ವಿಜಯಪುರ ಜಿಲ್ಲಾ ಆರೋಗ್ಯ ಇಲಾಖೆ ಆನಾರೋಗ್ಯಕ್ಕೆ ಈಡಾಗಿದೆ. ಜಿಲ್ಲೆಯ ಜನರ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ತೋರಿಸಬೇಕಿರೋ ಆರೋಗ್ಯ ಇಲಾಖೆಗೆ ಇದೀಗಾ ಮದ್ದನ್ನು ನೀಡಬೇಕಿದೆ. ಕಾರಣ ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ಹುದ್ದೆಗೆ ಇಬ್ಬರು ನೇಮಕವಾದಂತಾಗಿದೆ. ಕಾರಣ ಈ ಹಿಂದೆ ವಿಜಯಪುರ (Vijayapura) ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದ ಡಾ ರಾಜಕುಮಾರ ಯರಗಲ್ ಕೆಎಟಿಯಿಂದ (Karnataka State Administrative Tribunal) ವರ್ಗಾವಣೆ ಆದೇಶ ರದ್ದು ಮಾಡಿಕೊಂಡು ಬಂದಿದ್ದಾರೆ. ಇನ್ನು, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿಯಾದ ಡಾ ಸುರೇಶ ಚೌವ್ಹಾಣ್ ಅವರಿಬ್ಬರ ಮಧ್ಯೆ ಜಿಲ್ಲಾ ಆರೋಗ್ಯಾಧಿಕಾರಿ (DHO) ಹುದ್ದೆಗಾಗಿ ಕೋಳಿ ಜಗಳ ನಡೆದಿದೆ. ಡಿಟೇಲ್ಸ್ ಇಲ್ಲಿದೆ
ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಇಬ್ಬರು ಆರೋಗ್ಯಾಧಿಕಾರಿಗಳು! ಇಬ್ಬರ ಜಗಳದಲ್ಲಿ ನಿತ್ಯ ಕೆಲ ಕಾಲ ಕಚೇರಿಗೆ ಬೀಗ ಭಾಗ್ಯ! ಕೆಎಟಿ ಆದೇಶದೊಂದಿಗೆ ಬಂದಿರೋ ಹಿಂದಿನ ಆರೋಗ್ಯಾಧಿಕಾರಿ…. ಹಿಂದಿನ ಹಾಗೂ ಇಂದಿನ ಆರೋಗ್ಯಾಧಿಕಾರಿಗಳಿಂದ ಕುರ್ಚಿಗಾಗಿ ಕಸರತ್ತು…. ಹೌದು ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಈಗ ಇಬ್ಬರು ಯಜಮಾನರ ಆಡಳಿತಕ್ಕೆ ಸಾಕ್ಷಿಯಾಗಿದೆ.
ಒಂದೇ ಹುದ್ದೆಗೆ ಇಬ್ಬರು ಆಧಿಕಾರಿಗಳು ಸೇವೆ ಆಗಮಿಸುತ್ತದ್ದು ಇತರೆ ಆಧಿಕಾರಿಗಳು ಹಾಗು ಸಿಬ್ಬಂದಿಗಳು ನಾವು ಯಾರ ಮಾತನ್ನು ಆದೇಶವನ್ನು ಕೇಳಿ ಸೇವೆ ಮಾಡಬೇಕೆಂಬುದರ ಬಗ್ಗೆ ಗೊಂದಲಕ್ಕೆ ಇಡಾಗಿದ್ದಾರೆ. ಈ ಹಿಂದಿನ ಡಿಎಚ್ಓ ಆಗಿದ್ದ ಡಾ ರಾಜಕುಮಾರ ಯರಗಲ್ ಕಳೆದ 21-09-2022 ಅವರನ್ನು ಆರೋಗ್ಯ ಇಲಾಖೆಯ ಸ್ಥಳ ನಿಯುಕ್ತಿ ಮಾಡದೇ ಆಯುಕ್ತಾಲಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆರೋಗ್ಯ ಸೌಧ ಬೆಂಗಳೂರಿಗೆ ಹಾಜರಾಗಬೇಕೆಂದು ಆದೇಶ ಜಾರಿ ಮಾಡಿತ್ತು.
