ಒನ್ ಸೈಡ್ ಲವ್: ಬೆಣ್ಣೆ ನಗರಿಯಲ್ಲಿ ನಡು ರಸ್ತೆಯಲ್ಲಿ ಯುವತಿಯ ಕೊಚ್ಚಿ ತಾನೂ ವಿಷ ಸೇವಿಸಿ ಆಸ್ಪತ್ರೆ ಸೇರಿದ ಹಂತಕ
ಆಕೆಯ ಎದುರು ಬಂದು ಗಾಡಿ ನಿಲ್ಲಿಸಿ ಮನ ಬಂದಂತೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಅವಳು ಸಾವನ್ನಪ್ಪಿದ್ದಾಳೆ ಎಂದು ಖಚಿತವಾಗುವ ತನಕ ಚುಚ್ಚಿದ್ದಾನೆ.
ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹಾಡುಗಲೇ ಭೀಕರ ಕೊಲೆ ನಡೆದಿದೆ. ಇಂತಹ ದೃಶ್ಯ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ನಡು ರಸ್ತೆಯಲ್ಲಿ ನೂರಾರು ಜನರು ಓಡಾಡುವ ಸ್ಥಳದಲ್ಲಿ ಯುವತಿಯ ಭೀಕರ ಕೊಲೆ ನಡೆದಿದೆ. ಆಕ್ಟಿವ್ ಹೊಂಡಾದಲ್ಲಿ ತನ್ನ ಕೆಲಸಕ್ಕೆ ಹೋಗುತ್ತಿದ್ದ ಯುವತಿಯನ್ನ ತಡೆದು ಮಾತಾಡಿಸಿದ ದುಷ್ಟ ಕೆಲ ಕ್ಷಣದಲ್ಲಿ ಮನ ಬಂದಂತೆ ಚುಚ್ಚಿ ಚುಚ್ಚಿ ಕೊಲೆ ಮಾಡಿ ತಾನು ಕೂಡಾ ಆಸ್ವತ್ರೆ ಸೇರಿದ್ದಾನೆ.
ಓನ್ ಸೈಡ್ ಲವ್ಗೆ ಕೊಲೆಯಾದ ಯುವತಿ
ದಾವಣಗೆರೆ ನಗರದ ಬಿಜೆ ಬಡಾವಣೆಯ ಐತಿಹಾಸಿ ಮುಂಭಾಗದಲ್ಲಿ ಬುರ್ಖಾದಾರಿ ಮುಸ್ಲಿಂ ಯುವತಿ ತನ್ನ ಕೆಲಸಕ್ಕೆ ಹೋಗುವಾಗ ಪಾಗಲ್ ಪ್ರೇಮಿಯೊಬ್ಬ ಆಕೆಯ ಎದುರು ಬಂದು ಗಾಡಿ ನಿಲ್ಲಿಸಿ ಮನ ಬಂದಂತೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಅವಳು ಸಾವನ್ನಪ್ಪಿದ್ದಾಳೆ ಎಂದು ಖಚಿತವಾಗುವ ತನಕ ಚುಚ್ಚಿದ್ದಾನೆ. ರಕ್ತ ಚಿಮ್ಮಿದೆ. ಪ್ರಜ್ಞೆ ತಪ್ಪಿ ತಾನು ಹೋಗುತ್ತಿದ್ದ ಆಕ್ಟಿವ್ ಹೊಂಡಾ ಗಾಡಿ ಮೇಲೆ ಬಿದ್ದು ಯುವತಿ ಸಾವನ್ನಪ್ಪಿದ್ದಾಳೆ.
