ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು & ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬಾಣಂತಿಯರಿಗೆ ಹಾಕಲಾಗಿದ್ದ ಹೊಲಿಗೆ ಬಿಚ್ಚಿಕೊಂಡು ರಕ್ತಸ್ರಾವವಾಗಿದ್ದು ಡಿಸ್ಚಾರ್ಜ್ ಆಗಿದ್ದ ಬಾಣಂತಿಯರು ವಾಪಸ್ ಆಸ್ಪತ್ರೆಗೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಎಸಿ ಬಲರಾಮ ಲಮಾಣಿ ನೇತೃತ್ವದ ತಂಡದಿಂದ ನಡೆದ ತನಿಖೆ ಅಂತ್ಯವಾಗಿದೆ. ಈ ಪ್ರಕರಣ ಸಂಬಂಧ ತನಿಖೆ ನಡೆಸಲು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರು ಸೂಚನೆ ನೀಡಿದ್ದರು. ಮೇ 16 ರಂದು ತನಿಖೆಗೆ ಆದೇಶಿಸಿ 48 ಗಂಟೆಯೊಳಗೆ ತನಿಖಾ ವರದಿ ಸಲ್ಲಿಕೆಗೆ ಸೂಚಿಸಿದ್ದರು. ಅದರಂತೆ ವಿಜಯಪುರ ಎಸಿ, ಡಿಹೆಚ್ಓ ಹಾಗೂ ಆರ್ಸಿಹೆಚ್ಓ ಅಧಿಕಾರಿಗಳನ್ನ ಒಳಗೊಂಡ ತನಿಖಾ ತಂಡ ವಿಜಯಪುರ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳ ಕಾಲ ವಿಚಾರಣೆ ನಡೆಸಿ ವಿಚಾರಣೆ ಅಂತ್ಯಗೊಳಿಸಿದೆ. ನಿನ್ನೆ ಸಂಜೆ ತನಿಖಾ ವರದಿ ಸಲ್ಲಿಕೆ ಮಾಡಬೇಕಿದ್ದ ತಂಡ, ಕೆಲ ತಾಂತ್ರಿಕ ಕಾರಣದಿಂದ ತನಿಖಾ ವರದಿ ಸಲ್ಲಿಸಿರಲಿಲ್ಲ. ಸದ್ಯ ಇಂದು ಸಂಜೆ ಜಿಲ್ಲಾಧಿಕಾರಿಗಳಿಗೆ ತನಿಖಾ ವರದಿ ಸಲ್ಲಿಸಲಿದ್ದಾರೆ. ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ನೇತೃತ್ವದಲ್ಲಿ ತನಿಖಾ ವರದಿ ಸಲ್ಲಿಕೆಯಾಗಲಿದೆ.
ಹೊಲಿಗೆ ಬಿಚ್ಚಿದ್ರಿಂದ 23 ಬಾಣಂತಿಯರ ನರಳಾಟ
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಏಪ್ರಿಲ್ 30 ರಿಂದ ಮೇ 13 ರವರೆಗೆ ಸುಮಾರು 250ಕ್ಕೂ ಹೆಚ್ಚು ಮಹಿಳೆಯರಿಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಆದ್ರೆ, ಈ ಪೈಕಿ 23 ಬಾಣಂತಿಯರಿಗೆ ಹೊಲಿಗೆ ಬಿಚ್ಚಿದ್ದು ರಕ್ತಸ್ರಾವವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ: PSI Recruitment Scam: ಜ್ಞಾನಜ್ಯೋತಿ ಶಾಲೆ ಪುನರಾರಂಭ, ಶ್ರೀಧರ್ ನಿವಾಸದಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆ
ಆಸ್ಪತ್ರೆ ಸಿಬ್ಬಂದಿ ಸಹ ಬಾಣಂತಿಯರನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ನಾವು ಬಡವರು, ಹಣವಿಲ್ಲದ ಕಾರಣ ಸರ್ಕಾರಿ ಆಸ್ಪತ್ರೆಗೆ ಬಂದಿದ್ದೇವೆ. ನಮ್ಮ ಜೀವದ ಜೊತೆಗೆ ಆಟವಾಡಬೇಡಿ ಅಂತ ಸಂಬಂಧಿಕರು ಗೋಳಾಡ್ತಿದ್ದಾರೆ. ಮೊದಲೇ ಹೇಳಿದ್ರೆ ಪ್ರಾಣ ಒತ್ತೆ ಇಟ್ಟಾದ್ರೂ ಬೇರೆ ಆಸ್ಪತ್ರೆಗಾದ್ರೂ ಸೇರಿಸ್ತಿದ್ವಿ. ಈಗ ಏನಾಗುತ್ತೋ ಅನ್ನೋ ಭಯ ಕಾಡ್ತಿದೆ ಅಂತ ಕಣ್ಣೀರು ಹಾಕ್ತಿದ್ದಾರೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ಶಸ್ತ್ರಚಿಕಿತ್ಸಾ ವಿಭಾಗವಿದೆ. ಹೀಗಾಗಿ ಸರಿಯಾಗಿ ಕಾರ್ಬೋಲೈಜೇಷನ್ ಅಂದ್ರೆ ಶುಚೀಕರಣ ಮಾಡ್ತಿಲ್ಲ. ಹೆರಿಗೆ ಸಂಖ್ಯೆ ಹೆಚ್ಚಳದ ಕಾರಣ ಕಾರ್ಬೋಲೈಜೇಷನ್ಗೆ ಸಮಯ ಸಾಕಾಗ್ತಿಲ್ವಂತೆ. ಜೊತೆಗೆ ಹಿಮೋಗ್ಲೋಬಿನ್ ಕಡಿಮೆ ಇರುವವರಲ್ಲಿ ಹೀಗೆ ಇನ್ಪೆಕ್ಷನ್ ಆಗ್ತಿದೆ ಅಂತ ಆಸ್ಪತ್ರೆ ವೈದ್ಯರು ಹೇಳ್ತಿದ್ದಾರೆ. ಇನ್ನು 5 ಬಾಣಂತಿಯರನ್ನು ನಿಗಾದಲ್ಲಿ ಇಟ್ಟಿದ್ದೇವೆ. ಯಾವುದೇ ಗಂಭೀರ ಸಮಸ್ಯೆ ಇಲ್ಲ ಅಂತಾರೆ ಆಸ್ಪತ್ರೆ ವೈದ್ಯರು. ಇದನ್ನೂ ಓದಿ: ಕಮಲ್ ಹಾಸನ್ ಮಾಜಿ ಪತ್ನಿ ಸಾರಿಕಾಗೆ ಆರ್ಥಿಕ ಸಂಕಷ್ಟ; 3 ಸಾವಿರ ರೂಪಾಯಿಗಾಗಿ ಕಷ್ಟಪಟ್ಟ ಖ್ಯಾತ ನಟಿ
Published On - 3:42 pm, Wed, 18 May 22