Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರಗಾಲದಲ್ಲೂ ಹನಿ ಹನಿ ನೀರು ಉಳಿಸಿ ದಾಳಿಂಬೆ ಬೆಳೆದಿದ್ದ ವಿಜಯಪುರ ರೈತ: ರಾತ್ರೋರಾತ್ರಿ ನಾಲ್ಕಾರು ಲಕ್ಷ ಮೌಲ್ಯದ ದಾಳಿಂಬೆ ಕದ್ದ ಖದೀಮರು!

ಬರಗಾಲದ ಸಮ್ಮುಖದಲ್ಲಿಯೂ ಹನಿ ನೀರಾವರಿ ಮಾಡಿ ಸಂಕಷ್ಟದಲ್ಲಿ ಐದು ತಿಂಗಳ ಹಿಂದೆ ನಾಲ್ಕು ‌ಎಕರೆ ಪ್ರದೇಶದಲ್ಲಿ ಐದಾರು ಲಕ್ಷ ಖರ್ಚು ಮಾಡಿ ದಾಳಿಂಬೆ ಬೆಳೆದಿದ್ದ ರೈತ ಮಹಾದೇವ ಚನಶೆಟ್ಟಿ ಆಘಾತಕ್ಕೊಳಗಾಗಿದ್ದಾನೆ. ಫಸಲು ಕೈಗೆ ಬರುವ ಮೊದಲೇ ಲಕ್ಷ ಲಕ್ಷ ಮೌಲ್ಯದ ದಾಳಿಂಬೆ ಕಳ್ಳರ ಪಾಲಾಗಿದೆ. ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಕಳ್ಳರ ಕೈ ಚಳಕಕ್ಕೆ ರೈತ ಮಹಾದೇವ ಕಣ್ಣೀರು ಸುರಿಸುತ್ತಿದ್ದಾರೆ

ಬರಗಾಲದಲ್ಲೂ ಹನಿ ಹನಿ ನೀರು ಉಳಿಸಿ ದಾಳಿಂಬೆ ಬೆಳೆದಿದ್ದ ವಿಜಯಪುರ ರೈತ: ರಾತ್ರೋರಾತ್ರಿ ನಾಲ್ಕಾರು ಲಕ್ಷ ಮೌಲ್ಯದ ದಾಳಿಂಬೆ ಕದ್ದ ಖದೀಮರು!
ದಾಳಿಂಬೆ ಬೆಳೆದಿದ್ದ ವಿಜಯಪುರ ರೈತ: ರಾತ್ರೋರಾತ್ರಿ ನಾಲ್ಕಾರು ಲಕ್ಷ ಮೌಲ್ಯದ ದಾಳಿಂಬೆ ಕದ್ದ ಖದೀಮರು!
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಸಾಧು ಶ್ರೀನಾಥ್​

Updated on:Sep 09, 2023 | 2:17 PM

ವಿಜಯಪುರ ಜಿಲ್ಲೆಯ ರೈತರ ಪರಸ್ಥಿತಿ ಹದಗೆಟ್ಟಿದೆ. ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಮುಂಗಾರು ಬೆಳೆಗಳ ಫಸಲು ಕೈಗೆ ಬಾರದಂತಾಗಿದೆ. ಬದರ ಸಂಕಷ್ಟದ ನಡುವೆ ಕೆಲ ರೈತರು ತೋಟಗಾರಿಕಾ ಬೆಳೆಗಳನ್ನು ಬೆಳೆಯೋ ಮೂಲಕ ಸಂಸಾರದ ನೊಗವನ್ನು ಹೊತ್ತು ಮುಂದೆ ಸಾಗುತ್ತಿದ್ದಾರೆ. ಒಂದೆಡೆ ಮಳೆಯಾಶ್ರಿತ ಬೆಳೆಗಳು ಬಾರದಂತಾಗಿದ್ದು ಜೀವನಕ್ಕೆ ತೋಟಗಾರಿಕೆ ಬೆಳೆಗಳನ್ನೇ ಆಶ್ರಯಿಸಿದ್ಧಾರೆ. ಬಾವಿ ಕೊಳವೆ ಬಾವಿಗಳ ಅಲ್ಪಸವಲ್ಪ ನೀರಲ್ಲೇ ಬೆಳೆದ ತೋಟಗಾರಿಕೆ ಬೆಳೆಗಳಾದ ದಾಳಿಂಬೆ ದ್ರಾಕ್ಷಿ ಬಾಳೆ ಹಾಗೂ ಕೆಲ ತರಕಾರಿಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಇಷ್ಟರ ಮದ್ಯೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ದಾಳಿಂಬೆಗೆ ಕದೀಮರ ಕಣ್ಣು ಬಿದ್ದಿದೆ. ದಾಳಿಂಬೆ  ಖದೀಮರು ಕುರಿತ ವರದಿ ಇಲ್ಲಿದೆ ನೋಡಿ……

