ವಿಜಯಪುರ ಜನರ ವಿಮಾನಯಾನ ಇನ್ನಷ್ಟು ವಿಳಂಬ: ಏರ್ಫೋರ್ಟ್ ಉದ್ಘಾಟನೆಗೆ ಮತ್ತೆ ವಿಘ್ನ
ವಿಜಯಪುರ ವಿಮಾನ ನಿಲ್ದಾಣದ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದರೂ, ಪರಿಸರ ಅನುಮತಿಯ ಕೊರತೆಯಿಂದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಇದರಿಂದ ಉದ್ಘಾಟನೆ ಮುಂದೂಡಲ್ಪಟ್ಟಿದೆ. ಫೈರ್ ಫೈಟರ್ ವ್ಯವಸ್ಥೆಯ ಕೊರತೆಯೂ ಸಮಸ್ಯೆಯಾಗಿದೆ. ಸರ್ಕಾರ ಶೀಘ್ರ ಪರಿಹಾರಕ್ಕೆ ಪ್ರಯತ್ನಿಸುತ್ತಿದೆ. ಇನ್ನು ವಿಮಾನ ನಿಲ್ದಾಣಕ್ಕೆ ಹೆಸರಿಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ವಿಜಯಪುರ, ಫೆಬ್ರವರಿ 01: ವಿಜಯಪುರ ವಿಮಾನ ನಿಲ್ದಾಣಕ್ಕೂ (Airport) ಸಮಸ್ಯೆಗಳಿಗೂ ಅವಿನಾಭಾವ ಸಂಬಂಧ ಇದೆ ಎನ್ನಬಹುದು. ವಿಮಾನ ನಿಲ್ದಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಕಾಮಗಾರಿ ಆರಂಭದ ವೇಳೆ ಹಾಗೂ ಕಾಮಗಾರಿ ಮುವಿಜಯಪುರ ಜನರ ವಿಮಾನಯಾನ ಇನ್ನಷ್ಟು ವಿಳಂಬ: ಏರ್ಫೋರ್ಟ್ ಉದ್ಘಾಟನೆಗೆ ಮತ್ತೆ ವಿಘ್ನಕ್ತಾಯದವರೆಗೂ ಒಂದಿಲ್ಲಾ ಒಂದು ಸಮಸ್ಯೆ ಎದುರಾಗುತ್ತಲೇ ಬಂದಿವೆ. ಇನ್ನೇನು ವಿಮಾನ ನಿಲ್ದಾಣ ಕಾಮಗಾರಿ ಮುಗಿಯುತ್ತಾ ಬಂದಿದೆ. ವಿಮಾನ ಹಾರಾಟ ಆರಂಭವಾಗಲಿದೆ. ನಾವು ವಿಮಾನದಲ್ಲಿ ಪ್ರಯಾಣ ಮಾಡುವ ಕಾಲ ಸನ್ನಿಹಿತವಾಗಿದೆ ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ವಿಘ್ನ ಎದುರಾಗಿದೆ.
ಜಿಲ್ಲೆಯ ಜನರಿಗೆ ವಿಮಾನ ಯಾನ ಇನ್ನಷ್ಟು ಕಾಲ ವಿಳಂಬವೇ ಆಗಲಿದೆ. 2008 ರಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ ಅವರು ವಿಜಯಪುರ ತಾಲೂಕಿನ ಮದಭಾವಿ ಬಳಿ ವಿಮಾನ ನಿಲ್ದಾಣಕ್ಕೆ ಭೂಮಿಪೂಜೆ ಮಾಡಿದ್ದರು. ರೈತರ ಖಾಸಗಿ ವ್ಯಕ್ತಿಗಳ 379.08 ಎಕರೆ ಜಮೀನು 47.33 ಎಕರೆ ಸರ್ಕಾರಿ ಜಮೀನು ಸೇರಿ ಒಟ್ಟು 727.01 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿತ್ತು. ನಂತರ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ ಮತ್ತೆ ಯಡಿಯೂರಪ್ಪ ಅವರು ಸಿಎಂ ಆದ ಬಳಿ ಶಿವಮೊಗ್ಗ ಹಾಗೂ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. 2021 ರ ಫೆಬ್ರುವರಿ 15 ರಂದು ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಶಿವಮೊಗ್ಗದಿಂದ ವರ್ಚ್ಯೂವಲ್ ಮೂಲಕ ಚಾಲನೆ ನೀಡಿದ್ದರು.
