ರಾಜ್ಯ ರಾಜಕಾರಣದ ಬಗ್ಗೆ ಸದಾಶಿವ ಮುತ್ಯಾನ ಸ್ಫೋಟಕ ಭವಿಷ್ಯ, ಕಾಲಜ್ಞಾನದ ಹೇಳಿಕೆ ಇಲ್ಲಿದೆ ನೋಡಿ

ನಾಡಿನ ಶ್ರೇಷ್ಠ ಸಂತ ಹಾಗೂ ಪವಾಡ ಪುರುಷರಲ್ಲಿ ಒಬ್ಬರಾದ ಶ್ರೀ ಗುರುಚಕ್ರವರ್ತಿ ಸದಾಶಿವ ಮುತ್ಯಾನ ಕಾಲಜ್ಞಾನದ ಹೇಳಿಕೆ ಈ ಬಾರಿ ಮತ್ತೆ ಸಂಚಲನ ಮೂಡಿಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಯುಗಾದಿಯ ವೇಳೆ ಇಲ್ಲಿನ ಪೀಠಾಧಿಪತಿಗಳಾದ ಶಿವಯ್ಯ ಮಹಾಸ್ವಾಮೀಜಿಗಳು ಮುಂದಿನ ವರ್ಷದ ಭವಿಷ್ಯ ನುಡಿದಿದ್ದು, ಹೀಗಿದೆ.

ರಾಜ್ಯ ರಾಜಕಾರಣದ ಬಗ್ಗೆ ಸದಾಶಿವ ಮುತ್ಯಾನ ಸ್ಫೋಟಕ ಭವಿಷ್ಯ, ಕಾಲಜ್ಞಾನದ ಹೇಳಿಕೆ ಇಲ್ಲಿದೆ ನೋಡಿ
ಭವಿಷ್ಯ ನುಡಿದ ಪೀಠಾಧಿಪತಿ ಶಿವಯ್ಯ ಮಹಾಸ್ವಾಮೀಜಿಗಳು
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 26, 2023 | 7:52 AM

ವಿಜಯಪುರ: ನಾಡಿನ ಶ್ರೇಷ್ಠ ಸಂತ ಹಾಗೂ ಪವಾಡ ಪುರುಷರಲ್ಲಿ ಒಬ್ಬರಾದ ಶ್ರೀ ಗುರುಚಕ್ರವರ್ತಿ ಸದಾಶಿವ ಮುತ್ಯಾನ ಕಾಲಜ್ಞಾನದ ಹೇಳಿಕೆ ಈ ಬಾರಿ ಮತ್ತೆ ಸಂಚಲನ ಮೂಡಿಸಿದೆ. ಹೌದು ಪ್ರತಿ ವರ್ಷದಂತೆ ಈ ವರ್ಷವೂ ಸಹ ಯುಗಾದಿಯ ವೇಳೆ ಸದಾಶಿವ ಮುತ್ಯಾನ ಜಾತ್ರೆ ನಡೆಯಿತು. ವಿಜಯಪುರ ತಾಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ಶ್ರೀಗುರು ಚಕ್ರವರ್ತಿ ಸದಾಶಿವ ಮುತ್ಯಾ ನೆಲೆಸಿದ್ದಾನೆ. ಈ ಪವಾಡ ಪುರುಷನ ಜಾತ್ರೆಯನ್ನು ಪ್ರತಿ ವರ್ಷ ಯುಗಾದಿಯ ವೇಳೆ ಒಂದು ವಾರದವರೆಗೆ ನಡೆಸಲಾಗುತ್ತದೆ. ಈ ವೇಳೆ ಇಲ್ಲಿನ ಪೀಠಾಧಿಪತಿಗಳಾದ ಶಿವಯ್ಯ ಮಹಾಸ್ವಾಮೀಜಿಗಳು ಮುಂದಿನ ವರ್ಷದ ಭವಿಷ್ಯ ನುಡಿಯುತ್ತಾರೆ. ಯುಗಾದಿಯ ಸಮಯದಲ್ಲಿ ನಡೆಯುವ ಈ ಹೇಳಿಕೆ ರಾಜಕೀಯ, ಮಳೆ-ಬೆಳೆ, ರೋಗ ರುಜಿನೆಗಳು, ದೇಶಕ್ಕೆ ಕಾಡುವ ಭೀತಿ, ಆಗುವ ಉನ್ನತಿ ಇತ್ಯಾದಿ ಸೇರಿದಂತೆ ಎಲ್ಲಾ ಆಯಾಮಗಳನ್ನು ಹೊಂದಿರುತ್ತದೆ.