ಬರಗಾಲದ ಮದ್ಯೆ ಬೆಳೆದ ದಾಳಿಂಬೆ ಮೇಲೆ ಕದೀಮರ ಕಣ್ಣು…… ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ದಾಳಿಂಬೆ ಫಸಲನ್ನು ಕದ್ದುಕೊಂಡು ಹೋದ ದುಷ್ಕರ್ಮಿಗಳು…… ದಾಳಿಂಬೆ ಫಸಲನ್ನು ಕಳೆದುಕೊಂಡು ಕಂಗಾಲಾಗಿರೋ ರೈತ….. ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ತೀವ್ರ ಬರಗಾಲ ಉಂಟಾಗಿದೆ. ವಾಡಿಕೆಗಳಿಗಿಂತ ಮಳೆ ಕಡಿಮೆಯಾಗಿದೆ. ಜೂನ್ ನಲ್ಲಿ ಮಳೆಯಾಗದ ಕಾರಣ ಮುಂಗಾರು ಬಿತ್ತನೆ ಮಾಡಿಲ್ಲಾ. 7.40 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಿದ್ದರೂ ಜುಲೈ 15 ರ ನಂತರ ಮಳೆಯಾಗಿದೆ. ಈ ಕಾರಣ 5.70 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯಾಗಿತ್ತು. ಆದರೆ ಅಗಷ್ಟನಲ್ಲಿ ಮಳೆಯಾಗದ ಕಾರಣ ಬಿತ್ತನೆ ಮಾಡಿದ ಬೆಳೆಗಳು ಕಮರಿ ಹಾಳಾಗಿವೆ. ಸಾಲಸೋಲ ಮಾಡಿ ಬಿತ್ತನೆ ಮಾಡಿದ ರೈತರಿಗೆ ನಷ್ಟವಾಗಿದೆ. ಇಷ್ಟರ ಮದ್ಯೆ ಅಲ್ಲಲ್ಲಿ ಬಾವಿ ಹಾಗೂ ಕೊಳವೆ ಬಾವಿಗಳ ನೀರಿನ ಆಶ್ರಯದಲ್ಲಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆದ ರೈತರಿಗೂ ಸಂಕಷ್ಟ ತಪ್ಪಿಲ್ಲಾ.

ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬೆಳೆದ ತೋಟಗಾರಿಕಾ ಬೆಳಗಳ ಫಸಲಿನ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಮಹಾದೇವ ಚೆನಶೆಟ್ಟಿ ಎಂಬ ರೈತನ 4 ಎಕರೆ ಜಮೀನಿನಲ್ಲಿ ಬೆಳೆದಿರೋ ಕಟಾವಿಗೆ ಬಂದಿದ್ದ ದಾಳಿಂಬೆಯನ್ನು ಕದೀಮರು ರಾತ್ರಿ ಕದ್ದುಕೊಂಡು ಹೋಗಿದ್ದಾರೆ. ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218 ಕ್ಕೆ ಹೊಂದಿಕೊಂಡಿರೋ ಜಮೀನಿನಲ್ಲಿ ಮಹದೇವ ಚೆನಶೆಟ್ಟಿ, ಬರಗಾಲದಲ್ಲೂ ಭರಪೂರ ದಾಳಿಂಬೆ ಬೆಳೆದಿದ್ದಾರೆ. ಕಷ್ಟಪಟ್ಟು ಉತ್ತಮ ದಾಳಿಂಬೆ ಬೆಳೆದಿದ್ದು ಇದೀಗಾ ಕಟಾವಿದೆ ಬಂದಿದೆ. 20 ಕೆಜಿ ಒಂದು ದಾಳಿಂಬೆ ಟ್ರೇ 2000 ರೂಪಾಯಿಗೆ ಮಾರುಕಟ್ಟೆಯಲ್ಲಿ ಮಹಾದೇವ ಬೆಳೆದಿದ್ದ ದಾಳಿಂಬೆ ಮಾರಾಟವಾಗುತ್ತಿದೆ. 5 ಎಕರೆಗೆ 6 ಲಕ್ಷಕ್ಕೂ ಆಧಿಕ ಹಣ ಖರ್ಚು ಮಾಡಿರೋ ಮಹಾದೇವ ಚೆನಶೆಟ್ಟಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಮಹಾದೇವ ಅವರ ತೋಟದಲ್ಲಿ ಬೆಳೆದಿರೋ ದಾಳಿಂಬೆಯನ್ನು ನಿನ್ನೆ ರಾತ್ರಿ ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ಧಾರೆ. 3 ರಿಂದ 4 ಲಕ್ಷ ರೂಪಾಯಿ ಮೌಲ್ಯದ ದಾಳಿಂಬೆಯನ್ನು ಕದ್ದುಕೊಂಡು ಹೋಗಿದ್ದಾರೆ. ಇದರಿಂದ ದಾಳಿಂಬೆ ಬೆಳಗಾರ ಮಹಾದೇಶ ಚೆನಶೆಟ್ಟಿ ಕಂಗಾಲಾಗಿದ್ದಾರೆ.