ಇದನ್ನೂ ಓದಿ: ವರ್ಷದಿಂದ ಹಾರಾಡದ ವಿಮಾನ: ಮುಚ್ಚುವ ಭೀತಿಯಲ್ಲಿ ಬೀದರ್ ಏರ್ಪೋರ್ಟ್!
ಮೊದಲ ಹಾಗೂ ಎರಡನೇ ಹಂತದಲ್ಲಿ 220 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿತ್ತು. ಆಲೂರು ಎಂಬ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ. ನಂತರ 125 ಕೋಟಿ ವೆಚ್ಚದಲ್ಲಿ ಇಲ್ಲಿ 320 ಏರ್ ಬಸ್, ಕಾರ್ಗೋ ವಿಮಾನಗಳ ಸೇವೆ ಸಿಗಬೇಕೆಂಬ ಕಾರಣದಿಂದ ಕಾಮಗಾರಿ ವಿಸ್ತರಣೆಯಾಗಿತ್ತು. 2021 ರಿಂದಲೇ ಕಾಮಗಾರಿ ಆರಂಭವಾಗಿದ್ದು ರನ್‍ವೇ, ಎಸಿಟಿ, ಟ್ಯಾಕ್ಸಿ ವೇ, ಎಪ್ರಾನ್, ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, ಇಸೋಲೇಶನ್ ಬೇ, ಒಳ ರಸ್ತೆಗಳು, ಪೆರಿಪೆರಲ್ ರಸ್ತೆಗಳು ಹಾಗೂ ಇತರೆ ಕಾಮಗಾರಿಗಳು ಮುಕ್ತಾಯವಾಗಿವೆ.
ಉದ್ಘಾಟನೆಗೆ ತಡೆ
ಭಾರತೀಯ ವಿಮಾನಯಾನದ ಕೇಂದ್ರದ ಅಧಿಕಾರಿಗಳು ವಿಜಯಪುರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ವಿಮಾನ ನಿಲ್ದಾಣದಲ್ಲಿ ಫೈರ್ ಫೈಟರ್ಸ್ ವಿಚಾರದಲ್ಲಿ ಸಮಸ್ಯೆಯಾಗಿತ್ತು. ನಂತರ ಕಾಂಗ್ರೆಸ್ ಆಧಿಕಾರಕ್ಕೇರಿದ ಬಳಿ ಎರಡು ಫೈರ್ ಫೈಟರ್ಸ್ ತರಲು ವಿವಿಧ ಕಂಪನಿಗಳ ಜೊತೆಗೆ ಮಾತುಕತೆ ನಡೆಸುತ್ತಿರೋವಾಗಲೇ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ ಒಂದು ಪ್ರಕರಣ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ತಡೆಯಾಗಿದೆ.
ಬೆಂಗಳೂರು ಮೂಲಕ ಎನ್ಜಿಓ ಸುಪ್ರೀಂ ಕೋರ್ಟ್‌ನಲ್ಲಿ ಒಂದು ದಾವೆ ಹೂಡಿದೆ. ಪರಿಸರ ವಿಚಾರದಲ್ಲಿ ಹೂಡಿರುವ ದಾವೆ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಯಾಗದಂತೆ ತಡೆ ಹಾಕಿದಂತೆ ಆಗಿದೆ. ಇಷ್ಟು ದಿನ ಫೈರ್ ಫೈಟರ್ಸ್ ಯಂತ್ರಗಳನ್ನು ತರಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಳಂಭ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಫೈರ್ ಪೈಟರ್ಸ್ ಸಮಸ್ಯೆ ಬಗೆ ಹರಿಸುವತ್ತ ಸರ್ಕಾರ ಕ್ರಮ ತೆಗೆದುಕೊಂಡ ಬೆನ್ನಲ್ಲೇ ಹಿಂದೆ ವಿಮಾನ ನಿಲ್ದಾಣ ಕಾಮಗಾರಿ ಆರಂಭದಲ್ಲೇ ಅಂದಿನ ಬಿಜೆಪಿ ಸರ್ಕಾರ ಮಾಡಿದ ಒಂದು ಯಡವಟ್ಟು ಇಂದಿನ ಸಮಸ್ಯೆಗೆ ಕಾರಣವಾಗಿದೆ.