ಈ ಆದೇಶದನ್ವಯ ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಎಂದು ಡಾ ಸುರೇಶ ಚೌವ್ಹಾಣ್ ಅವರಿಗೆ ಆಧಿಕಾರ ಹಸ್ತಾಂತರಿಸಬೇಕೆಂದು ಸೂಚನೆ ನೀಡಿತ್ತು. ಈ ಆದೇಶದ ಪ್ರಕಾರ ಡಾ ರಾಜಕುಮಾರ ಯರಗಲ್ 21-09-2022 ರಂದು ಪ್ರಭಾರ ಹುದ್ದೆಯನ್ನು ಡಾ ಸುರೇಶ ಚೌವ್ಹಾಣ್ ಅವರಿಗೆ ವಹಿಸದೇ, ಇತ್ತ ಆಯುಕ್ತಾಲಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆರೋಗ್ಯ ಸೌಧ ಬೆಂಗಳೂರಿಗೆ ಹಾಜರಾಗಲಿಲ್ಲ. ಬದಲಾಗಿ ಮಾರನೇ ದಿನವೇ ತಮ್ಮ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ 22-09-2022 ಕರ್ನಾಟಕ ನ್ಯಾಯ ಮಂಡಳಿ ಮೊರೆ ಹೋದರು.
ಮನವಿಯನ್ನು ವಿಚಾರಣೆ ನಡೆಸಿದ ಕೆಎಟಿ, ಡಾ ರಾಜಕುಮಾರ ಯರಗಲ್ ವರ್ಗಾವಣೆ ಅಸಿಂಧು ಎಂದು 14-12-2022 ರಂದು ಆದೇಶ ಜಾರಿ ಮಾಡಿದೆ. ಈ ಕೆಎಟಿ ಆದೇಶದೊಂದಿಗೆ ಡಾ ರಾಜಕುಮಾರ ಯರಗಲ್ ಪುನಃ ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗೆ ಆಗಮಿಸಿ ಸೇವೆಗೆ ಹಾಜರಾಗಲು ಮುಂದಾಗಿದ್ಧಾರೆ. ಆದರೆ ಇದಕ್ಕೆ ಹಾಲಿ ಆರೋಗ್ಯಾಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಅನುಮತಿಸಿಲ್ಲ.
Also Read:
ಓನ್ ಸೈಡ್ ಲವ್: ಬೆಣ್ಣೆ ನಗರಿಯಲ್ಲಿ ನಡು ರಸ್ತೆಯಲ್ಲಿ ಯುವತಿಯ ಕೊಚ್ಚಿ ತಾನೂ ವಿಷ ಸೇವಿಸಿ ಆಸ್ಪತ್ರೆ ಸೇರಿದ ಹಂತಕ
ಇಷ್ಟರ ಮಧ್ಯೆ ಡಿಎಚ್ಓ ಚೇಂಬರ್ ಗೆ ನಿತ್ಯವೂ ಕೆಲ ಕಾಲ ಬೀಗ ಹಾಕಿರಲಾಗುತ್ತಿದೆ. ಹಾಲಿ ಡಿಎಚ್ಓ ಡಾ ಸುರೇಶ ಚೌವ್ಹಾಣ್ ಎಂದಿನಂತೆ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರು ಇಲ್ಲದ ಸಮಯದಲ್ಲಿ ಡಾ ರಾಜಕುಮಾರ ಯರಗಲ್ ಕಚೇರಿಗೆ ಬಂದು ಕುಳಿತುಕೊಳ್ಳುತ್ತಿದ್ದಾರೆ. ಕೆಎಟಿ ಆದೇಶ ಇದ್ದರೂ ನಾನು ಸೇವೆಗೆ ಹಾಜರಾಗಲು ಬಿಟ್ಟಿಲ್ಲ. ಕೆಎಟಿ ಆದೇಶಕ್ಕೂ ಬೆಲೆ ಇಲ್ಲದಾಗಿದೆ ಎಂದು ಡಾ ರಾಜಕುಮಾರ ಯರಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಎಂದಿನಂತೆ ತಮ್ಮ ಕರ್ತವ್ಯವನ್ನು ಡಾ ಸುರೇಶ ಚೌವ್ಹಾಣ್ ಮುಂದುವರೆಸಿದ್ದಾರೆ. 21-09-2022 ರಂದು ನಾನು ಪ್ರಭಾರಿ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಸೇವೆಗೆ ಹಾಜರಾಗಿದ್ದೇನೆ. ಅಂದಿನ ಡಿಎಚ್ಓ ಆಗಿದ್ದ ಡಾ ರಾಜಕುಮಾರ ಯರಗಲ್ ನನಗೆ ಆಧಿಕಾರ ಹಸ್ತಾಂತರ ಮಾಡಿದ್ದಾರೆ. ಇದೀಗ ಕಳೆದ 15-12-2022 ರಿಂದ ಡಿಎಚ್ಓ ನಾನೇ ಎಂದು ಕಚೇರಿಗೆ ಬರುತ್ತಿದ್ದಾರೆ. ಕಚೇರಿಯಲ್ಲಿನ ಡಿಎಚ್ಓ ಚೇಂಬರ್ ಗೆ ನಾನಿಲ್ಲದ ವೇಳೆಯಲ್ಲಿ ಬೀಗ ಹಾಕಲಾಗಿರುತ್ತದೆ. ಇಷ್ಟರ ಮಧ್ಯೆ, ನಾನಿಲ್ಲದ ವೇಳೆಯೂ ಡಾ ಯರಗಲ್ ಅವರು ಬಂದು ಡಿಎಚ್ಓ ಚೇಂಬರ್ ನಲ್ಲಿ ಕುಳಿತಿದ್ಧಾರೆ.
