ವಿಜಯಪುರ: ಇಬ್ಬರೂ ಪುತ್ರಿಯರ ಜೊತೆ ಬಾವಿಗೆ ಹಾರಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2022 | 2:59 PM

ಇಚ್ಚಂಗಿ ಗ್ರಾಮದಲ್ಲಿ ಸಾವಿನಲ್ಲೂ ವೃದ್ಧ ದಂಪತಿ ಒಂದಾಗಿರುವಂತಹ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಲ್ಲಿ ನಡೆದಿದೆ.

ವಿಜಯಪುರ: ಇಬ್ಬರೂ ಪುತ್ರಿಯರ ಜೊತೆ ಬಾವಿಗೆ ಹಾರಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ
ಪ್ರಾತಿನಿಧಿಕ ಚಿತ್ರ
Follow us on

ವಿಜಯಪುರ: ಇಬ್ಬರು ಪುತ್ರಿಯರ ಜತೆ ಬಾವಿಗೆ ಹಾರಿ ತಾಯಿಯೂ ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿನಗೂರಿನಲ್ಲಿ ನಡೆದಿದೆ. 3 ವರ್ಷ, 1 ವರ್ಷದ ಹೆಣ್ಣು ಮಗುವನ್ನು ತಾಯಿ ಬಾವಿಗೆ ತಳ್ಳಿದ್ದು, ನಂತರ ಬಾವಿಗೆ ಹಾರಿ ಅವ್ವಮ್ಮಾ ಶ್ರೀಶೈಲ ಗುಬ್ಬೇವಾಡ(32) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಲ್ವರು ಹೆಣ್ಣುಮಕ್ಕಳ ಪೈಕಿ ಇಬ್ಬರನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ 6 ತಿಂಗಳಿನಿಂದ ಅವ್ವಮ್ಮಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಪತಿ ಶ್ರೀಶೈಲ ಗುಬ್ಬೇವಾಡ ಕುರಿ ಕಾಯಲು ತೆರಳಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಬಾವಿಯಿಂದ ಮೂವರ ಮೃತದೇಹವನ್ನು ಗ್ರಾಮಸ್ಥರು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಸಿಂದಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇದನ್ನೂ ಓದಿ: Crime News: ಹೆಂಡತಿ ಎದುರು ಗಂಡನಿಗೆ ಆವಾಜ್​; ರೌಡಿಶೀಟರ್​ನಿಂದ ಬಾಲಕನ ಕೊಲೆ

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಳ್ಳತನ: 4 ಲಕ್ಷ ರೂ. ಮೌಲ್ಯದ ವಸ್ತು ಕಳುವು:

ಧಾರವಾಡ: ಕಣವಿ ಹೊನ್ನಾಪುರ ಗ್ರಾ.ಪಂ. ಕಚೇರಿಯಲ್ಲಿ ಅಪಾರ ಪ್ರಮಾಣದ ವಸ್ತುಗಳ ಕಳ್ಳತನವಾಗಿರುವಂತಹ ಘಟನೆ
ಅಳ್ನಾವರ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಕಚೇರಿ ಕೀಲಿ ಮುರಿದು ಸಿಸಿ ಕ್ಯಾಮೆರಾ, ಡಿವಿಆರ್, 2 ಕಂಪ್ಯೂಟರ್, 1 ಲ್ಯಾಪ್ ಟಾಪ್, 8 ಇನ್ವರ್ಟರ್ ಬ್ಯಾಟರಿ, 2 ಪ್ರಿಂಟರ್, ಸುಮಾರು 4 ಲಕ್ಷ ರೂ. ಮೌಲ್ಯದ ವಸ್ತು ಕಳ್ಳತನವಾಗಿದೆ. ಸ್ಥಳಕ್ಕೆ ಅಳ್ನಾವರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮ ಅಂದರ್:

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಪೊಲೀಸರಿಂದ ಬೈಕ್ ಕಳ್ಳತನ ಮಾಡುತ್ತಿವನನ್ನು ಅರೆಸ್ಟ್ ಮಾಡಲಾಗಿದೆ. ಶ್ರೀನಿವಾಸ್ ಬಂಧಿತ ಆರೋಪಿ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್, ಬಂಧಿತನಿಂದ 12.50.ಲಕ್ಷ ಮೌಲ್ಯದ
25 ಬೈಕ್ ವಶಕ್ಕೆ ಪಡೆಯಲಾಗಿದೆ. ಕದ್ದ ಬೈಕ್​ಗಳನ್ನ ಆಂಧ್ರ, ಕೋಲಾರ ಭಾಗದಲ್ಲಿ ಮಾರಾಟ ಮಾಡುತ್ತಿದ್ದ. ರಾಜಾಜಿನಗರ ಮೇಟ್ರೋ ಸ್ಟೇಷನ್ ಬಳಿ ಬೈಕ್ ಕಳ್ಳತನಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ಜಾಡು ಹಿಡಿದು ಹೊರಟ ಪೊಲೀಸರು ಬರೋಬ್ಬರಿ 25 ಪ್ರಕರಣಗಳನ್ನ ಭೇದಿಸಿದ್ದಾರೆ.

