ವಿಜಯಪುರ: ಕರ್ನಾಟಕ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಪ್ರಚಾರ ಭಾಷಣ ವೇಳೆ ಮತ್ತೆ ಸಿದ್ದರಾಮಯ್ಯರಿಂದ ಎಡವಟ್ಟಾಗಿದೆ. ಎಂ.ಸಿ. ಮನಗೂಳಿ ನಿಧನರಾದರು ಅನ್ನುವ ಬದಲು ಅಶೋಕ ಮನಗೂಳಿ ನಿಧನರಾದರು ಎಂದು ಹೇಳಿ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ಬಳಿಕ ಎಂ.ಸಿ. ಮನಗೂಳಿ ನಿಧನ ಎಂದು ಸಿದ್ದರಾಮಯ್ಯ ವಿಷಯ ಸರಿದೂಗಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲೆ ಆಲಮೇಲ ಪಟ್ಟಣದಲ್ಲಿ ಪ್ರಚಾರ ಸಭೆ ವೇಳೆ ಹೀಗಾಗಿದೆ.
ಇದೇ ವೇಳೆ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಹಣಕ್ಕೆ ಶಾಸಕರನ್ನ ಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಮುಂಬಾಗಿಲಿಂದ ಯಡಿಯೂರಪ್ಪ ಅಧಿಕಾರಕ್ಕೆ ಬಂದಿಲ್ಲ. ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ ಮಾಡಿದ ಮುಖ್ಯಮಂತ್ರಿ. ಸರ್ಕಾರದ ರಿಮೋಟ್ ಆರ್ಎಸ್ಎಸ್ ಕೈಯಲ್ಲಿ ಇದೆ. ಸರ್ಕಾರ ಆರ್ಎಸ್ಎಸ್ ಹೇಳಿದಂತೆಯೇ ಕೇಳಬೇಕು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಪ್ರಧಾನ ಮಂತ್ರಿ ಆದ ಬಳಿಕ ಕೊರೊನಾ ಬಂತು. ಕೊರೊನಾಗೆ ಚಪ್ಪಾಳೆ ಹೊಡೀರಿ, ದೀಪಾ ಹಚ್ಚಿ ಅಂದರು. ಇಷ್ಟೆಲ್ಲಾ ಮಾಡಿಸಿದರು ಕೊರೊನಾ ಏನಾದ್ರು ಹೋಯ್ತಾ? ಈ ನರೇಂದ್ರ ಮೋದಿ ಹೇಳುವುದೆಲ್ಲಾ ಉಲ್ಟಾ ಆಗಿದೆ ಎಂದು ವಿಜಯಪುರ ಜಿಲ್ಲೆ ಆಲಮೇಲದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಧಾನಿ ಅಚ್ಛೇ ದಿನ್ ಬರುತ್ತೆ ಅಂದ್ರು ಅಚ್ಛೇ ದಿನ್ ಬಂತಾ? ತೈಲ ಬೆಲೆ ಸೇರಿದಂತೆ ಎಲ್ಲಾ ಬೆಲೆಗಳೂ ಏರಿಕೆಯಾಗಿವೆ. ಬಿಜೆಪಿ ದರಿದ್ರ ಸರ್ಕಾರ, ಎಲ್ಲರ ರಕ್ತ ಕುಡಿಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ ಮೈ ಶುಗರ್ ಕಾರ್ಖಾನೆ: ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಸಲು ತೀರ್ಮಾನ – ಸಿಎಂ ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: ಸಿದ್ದರಾಮಯ್ಯ ಜೆಡಿಎಸ್ನಲ್ಲಿದ್ದಾಗಲೂ ಕುಮಾರಸ್ವಾಮಿ ವಿಷ ಕಾರುತ್ತಿದ್ದರು: ಜಮೀರ್ ಅಹ್ಮದ್
Published On - 9:42 pm, Mon, 18 October 21