ರಾಜಕೀಯ ಕುರಿತು ಸಂಚಲನ ಮೂಡಿಸಿದ ಕಾಲಜ್ಞಾನ ಹೇಳಿಕೆ

ಇದೀಗ ವಿಧಾನಸಭೆ ಎಲೆಕ್ಷನ್ ಬೇರೆ ಹತ್ತಿರ ಬರುತ್ತಿದ್ದು, ಈ ಬಾರಿಯ ಹೇಳಿಗೆ ತೀವ್ರ ಕುತೂಹಲ ಕೆರಳಿಸಿದೆ. ರಾಜಕೀಯ ವ್ಯಕ್ತಿಗಳು ಹಾಗೂ ಪಕ್ಷಗಳಿಗೆ ಚಿಂತೆಗೀಡು ಮಾಡಿದರೆ ಜನಸಮಾನ್ಯರಿಗೆ ವಿಚಿತ್ರ ಎನ್ನಿಸುತ್ತಿದೆ. ರಾಜಕಾರಣ ಕುರಿತು ಒಗಟಿನ ಹೇಳಿಕೆ ಕೌತುಕ ಮೂಡಿಸಿದೆ. ಹೀಗೆ ಈ ಬಾರಿ ನುಡಿದ ಭವಿಷ್ಯ ಜನಸಾಮಾನ್ಯರನ್ನು ಹಿಡಿದು ರಾಜಕೀಯದವರೆಗೂ ಹುಚ್ಚು ಹಿಡಿಸುವಂತಾಗಿದೆ. ರಾಜಕೀಯ ವಿಚಾರವಾಗಿ ಕಾಲಜ್ಞಾನ ನುಡಿದ ಶಿವಯ್ಯ ಸ್ವಾಮೀಜಿಗಳು ‘ಸದ್ದಿಲ್ಲದ್ದು, ಸುದ್ದಿಯಲ್ಲಿರುವುದು, ನಿದ್ದೆಯಲ್ಲಿರುವುದು, ಬುದ್ದಿಯಲ್ಲಿರುವುದು ಎಂದಿದ್ದಾರೆ.

ಇದನ್ನೂ ಓದಿ:ಬಾಗಲಕೋಟೆ: ಗುಳೇದಗುಡ್ಡದ ಇಲಾಳ ಮೇಳದಿಂದ ಹೊರಬಿದ್ದ ವರ್ಷದ ಮಳೆ, ಬೆಳೆ ಫಲ ಭವಿಷ್ಯ

ಇವುಗಳ ಜೊತೆಗೆ ಈ ಬಾರಿ ಮತ್ತೊಂದು ಎದ್ದು ನಿಲ್ಲುತ್ತೆ, ಇದು ಯಾರ ಜೊತೆ ಎದ್ದು ನಿಲ್ಲುತ್ತೆ ಎಂಬುದು ಮುಖ್ಯ ಎನ್ನುವ ಮೂಲಕ ಎಲೆಕ್ಷನ್ ಹೊತ್ತಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದಾರೆ. ಯಾಕೆಂದರೆ ಈಗಿರುವ ನಾಲ್ಕು ವಿಚಾರಗಳನ್ನು ಹೊರತುಪಡಿಸಿ ಮತ್ತೊಂದು ವಿಚಾರ ಎದ್ದು ಬರಲಿದೆ ಎಂದಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಭಾರೀ ಚಿತ್ರವಿಚಿತ್ರಗಳು ನಡೆಯುವ ಸೂಚನೆಯನ್ನು ಸ್ವಾಮೀಜಿಯ ಕಾಲಜ್ಞಾನದ ಹೇಳಿಕೆ ನೀಡಿದೆ.

