ಎಎಐ ಮಾದರಿಯಲ್ಲಿ ರಾಜ್ಯ ವಿಮಾನ ನಿಲ್ದಾಣ ಪ್ರಾಧಿಕಾರ ಸ್ಥಾಪನೆಗೆ ಮುಂದಾದ ಸರ್ಕಾರ, ಎಂಬಿ ಪಾಟೀಲ್ ಸುಳಿವು

| Updated By: ಆಯೇಷಾ ಬಾನು

Updated on: Aug 17, 2023 | 3:00 PM

ಕಾರ್ಯಾಚರಣೆಗಾಗಿ ವಿಮಾನ ನಿಲ್ದಾಣಗಳನ್ನು ಎಎಐಗೆ ಹಸ್ತಾಂತರಿಸುವುದರಿಂದ ರಾಜ್ಯಕ್ಕೆ ಯಾವುದೇ ಲಾಭವಾಗಿಲ್ಲ. ಹೀಗಾಗಿ ರಾಜ್ಯದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರ ಸ್ಥಾಪನೆ ಕುರಿತು ಚಿಂತನೆಗಳ ನಡೆಸಲಾಗುತ್ತಿದೆ ಎಂದು ಎಂಬಿ ಪಾಟೀಲ್ ತಿಳಿಸಿದರು. ಆಗಸ್ಟ್ 15ರಂದು ವಿಜಯಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದ ಎಂ.ಬಿ.ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದರು.

ಎಎಐ ಮಾದರಿಯಲ್ಲಿ ರಾಜ್ಯ ವಿಮಾನ ನಿಲ್ದಾಣ ಪ್ರಾಧಿಕಾರ ಸ್ಥಾಪನೆಗೆ ಮುಂದಾದ ಸರ್ಕಾರ, ಎಂಬಿ ಪಾಟೀಲ್ ಸುಳಿವು
ಎಂಬಿ ಪಾಟೀಲ್
Follow us on

ವಿಜಯಪುರ, ಆ.17: ಕರ್ನಾಟಕದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರವು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಮಾದರಿಯಲ್ಲಿ ತನ್ನದೇ ಆದ ವಿಮಾನ ನಿಲ್ದಾಣ ಪ್ರಾಧಿಕಾರವನ್ನು ರಚಿಸಲು ಚಿಂತನೆ ನಡೆಸಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್(MB Patil) ಮಂಗಳವಾರ ತಿಳಿಸಿದರು.

ಆಗಸ್ಟ್ 15ರಂದು ವಿಜಯಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದ ಎಂ.ಬಿ.ಪಾಟೀಲ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಚರಣೆಗಾಗಿ ವಿಮಾನ ನಿಲ್ದಾಣಗಳನ್ನು ಎಎಐಗೆ ಹಸ್ತಾಂತರಿಸುವುದರಿಂದ ರಾಜ್ಯಕ್ಕೆ ಯಾವುದೇ ಲಾಭವಾಗಿಲ್ಲ. ಹೀಗಾಗಿ ರಾಜ್ಯದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರ ಸ್ಥಾಪನೆ ಕುರಿತು ಚಿಂತನೆಗಳ ನಡೆಸಲಾಗುತ್ತಿದೆ. ಈ ಕುರಿತ ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡಲಾಗುವುದು ಎಂದರು.

ಇನ್ನು ಈ ವೇಳೆ ಮಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆಯ ನಿಯಂತ್ರಣವನ್ನು ಎಎಐ ಅದಾನಿ ಸಮೂಹಕ್ಕೆ ನೀಡುವ ನಿರ್ಧಾರವನ್ನು ಪ್ರಶ್ನಿಸಿದರು. ರಾಜ್ಯ ಸರ್ಕಾರವು ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಎಎಐಗೆ ವಹಿಸಿದೆ. ಆದರೆ ಎಎಐ ಆ ಜವಾಬ್ದಾರಿಯನ್ನು ಅದಾನಿಗೆ ಏಕೆ ವರ್ಗಾಯಿಸಿತು ಎಂದು ಎಂ.ಬಿ.ಪಾಟೀಲ್ ಪ್ರಶ್ನಿಸಿದರು. ಎಎಐನ ಈ ನಿರ್ಧಾರದಿಂದ ಅಸಮಾಧಾನವಾಗಿದೆ. ಹೀಗಾಗಿ ಮಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಎಎಐಗೆ ನೀಡಿರುವ ನಿಯಮಗಳು ಮತ್ತು ಷರತ್ತುಗಳನ್ನು ಅಧ್ಯಯನ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಇದನ್ನೂ ಓದಿ: ಬೆಂಗಳೂರು ಉಪನಗರ ರೈಲ್ವೆ ಕಾರಿಡಾರ್​​ಗಳು 2028ಕ್ಕೆ ಪೂರ್ಣ; ಸಚಿವ ಎಂಬಿ ಪಾಟೀಲ್

ವಿಮಾನ ನಿಲ್ದಾಣಗಳನ್ನು ಸ್ವಂತವಾಗಿ ನಿರ್ವಹಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ. ರಾಜ್ಯ ಸರ್ಕಾರವು ವಿಮಾನ ನಿಲ್ದಾಣಗಳಿಗೆ ಹಣ ನೀಡುತ್ತಿದೆ. ಹೀಗಿರುವಾಗ ಎಎಐ ಅವುಗಳನ್ನು ಏಕೆ ನಿರ್ವಹಿಸಬೇಕು. ಇದಲ್ಲದೆ, ಕಾರ್ಯಾಚರಣೆಯ ಶುಲ್ಕವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಇದರ ಬದಲಿಗೆ ವಿಜಯಪುರ, ಶಿವಮೊಗ್ಗ, ರಾಯಚೂರು ಮತ್ತು ಬಳ್ಳಾರಿಯಲ್ಲಿ ಬರುವ ವಿಮಾನ ನಿಲ್ದಾಣಗಳನ್ನು ಸರ್ಕಾರ ಸ್ವಂತವಾಗಿ ನಿರ್ವಹಿಸಬಹುದು ಎಂದರು.

ರಾಜ್ಯ-ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸ್ಥಾಪನೆಗೆ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಅದರ ಸಾಧಕ-ಬಾಧಕ, ಕಾರ್ಯಸಾಧ್ಯತೆ, ಕಾನೂನು ತೊಡಕುಗಳ ಬಗ್ಗೆ ಮೌಲ್ಯಮಾಪನ ಮಾಡಲಾಗುವುದು. ಬಹುರಾಷ್ಟ್ರೀಯ ಕಂಪನಿಗಳಾದ ಫಾಕ್ಸ್‌ಕಾನ್, ಐಬಿಸಿ, ಮಾರುಬೇನಿ ಮುಂತಾದವುಗಳೊಂದಿಗೆ ರಾಜ್ಯದಲ್ಲಿ ಲಕ್ಷಾಂತರ ಡಾಲರ್ ಮೌಲ್ಯದ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಕುರಿತು ರಾಜ್ಯ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ವಿಜಯಪುರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:59 pm, Thu, 17 August 23