ಬಾಡಿಗೆ ಕೇಳಿದಕ್ಕೆ ಮಾಲೀಕನ ಮೇಲೆಯೇ ಹಲ್ಲೆ ನಡೆಸಿದ ಬಾಡಿಗೆದಾರ, ಮಾಲೀಕ ಹಾಗೂ ಆತನ ಪತ್ನಿ ತಲೆಗೆ ಗಾಯ

ಪವಿತ್ರಾ ಪಾಟೀಲ್ ಹಾಗೂ ಸಿದ್ರಾಮಗೌಡ ಪಾಟೀಲ ಎಂಬುವವರ ಮೇಲೆ ಬಾಡಿಗೆದಾರ ಸಂಗಮೇಶ ಹಿರೇಮಠ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು ಪಾಟೀಲ್ ದಂಪತಿ ತಲೆಗೆ ಗಾಯಗಳಾಗಿವೆ.

ಬಾಡಿಗೆ ಕೇಳಿದಕ್ಕೆ ಮಾಲೀಕನ ಮೇಲೆಯೇ ಹಲ್ಲೆ ನಡೆಸಿದ ಬಾಡಿಗೆದಾರ, ಮಾಲೀಕ ಹಾಗೂ ಆತನ ಪತ್ನಿ ತಲೆಗೆ ಗಾಯ
ಬಾಡಿಗೆದಾರ ಸಂಗಮೇಶ ಹಿರೇಮಠ
Edited By:

Updated on: Aug 25, 2021 | 9:25 AM

ವಿಜಯಪುರ: ಮನೆ ಬಾಡಿಗೆ ವಿಚಾರಕ್ಕೆ ಮನೆ ಮಾಲೀಕ ಮತ್ತು ಬಾಡಿಗೆದಾರರ ನಡುವೆ ಗಲಾಟೆ ನಡೆದಿರುವ ಘಟನೆ ವಿಜಯನಗರದ ಶಹಾಪೇಟೆಯಲ್ಲಿ ನಡೆದಿದೆ. ಮನೆ ಬಾಡಿಗೆ ಕೇಳಿದ್ದಕ್ಕೆ ಬಾಡಿಗೆದಾರ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಪವಿತ್ರಾ ಪಾಟೀಲ್ ಹಾಗೂ ಸಿದ್ರಾಮಗೌಡ ಪಾಟೀಲ ಎಂಬುವವರ ಮೇಲೆ ಬಾಡಿಗೆದಾರ ಸಂಗಮೇಶ ಹಿರೇಮಠ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು ಪಾಟೀಲ್ ದಂಪತಿ ತಲೆಗೆ ಗಾಯಗಳಾಗಿವೆ. ಮನೆ ಮಾಲೀಕನ ಮೇಲೆ ಕಲ್ಲು, ಕುರ್ಚಿಯಿಂದ ಸಂಗಮೇಶ್ ಹಲ್ಲೆಗೈದಿದ್ದಾನೆ. ಮಾಲೀಕನ ಪತ್ನಿಯನ್ನು ಹಿಡಿದು ಎಳೆದಾಡಿದ್ದಾನೆ ಎಂದು ಸಿದ್ರಾಮಗೌಡ ಪಾಟೀಲ್ ದಂಪತಿ ಆರೋಪ ಮಾಡಿದ್ದಾರೆ.

4 ವರ್ಷದಿಂದ ಸಂಗಮೇಶ್ ಹಿರೇಮಠ ಬಾಡಿಗೆಗೆ ಇದ್ದಾನೆ. ಆದ್ರೆ ಈಗ ಬಾಡಿಗೆ ಕೊಡದೆ ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ್ದೆವು. ಹೀಗಾಗಿ ಸಂಗಮೇಶ್ ಹಲ್ಲೆ ಮಾಡಿದ್ದಾನೆಂದು ದಂಪತಿ ತಿಳಿಸಿದ್ದಾರೆ. ವಿಜಯನಗರದ ಗಾಂಧಿಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೇಯರ್​ ಸ್ಥಾನ ಕೊಟ್ಟರೆ ನಿಮ್ಮೊಂದಿಗೆ ಬರ್ತೀವಿ; ಕೊನೇ ಕ್ಷಣದಲ್ಲಿ ಕಾಂಗ್ರೆಸ್​ ಜತೆ ಮೈತ್ರಿಗೆ ಮುಂದಾದ ಜೆಡಿಎಸ್​, ಬಿಜೆಪಿ ಕತೆಯೇನು?

(Tenant assaults house owner for asking rent in vijayapura)