳೆ: ಕುಸಿದು ಬಿದ್ದ ಸೇತುವೆ

ರಾಮನಗರ: ಧಾರಾಕಾರ ಮಳೆ ಹಿನ್ನೆಲೆ ನೀರಿನ ರಭಸಕ್ಕೆ ಸೇತುವೆ ಕುಸಿದು ಬಿದ್ದಿರುವಂತಹ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಗ್ರಾಮದಲ್ಲಿ ನಡೆದಿದೆ. ಕೊಂಡಾಪುರ-ಬಾಣಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ರಾಮನಗರ ಕಣ್ವ ಜಲಾಶಯದಿಂದ ಹೆಚ್ಚಿನ ನೀರು ಹೊರ ಬಿಟ್ಟ ಹಿನ್ನೆಲೆ ಸೇತುವೆ ಕುಸಿದಿದೆ. ಕೊಂಡಾಪುರ-ಬಾಣಹಳ್ಳಿ ಗ್ರಾಮಗಳ ಸಂಪರ್ಕ ಕಟ್ ಆಗಿದ್ದು, ಗ್ರಾಮಗಳಲ್ಲಿನ ಜನರು ಇದೀಗ ಹತ್ತಾರು ಕಿಮೀ ಗಟ್ಟಲೆ ಬಳಸಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೆಲಕಚ್ಚಿದ ಎಲೆ ಕೋಸು ಹಾಗೂ ಸೋರೆಕಾಯಿ ಬೆಳೆ

ಕೋಲಾರ: ಮಳೆಯಿಂದ ಎಲೆ ಕೋಸು ಹಾಗೂ ಸೋರೆಕಾಯಿ ಬೆಳೆ ನೆಲ‌ ಕಚ್ಚಿರುವಂತಹ ಘಟನೆ ಕೋಲಾರ ತಾಲ್ಲೂಕು ಇರಗಸಂದ್ರ ಗ್ರಾಮದಲ್ಲಿ ಕಂಡು ಬಂದಿದೆ. ಇರಗಸಂದ್ರ ಗ್ರಾಮದ ಶಿವರಾಜ್ ಎಂಬುವರಿಗೆ ಸೇರಿದ ನಾಲ್ಕು ಎಕರೆ ಎಲೆಕೋಸು ಹಾಗೂ ಒಂದು ಎಕರೆ ಸೋರೆಕಾಯಿ ಮಳೆಯಿಂದ ಸಂಪೂರ್ಣ ಹಾಳಾಗಿದೆ. ಸುಮಾರು ಏಳು ಲಕ್ಷ ಬಂಡವಾಳ ಹಾಕಿ ಬೆಳೆ ಬೆಳೆಯಲಾಗಿತ್ತು. ಮಳೆಯಿಂದ ಜಲಾವೃತವಾಗಿ ತೋಟದಲ್ಲೇ ಬೆಳೆ ಕೊಳೆಯುತ್ತಿದ್ದು, ಸಂಕಷ್ಟದಲ್ಲಿರುವ ರೈತ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಮಳೆಯಿಂದಾಗಿ ಕೊಚ್ಚಿ ಹೋದ ರಸ್ತೆ

ಮಂಡ್ಯ: ಜಿಲ್ಲೆಯ ಕೆ.ಆರ್​​.ಪೇಟೆಯಲ್ಲಿ ಮಳೆಯಿಂದ ಅವಾಂತರದಿಂದಾಗಿ ಸಂತೇಬಾಚಹಳ್ಳಿ ಬಳಿ ರಸ್ತೆ ಕೊಚ್ಚಿಹೋಗಿದೆ. ಸುಮಾರು 10ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದ್ದು, ಕೆರೆ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಜೀವ ಕೈಯಲ್ಲಿ ಹಿಡಿದು ಗ್ರಾಮಸ್ಥರು ಬೈಕ್​ನಲ್ಲಿ ತೆರಳುತ್ತಿದ್ದಾರೆ. ದೊಡ್ಡಕ್ಯಾತನಹಳ್ಳಿ, ಚಿಕ್ಕಕ್ಯಾತನಹಳ್ಳಿ, ಹಿರಿಸಾವೆ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.