ಇದನ್ನೂ ಓದಿ: Crime News: ಯುವಕನ ಮರ್ಮಾಂಗಕ್ಕೆ ಪೆಟ್ರೋಲ್ ಸುರಿದು, ನಗ್ನ ವಿಡಿಯೋ ರೆಕಾರ್ಡ್​ ಮಾಡಿದ ಮಾಲೀಕ

ಡ್ರಗ್ಸ್ ಪೂರೈಸುತ್ತಿದ್ದ ಗ್ಯಾಂಗ್​ ಬಂಧನ

ಬೆಂಗಳೂರು: ನಗರದಲ್ಲಿ ಡ್ರಗ್ಸ್ ಪೂರೈಸುತ್ತಿದ್ದ ಗ್ಯಾಂಗ್​ ಬಂಧನವಾಗಿರುವಂತಹ ಘಟನೆ ನಡೆದಿದೆ. ಸಿಸಿಬಿಯಿಂದ ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನವಾಗಿದ್ದು, ಶ್ರೀನಿವಾಸ್, ಪ್ರಹ್ಲಾದ್, ಮಲ್ಲೇಶ್ವರಿ ಹಾಗೂ ಸತ್ಯವತಿ ಬಂಧಿತರು. ಬಂಧಿತ ಆರೋಪಿಗಳು ಆಂಧ್ರದ ವಿಶಾಖಪಟ್ಟಣ ಮೂಲದವರಾಗಿದ್ದಾರೆ. ಆರೋಪಿಗಳಿಂದ 4 ಕೋಟಿ ಮೌಲ್ಯದ ಡ್ರಗ್ಸ್​ನ್ನ ಸಿಸಿಬಿ ವಶಕ್ಕೆ ಪಡೆದಿದ್ದಾರೆ. ಸಿಸಿಬಿಯಿಂದ ಹ್ಯಾಶ್ ಆಯಿಲ್​, 6 ಕೆಜಿ ಗಾಂಜಾ ಜಪ್ತಿ ಮಾಡಿದ್ದು, ವಿವೇಕನಗರದಲ್ಲಿ ಡಿಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಡಿಜೆ ನೀಡಿದ ಮಾಹಿತಿ ಮೇರೆಗೆ ನಾಲ್ವರ ಬಂಧನ ಮಾಡಲಾಗಿದೆ. ದೇಶದ ವಿವಿಧ ಭಾಗಗಳಿಗೆ ಗ್ಯಾಂಗ್ ಡ್ರಗ್ಸ್ ಸಪ್ಲೈ ಮಾಡುತ್ತಿತ್ತು. ಅರಣ್ಯದಲ್ಲಿ ಗಾಂಜಾದಿಂದ ಹ್ಯಾಶ್ ಆಯಿಲ್ ತಯಾರಿಸುತ್ತಿದ್ದರು.

ಸಾವಿನಲ್ಲೂ ಒಂದಾದ ವೃದ್ಧ ದಂಪತಿ:

ಹಾವೇರಿ: ಇಚ್ಚಂಗಿ ಗ್ರಾಮದಲ್ಲಿ ಸಾವಿನಲ್ಲೂ ವೃದ್ಧ ದಂಪತಿ ಒಂದಾಗಿರುವಂತಹ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಲ್ಲಿ ನಡೆದಿದೆ. ಪತಿ ತೀರಿಹೋದ ಕೆಲವೇ ಗಂಟೆಗಳಲ್ಲಿ ಪತ್ನಿಯೂ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಪತಿ ಬಸಪ್ಪ ಕಂಬಳಿ(87) ಮೃತಪಟ್ಟಿದ್ದರು. ಪತಿ ಸಾವಿನ ಸುದ್ದಿ ತಿಳಿದು ಕುಸಿದುಬಿದ್ದು ದ್ಯಾಮವ್ವ(80) ಮೃತಪಟ್ಟಿದ್ದಾರೆ.