ವಿನೋಭ ನಗರದ ನಿವಾಸಿ ಚಾಂದ್ ಸುಲ್ತಾನಾ ಹೆಸರಿನಂತೇ ಸುಂದರ ಹುಡಿಗಿ. ದಾವಣಗೆರೆ ವಿವಿಯಲ್ಲಿ ಎಂಕಾಂ ಮುಗಿಸಿ ತೆರಿಗೆ ಸಲಹೆ ಸಲಹೆಗಾರ ಕೆ. ಮಹ್ಮದ್ ಬಾಷಾ ಬಳಿ ಸಿಎ ಗಾಗಿ ತೆರಬೇತಿ ಪಡೆಯುತ್ತಿದ್ದಳು. ಇದೇ ಕಚೇರಿಯಲ್ಲಿನ ಹುಡುಗನ ಜೊತೆಗೆ ಇತ್ತೀಚಿಗೆ ನಿಶ್ವಿತಾರ್ಥ ಬೇರೆ ಆಗಿತ್ತು. ಆದ್ರೆ ಸಾದತ್ ಅಲಿಯಾಸ್ ಚಾಂದ್ ಫೀರ್ ಎಂಬ ಹರಿಹರದ ನಿವಾಸಿ, ಚಾಂದ್ ಸುಲ್ತಾನಾಳನ್ನ ಮದ್ವೆ ಆಗಲು ಪ್ರಯತ್ನಿಸಿದ್ದ. ಆದ್ರೆ ಕುಟುಂಬ ಸದಸ್ಯರು ಹಾಗೂ ಸುಲ್ತಾನಾ ನಿರಾಕರಿಸಿ ಮತ್ತೊಬ್ಬ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿದ್ದರು. ಇದನ್ನ ಸಹಿಸದ ಸಾದತ್ ಸುಲ್ತಾನಾ ತನ್ನ ಕಚೇರಿಗೆ ಹೋಗುವ ರಸ್ತೆಗೆ ಬಂದಿದ್ದಾನೆ. ಸ್ವಲ್ಪ ಮಾತಾಡಬೇಕು ಎಂದು ರಸ್ತೆ ಬದಿಯ ಮರದ ಕೆಳಗೆ ಕರೆದು ಚಾಕು ಹಾಕಿದ್ದಾನೆ.
ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಹೋದ ಜೀವಗಳು? ಕರಾಳ ಶಿಕ್ಷಕನಿಂದ ಹಲ್ಲೆಗೊಳಗಾಗಿದ್ದ ಅತಿಥಿ ಶಿಕ್ಷಕಿ ಗೀತಾ ಸಹ ಸಾವು
ಸುಲ್ತಾನಾ ಸಾವನ್ನಪ್ಪಿದ್ದ ಸುದ್ದಿ ಹಬ್ಬುತ್ತಿದ್ದಂತೆ ನೂರಾರು ಜನ ಘಟನಾ ಸ್ಥಳಕ್ಕೆ ಬಂದರು. ಸುಲ್ತಾನಾಳದ್ದು ಮಧ್ಯಮ ವರ್ಗದ ಕುಟುಂಬ. ಒಬ್ಬಳೇ ಮಗಳು. ಸುಲ್ತಾನಾಳ ಕೊಲೆ ವಿಚಾರ ತಿಳಿದು ಯಾರು ಕೊಲೆ ಮಾಡಿರಬೇಕು ಎಂದು ಹುಡುಕಾಡುವಷ್ಟರಲ್ಲಿ ಘಟನೆ ನಡೆದ ಕೆಲ ದೂರದಲ್ಲಿಯೇ ಇರುವ ಸಿಟಿ ಸೇಂಟ್ರಲ್ ಆಸ್ಪತ್ರೆಯಲ್ಲಿ ದುಷ್ಟ ಸಾದತ್ ದಾಖಲಾಗಿದ್ದ. ಸಾದತ್, ಸುಲ್ತಾನಾಳ ಕೊಲೆ ಮಾಡಿ ನಂತರ ತಾನು ವಿಷ ಸೇವಿಸಿದ್ದಾನೆ. ಹೀಗೆ ಹಾಡು ಹಗಲೇ ನಡು ರಸ್ತೆಯಲ್ಲಿ ಚಿನ್ನದಂತ ಹುಡುಗಿಯ ಬರ್ಬರ ಹತ್ಯೆಯಾಗಿದೆ. ಏನು ಮಾಡಬೇಕು ಎಂದು ತಿಳಿಯದ ಸ್ಥಿತಿಯಲ್ಲಿ ಕುಟುಂಬ ಸದಸ್ಯರಿದ್ದಾರೆ. ಮೇಲಾಗಿ ಒಬ್ಬಳೇ ಮಗಳು. ಇನ್ನೇನು ಇಷ್ಟರಲ್ಲಿಯೇ ಮದ್ವೆ ಆಗಬೇಕಿತ್ತು. ಸುಲ್ತಾನಾಳ ಮದ್ವೆ ಆಗಬೇಕಾದ ಹುಡುಗ ಸಹ ಹರಿಹರ ಮೂಲದವನೇ. ಇಬ್ಬರೂ ತೆರಿಗೆ ಸಲಹೆ ಗಾರ ಮಹ್ಮದ್ ಭಾಷಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಬಾಳಿ ಬದುಕಬೇಕಾದ ಚಿನ್ನದಂತಹ ಹುಡುಗಿ ದುಷ್ಟನ ಕೈಗೆ ಸಿಕ್ಕು ಕೊಲೆಯಾಗಿ ದುರಂತ ಅಂತ್ಯ ಕಂಡಿದ್ದಾಳೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:41 pm, Thu, 22 December 22