ಹನಿ ನೀರಾವರಿ ಮೂಲಕ ಮಹಾದೇವ ಚೆನಶೆಟ್ಟಿ ಕಳೆದ ಆರು ತಿಂಗಳಿಂದಲೂ ಕಷ್ಟಪಟ್ಟು ದಾಳಿಂಬೆ ಬೆಳೆದಿದ್ದರು. ಮಳೆಯ ಕೊರತೆ ಹಾಗೂ ಬರದಲ್ಲೂ ದೈರ್ಯ ಮಾಡಿ 5 ರಿಂದ 6 ಲಕ್ಷ ರೂಪಾಯಿ ಹಣ ಖರ್ಚು ಮಾಡಿ ದಾಳಿಂಬೆ ಬೆಳೆದಿದ್ದರು. ಇನ್ನೇನು ಕಟಾವು ಮಾಡಿಕೊಂಡು ಮಾರುಕಟ್ಟೆಗೆ ಕಳುಹಿಸಲು ಮುಂದಾಗಿದ್ದರು. 20 ಕೆಜಿಯ ದಾಳಿಂಬೆ ಫಸಲಿನ ಒಂದು ಟ್ರೇ 2000 ಕ್ಕೂ ಆಧಿಕ ದರಕ್ಕೆ ಮಾರಾಟವಾಗುತ್ತಿದೆ. ಹೇಗೂ ಐದಾರು ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ. ಉತ್ತಮ ಫಸಲೂ ಇದೆ ಉತ್ತಮ ದರವೂ ಇದೆ. ಹಾಗಾಗಿ ಲಾಭವೂ ಹೆಚ್ಚಾಗಲಿದೆ. ಸಾಲಸೋಲ ಮಾಡಿದ್ದನ್ನು ಮರುಪಾವತಿ ಮಾಡಬೇಕೆಂದು ಮಹಾದೇವ ಕನಸು ಕಂಡಿದ್ದರು. ಆದರೆ ಕಳ್ಳರು ಇವರ ಜಮೀನಿನಲ್ಲಿದ್ದ ದಾಳಿಂಬೆಯನ್ನು ಕದ್ದು ಓಡಿ ಹೋಗಿದ್ದಾರೆ. ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ್ದ ರೈತ ತಲೆಯ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ. ದಾಳಿಂಬೆ ಕಳ್ಳತನವಾಗಿದ್ದರ ಬಗ್ಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ಧಾರೆ. ರೈತ ಮಹಾದೇವ ಚೆನಶೆಟ್ಟಗೆ ನ್ಯಾಯ ನೀಡಬೇಕೆಂದು ಇತಯರೆ ರೈತರು ಒತ್ತಾಯ ಮಾಡಿದ್ದಾರೆ. ಸರ್ಕಾರ ತೋಟಗಾರಿಕಾ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹ ಮಾಡಿದ್ದಾರೆ.

ಜುಮನಾಳ ಗ್ರಾಮದ ಸುತ್ತಮುತ್ತಲ ರೈತರಿಗೆ ಕದೀಮರ ಈ ಕೃತ್ಯ ಸವಾಲಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಕದಿರೋ ಘಟನೆಗಳು ನಡೆದಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕದೀಮರನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಬರಗಾಲದಲ್ಲಿ ಕಷ್ಟಪಟ್ಟು ಬೆಳೆಯೋ ತರಕಾರಿ ಹಾಗೂ ಹಣ್ಣುಗಳನ್ನು ಕಳ್ಳತನ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದ್ದಾರೆ.

ವಿಜಯಪುರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:14 pm, Sat, 9 September 23

‘ಎದ್ದೆದ್ದು ಬೀಳುತಿಹೆ’: ಕಗ್ಗ ಉಲ್ಲೇಖಿಸಿ ಬಿಜೆಪಿಗೆ ತಿವಿದ ಡಿಕೆಶಿ
‘ಎದ್ದೆದ್ದು ಬೀಳುತಿಹೆ’: ಕಗ್ಗ ಉಲ್ಲೇಖಿಸಿ ಬಿಜೆಪಿಗೆ ತಿವಿದ ಡಿಕೆಶಿ
ಬೆಲೆಗಳು ಗಗನ ತಲುಪಿರುವ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳು ಜಾರಿ: ಡಿಸಿಎಂ
ಬೆಲೆಗಳು ಗಗನ ತಲುಪಿರುವ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳು ಜಾರಿ: ಡಿಸಿಎಂ
ತೆರಿಗೆ ನೀಡುವ ಆಧಾರದಲ್ಲಿ ಸಿದ್ದರಾಮಯ್ಯ ಅನುದಾನ ಹಂಚಿಕೆ ಮಾಡಲಿ: ಪ್ರತಾಪ್
ತೆರಿಗೆ ನೀಡುವ ಆಧಾರದಲ್ಲಿ ಸಿದ್ದರಾಮಯ್ಯ ಅನುದಾನ ಹಂಚಿಕೆ ಮಾಡಲಿ: ಪ್ರತಾಪ್
ಪುನೀತ್ ರಾಜ್​ಕುಮಾರ್ ಡೆಡಿಕೇಶನ್ ಹೇಗಿತ್ತು, ಅಪ್ಪು ವೆಂಕಟೇಶ್ ನೆನಪು
ಪುನೀತ್ ರಾಜ್​ಕುಮಾರ್ ಡೆಡಿಕೇಶನ್ ಹೇಗಿತ್ತು, ಅಪ್ಪು ವೆಂಕಟೇಶ್ ನೆನಪು
ಮಸೀದಿ ತೆರೆಸಿ ನೋಡಿ: ಸಿದ್ದರಾಮಯ್ಯಗೆ ಪ್ರತಾಪ್​ ಸಿಂಹ ಸವಾಲು
ಮಸೀದಿ ತೆರೆಸಿ ನೋಡಿ: ಸಿದ್ದರಾಮಯ್ಯಗೆ ಪ್ರತಾಪ್​ ಸಿಂಹ ಸವಾಲು
ವಿರೋಧ ಪಕ್ಷಗಳ ಶಾಸಕರು ಅನುದಾನ ಕೇಳೋದ್ರಲ್ಲಿ ತಪ್ಪಿಲ್ಲ: ಪ್ರಿಯಾಂಕ್ ಖರ್ಗೆ
ವಿರೋಧ ಪಕ್ಷಗಳ ಶಾಸಕರು ಅನುದಾನ ಕೇಳೋದ್ರಲ್ಲಿ ತಪ್ಪಿಲ್ಲ: ಪ್ರಿಯಾಂಕ್ ಖರ್ಗೆ
ಮದ್ಯವ್ಯಸನಿ ಮಗನಿಗೆ ಬೈಕ್ ಕೊಡಿಸಿದರೆ ಅಪಾಯ ತಪ್ಪಲ್ಲ ಅಂದುಕೊಂಡಿದ್ದ ತಂದೆ
ಮದ್ಯವ್ಯಸನಿ ಮಗನಿಗೆ ಬೈಕ್ ಕೊಡಿಸಿದರೆ ಅಪಾಯ ತಪ್ಪಲ್ಲ ಅಂದುಕೊಂಡಿದ್ದ ತಂದೆ
ಸೋಪು-ಶಾಂಪೂ ಬಳಸಬಾರದೆಂಬ ನಿಯಮದ ಯಥೇಚ್ಛ ಉಲ್ಲಂಘನೆ
ಸೋಪು-ಶಾಂಪೂ ಬಳಸಬಾರದೆಂಬ ನಿಯಮದ ಯಥೇಚ್ಛ ಉಲ್ಲಂಘನೆ
ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸದ ಹೊರತು ವಿಶ್ರಮಿಸುವುದಿಲ್ಲ: ಕರವೇ
ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸದ ಹೊರತು ವಿಶ್ರಮಿಸುವುದಿಲ್ಲ: ಕರವೇ