Congress Convention: ವಿಜಯಪುರದಲ್ಲಿ ಕಾಂಗ್ರೆಸ್ನಿಂದ ಕೃಷ್ಣಾ ಜನಾಂದೋಲನ ಸಮಾವೇಶ
ವಿಜಯಪುರದಲ್ಲಿ ಶುಕ್ರವಾರ ಕಾಂಗ್ರೆಸ್(Congress) ಪಕ್ಷವು ಕೃಷ್ಣ ಜನಾಂದೋಲನ ಸಮಾವೇಶವನ್ನು ಆಯೋಜಿಸಿದೆ.ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭಗೊಳ್ಳಲಿದೆ
ವಿಜಯಪುರದಲ್ಲಿ ಶುಕ್ರವಾರ ಕಾಂಗ್ರೆಸ್(Congress) ಪಕ್ಷವು ಕೃಷ್ಣ ಜನಾಂದೋಲನ ಸಮಾವೇಶವನ್ನು ಆಯೋಜಿಸಿದೆ.ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭಗೊಳ್ಳಲಿದೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಈ ಸಮಾವೇಶವನ್ನು ಆಯೋಜಿಸಲಾಗಿದ್ದು, ಕೃಷ್ಣಾ ನೀರಾವರಿ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಸರ್ಕಾರದ ವಿಳಂಬವನ್ನು ಪ್ರಶ್ನಿಸಲಾಗುತ್ತದೆ.
ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವೈಫಲ್ಯದ ಕುರಿತು ಸಮಾವೇಶದಲ್ಲಿ ಧ್ವನಿ ಮೊಳಗಿಸಲಿದ್ದಾರೆ. ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ ಕೆ ಹರಿಪ್ರಸಾದ್, ಡಾ. ಜಿ ಪರಮೇಶ್ವರ, ಕೆಪಿಸಿಸಿ ಪ್ರಚಾರ ಸಮೀತಿ ಆಧ್ಯಕ್ಷ ಎಂ ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ ಸಚಿವ ಎಚ್ ಕೆ ಪಾಟೀಲ ಹಾಗೂ ಹಾಲಿ ಮಾಜಿ ಶಾಸಕರು, ಮಾಜಿ ಸಚಿವರು ಕೃಷ್ಣಾ ನೀರಾವರಿ ಯೋಜನೆಗೆ ಒಳಪಡುವ ಐದು ಜಿಲ್ಲೆಗಳ ಹಾಲಿ ಶಾಸಕರು ಮಾಜಿ ಸಚಿವರು ಭಾಗಿಯಾಗಲಿದ್ದಾರೆ.
ಸಾವಿರಾರು ಜನರು, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.
ರಾಜ್ಯದ ಇತರೆ ಸದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