ಆರೋಗ್ಯ, ಬೆಳೆ, ಮಳೆ ಕುರಿತು ನೋಡಿದ ಭವಿಷ್ಯ

ಇನ್ನು ಕೊರೊನಾದಂತೆ ಈ ಬಾರಿಗೂ ಸಹ ವಾತ, ಪಿತ್ತ ಹಾಗೂ ಕಫ ಈ ಮೂರು ವ್ಯಾಧಿಗಳು ರೋಗಿಗೆ ಹಾಗೂ ವೈದ್ಯರಿಗೆ ಹುಚ್ಚು ಹಿಡಿಸಲಿವೆ ಎಂದಿದ್ದಾರೆ. ಇದರ ಜೊತೆಗೆ ಜಾನುವಾರುಗಳಿಗೂ ರೋಗಬಾಧೆ ಕಾಡಲಿದೆ. ಈ ಹಿಂದೆ ಭಾರತವನ್ನು ಬೇರೆಯವರು ಆಳಿದ್ದರು, ಆದರೆ ಇನ್ಮುಂದೆ ಭಾರತದವರು ಪ್ರೀತಿಯಿಂದ ಬೇರೆ ದೇಶ ಆಳುವ ಕಾಲ ಬರಲಿದೆ ಎಂದಿದ್ದಾರೆ. ಈ ಹೇಳಿಕೆಯ ಪ್ರಕಾರ ಪ್ರಧಾನಿ ಮೋದಿ ವಿಶ್ವ ನಾಯಕರಾಗುತ್ತಾರೆ ಎಂಬ ಚರ್ಚೆ ಭಕ್ತ ಸಮೂಹದಲ್ಲಿ ಆಗುತ್ತಿದೆ. ಇದರೊಟ್ಟಿಗೆ ಈ ಬಾರಿ ಧವಸ ಧಾನ್ಯಗಳು ಚೆನ್ನಾಗಿವೆ ಎಂಬ ಸಂದೇಶವೂ ಸಿಕ್ಕಿದೆ. ಅಷ್ಟೆ ಅಲ್ಲೆ ಕಳೆದ ಬಾರಿ ಹೇಳಿದ್ದ ಮಳೆ ಬೆಳೆಯ ಹಾಗೂ ಮಹಾಮಾರಿಯ ಮತ್ತು ಭೂಕಂಪನದ ಅಷ್ಟೆ ಅಲ್ಲದೆ ದೇಶ ದೇಶಗಳ ಮದ್ಯೆ ಆಗುವ ಯುದ್ದದ ಬಗ್ಗೆ ನುಡಿದಿದ್ದದ ಭವಿಷ್ಯ ನಿಜವಾಗಿದ್ದು ಕಣ್ಮುಂದೆ ಕಟ್ಟಿದಂತಿದೆ.

ಇದನ್ನೂ ಓದಿ:ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ಬದಲಾವಣೆ: ಅಚ್ಚರಿಯ ಭವಿಷ್ಯ ನುಡಿದ ಮಣ್ಣಿನ ಬೊಂಬೆ; ಹಾಗಾದ್ರೆ ಏನದು? ಇಲ್ಲಿದೆ ನೋಡಿ

ಇನ್ನು ಜಾತ್ರೆಯ ಪ್ರಯುಕ್ತ ಸದಾಶಿವನ ಜಾತ್ರೆಯ ವೇಳೆ ಪುರಾಣ, ದಿಪೋತ್ಸವ, ರಥೋತ್ಸವ, ಕುಂಭಮೇಳ, ಸಾಮೂಹಿಕ ವಿವಾಹ, ಅನ್ನದಾಸೋಹ ಸೇರಿದಂತೆ ಹಲವು ಆಚರಣೆಗಳು ನಡೆಯುತ್ತವೆ. ಈ ಬಾರಿ ಜಾತ್ರೆಗೆ ಆಗಮಿಸಿದ ಎಲ್ಲಾ ಭಕ್ತರಿಗೂ ಶೇಂಗಾ ಹೋಳಿಗೆಯ ಊಟ ಮಾಡಿಸಿದ್ದು ಎಲ್ಲರ ಗಮನ ಸೆಳೆದಿತ್ತು. ಒಟ್ಟಿನಲ್ಲಿ ಈ ಜಾತ್ರೆಗೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಲಕ್ಷಾಂತರ ಭಕ್ತರು ಕಾಲಜ್ಞಾನದ ಹೇಳಿಕೆಯಿಂದಲೇ ತಮ್ಮ ಬೆಳೆಗಳನ್ನು ಬೆಳೆಯುವುದು ಸಾಮಾನ್ಯವಾಗಿದೆ.

ವರದಿ: ಅಶೋಕ ಯಡಳ್ಳಿ ಟಿವಿ9 ವಿಜಯಪುರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್
ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್
ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್