ಗ್ರೀನ್ ಕೋರ್ಟ್ ನಿಂದ ಅಂದರೆ ಹಸಿರು ಪೀಠದಿಂದ ಅನುಮತಿ ಪಡೆಯದೇ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದೆ. ಈ ಗ್ರೀನ್ ಕೋರ್ಟ್ ಪರ್ಮಿಷನ್ ಇಲ್ಲದ ಕಾರಣ ಸಮಸ್ಯೆಯಾಗಿದೆ. ಈ ಕುರಿತು ಬೆಂಗಳೂರಿನ ಎನ್ಜಿಓ ಸುಪ್ರೀಂ ಅಂಗಳಕ್ಕೆ ಸಮಸ್ಯೆಯನ್ನು ತೆಗೆದುಕೊಂಡು ಹೋಗಿರುವ ಕಾರಣ ವಿಮಾನ ನಿಲ್ದಾಣ ಉದ್ಘಾಟನೆಗೆ ಅಡ್ಡಗಾಲು ಹಾಕಿದಂತಾಗಿದೆ.
ಇದನ್ನೂ ಓದಿ: ಕೆಎಎಸ್ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ನೋಂದಣಿ- ಓಎಂಆರ್ ಶೀಟ್ ನಂಬರ್ ಅದಲು ಬದಲು
ಈ ಕುರಿತು ಪ್ರತಿಕ್ರಿಯಿಸಿರುವ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಎನ್ವಿರಾನ್ಮೆಂಟ್ ಕ್ಲಿಯರರ್ಸ್ ಆಗಿಲ್ಲ ಎಂದು ಎನ್ಜಿಓ 200ಕ್ಕೂ ಅಧಿಕ ಪ್ರಕರಣ ವಿಚಾರವನ್ನು ಸುಪ್ರೀಂ ಅಂಗಳಕ್ಕೆ ಹೋಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತರೆ ವಕೀಲರೊಂದಿಗೆ ಮಾತಾಡಿದ್ದೇನೆ. ವಕೀಲರು ಈ ನಿಟ್ಟಿನಲ್ಲಿ ನ್ಯಾಯವಾದಿಗಳನ್ನು ನಿಯಮಿಸಿದ್ಧಾರೆ. ಎರಡು ತಿಂಗಳಲ್ಲಿ ಎನ್ವಿರಾನ್ಮೆಂಟ್ ಕ್ಲಿಯರರ್ಸ್ ಪಡೆದುಕೊಳ್ಳುತ್ತೇವೆ. ಜೊತೆಗೆ ಆದಷ್ಟು ಬೇಗಾ ಫೈರ್ ಫೈಟರ್ಸ್ ಯಂತ್ರ ತರಿಸಿ ಶೀಘ್ರವೇ ವಿಮಾನ ನಿಲ್ದಾಣ ಉದ್ಘಾಟನೆ ಮಾಡುತ್ತೆವೆಂದು ಹೇಳಿದ್ದಾರೆ.
ವಿಮಾನ ನಿಲ್ದಾಣ ಹೆಸರಿಡುವ ವಿಚಾರವಾಗಿ ಕೂಗು
ಸದ್ಯ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಮುಗಿದಿದೆ. ಎನ್ವಿರಾನ್ಮೆಂಟ್ ಕ್ಲಿಯರರ್ಸ್ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಇದೇ ಫೆಬ್ರವರಿ 19 ರಂದು ವಿಚಾರಣೆ ನಡೆಯಲಿದೆ. ಆದಷ್ಟು ಬೇಗ ವಿಮಾನ ನಿಲ್ದಾಣಕ್ಕೆ ಶ್ರೀ ಬಸವೇಶ್ವರರ ಹೆಸರು ಹಾಗೂ ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಹೆಸರು ಇಡಬೇಕೆಂಬ ಕೂಗುಗಳು ಸಹ ಕೇಳಿ ಬಂದಿವೆ. ವಿಮಾನ ನಿಲ್ದಾಣ ಉದ್ಘಾಟನೆಗೂ ಮುನ್ನವೇ ಸರ್ಕಾರ ವಿಮಾನ ನಿಲ್ದಾಣಕ್ಕೆ ಯಾವ ಹೆಸರನ್ನು ಇಡಬೇಕೆಂಬುದನ್ನು ಅಂತಿಮ ತೀರ್ಮಾಣ ಮಾಡಬೇಕು. ಇಲ್ಲವಾದರೆ ವಿಮಾನ ನಿಲ್ದಾಣದ ಹೆಸರಿನಲ್ಲಿ ಹೋರಾಟಕ್ಕೆ ವೇದಿಕೆ ನೀಡಿದಂತಾಗುತ್ತದೆ ಎನ್ನಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.