ಸದ್ಯ ನನಗೆ ನಮ್ಮ ಇಲಾಖೆಯ ಆಯುಕ್ತರಿಂದ ಯಾವುದೇ ಸೂಚನೆ ಆದೇಶ ಬಂದಿಲ್ಲಾ. ನಮ್ಮ ಮೇಲಾಧಿಕಾರಿಗಳ ಆದೇಶದಂತೆ ನಾನು ನಡೆದುಕೊಳ್ಳುತ್ತೇನೆ. ಡಾ ರಾಜಕುಮಾರ ಯರಗಲ್ ಕೆಎಟಿ ಆದೇಶ ತಂದಿದ್ದು ನಿಜಾ. ಆದರೆ ಅವರು ವರ್ಗಾವಣೆಯಾದ ವೇಳೆ ಆಯುಕ್ತಾಲಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆರೋಗ್ಯ ಸೌಧ ಬೆಂಗಳೂರಿಗೆ ಹಾಜರಾಗಲಿಲ್ಲ. ಬದಲಾಗಿ ಕೆಎಟಿಗೆ ಹೋಗಿದ್ದಾರೆ.
Also Read:
ಸದ್ಯ ಕೆಎಟಿ ಆದೇಶದೊಂದಿಗೆ ಇಲ್ಲಿ ಬಂದಿರುವ ಅವರನ್ನು ಮೊದಲು ಆಯುಕ್ತಾಲಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆರೋಗ್ಯ ಸೌಧ ಬೆಂಗಳೂರಿಗೆ ಬಂದು ಹಾಜರಾಗಿ ಎಂದು ಇಲಾಖಾ ಆಯುಕ್ತರು ಸೂಚನೆ ನೀಡಿದ್ದಾರೆ. ಆದರೆ ಅವರು ಆ ಸೂಚನೆಯನ್ನೂ ಸಹ ಪಾಲನೇ ಮಾಡದೇ ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗೆ ಬಂದು ಕೂಡುತ್ತಿದ್ದಾರೆ. ನಮ್ಮ ಮೇಲಾಧಿಕಾರಿಗಳು ನೀಡುವ ಆದೇಶದಂತೆ ಮಾತ್ರ ನಾನು ಕೆಲಸ ಮಾಡುತ್ತೇನೆ ಎಂದಿದ್ದಾರೆ ಹಾಲಿ ಡಿಎಚ್ಓ.
ಸದ್ಯ ಇಬ್ಬರ ಕುರ್ಚಿ ಕದನದಲ್ಲಿ ಅಲ್ಲಿ ಕೆಲಸ ಮಾಡುವ ಇತರೆ ಆಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸಮಸ್ಯೆಯಾಗುತ್ತಿದೆ. ಇಬ್ಬರು ಮೇಲಾಧಿಕಾರಿಗಳ ಕೈಯ್ಯಲ್ಲಿ ಸಿಲುಕಿದಂತಾಗಿದೆ. ಈ ರೀತಿ ಡಿಎಚ್ಓ ಹುದ್ದೆಯ ಜಗಳದಲ್ಲಿ ಇತರೆ ಕೆಲಸ ಕಾರ್ಯಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಜಿಲ್ಲೆಯ ಜನರ ಆರೋಗ್ಯದ ಮೇಲೆ ಕಾಳಜಿ ತೋರಬೇಕಾದ ಇಲಾಖೆಯೇ ಅನಾರೋಗ್ಯಕ್ಕೆ ಈಡಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಚಿವರು, ಆಯುಕ್ತಾಲಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆರೋಗ್ಯ ಆಯುಕ್ತರು ಇತ್ತ ಗಮನ ಹರಿಸಬೇಕಿದೆ. ಇಲ್ಲವಾದರೆ ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಗಳ ಕಚೇರಿ ಜಂಗೀ ಕುಸ್ತಿ ಮೈದಾನವಾಗೋದ್ರಲ್ಲಿ ಯಾವುದೇ ಸಂಶಯವಿಲ್ಲಾ.
ವರದಿ: ಅಶೋಕ ಯಡಳ್ಳಿ, ಟಿವಿ 9, ವಿಜಯಪುರ
Published On - 4:56 pm, Thu, 22 December 22