Vijayapura: ಕೃಷ್ಣಾ ನದಿಯಲ್ಲಿ ಬಿದ್ದ ಬಾಲಕಿಯ ರಕ್ಷಣೆಗೆ ಧಾವಿಸಿದ ಅತ್ತೆ; ಇಬ್ಬರೂ ನೀರುಪಾಲು
ನದಿಯಲ್ಲಿ ಅಕ್ರಮವಾಗಿ ಮಣ್ಣು ತೆಗೆದ ಕಾರಣ ಉಂಟಾದ ಗುಂಡಿಗಳೇ ಅತ್ತೆ ಸೊಸೆ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಬಳಿಕ, ಇಬ್ಬರ ಶವಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರ ತೆಗೆದಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ: ನದಿಯಲ್ಲಿ ಬಿದ್ದ ಬಾಲಕಿಯ ರಕ್ಷಣೆಗೆ ಧಾವಿಸಿದ ಅತ್ತೆ ಹಾಗೂ ಬಾಲಕಿ ಇಬ್ಬರು ಕೂಡ ನೀರುಪಾಲಾದ ದಾರುಣ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುನಕುಂಟೆ ಗ್ರಾಮದಲ್ಲಿ ನಡೆದಿದೆ. ಹುನಕುಂಟೆ ಬಳಿ ಕೃಷ್ಣಾ ನದಿಯಲ್ಲಿ ಮುಳುಗಿ ಅತ್ತೆ, ಸೊಸೆ ಇಬ್ಬರೂ ಸಾವನ್ನಪ್ಪಿದ್ದಾರೆ.
ಗುರುಸಂಗಮ್ಮ ಮುದೂರ ಎಂಬ 8 ವರ್ಷದ ಬಾಲಕಿಯನ್ನು ಅತ್ತೆ ಶಾಂತಮ್ಮ ನಾಗೋಡ (20 ವರ್ಷ) ಎಂಬವರು ಕಾಪಾಡಲು ಹೊರಟಿದ್ದರು. ಆದರೆ, ದುರಾದೃಷ್ಟವಷಾತ್ ಇಬ್ಬರೂ ಸಾವನ್ನಪ್ಪಿದ್ದಾರೆ. ನೀರು ಕುಡಿಯುವ ವೇಳೆ ಬಾಲಕಿ ಗುರುಸಂಗಮ್ಮ ಮುದೂರ ಕಾಲುಜಾರಿ ಬಿದ್ದು ಮುಳುಗಿದ್ದಾಳೆ ಎಂದು ತಿಳಿದುಬಂದಿದೆ. ಈ ವೇಳೆ, ಬಾಲಕಿಯನ್ನು ರಕ್ಷಣೆ ಮಾಡಲು ಬಾಲಕಿಯ ಅತ್ತೆ ಶಾಂತಮ್ಮ ನಾಗೋಡ ಮುಂದಾಗಿದ್ದಾರೆ. ಆಗ ನದಿಯಲ್ಲಿನ ಗುಂಡಿಯಲ್ಲಿ ಮುಳುಗಿ ಅತ್ತೆ, ಸೊಸೆ ಇಬ್ಬರೂ ಸಾವನ್ನಪ್ಪಿದ್ದಾರೆ.
ನದಿಯಲ್ಲಿ ಅಕ್ರಮವಾಗಿ ಮಣ್ಣು ತೆಗೆದ ಕಾರಣ ಉಂಟಾದ ಗುಂಡಿಗಳೇ ಅತ್ತೆ ಸೊಸೆ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಬಳಿಕ, ಇಬ್ಬರ ಶವಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರ ತೆಗೆದಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Accident: ಡಾಬಾ ಬಳಿ ನಿಂತಿದ್ದ ಬಸ್‌ಗೆ ಟ್ರಕ್ ಡಿಕ್ಕಿ, 18 ಜನರ ಸಾವು
ಅಕ್ಕೋಳ ಸಿದ್ನಾಳ ಸೇತುವೆ ದಾಟಲು ಹೋಗಿ ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ …
(Two people drowned Died in Krishna River Water in Muddebihala Hunakunte Village)