- Kannada News Karnataka Vijayapura Vijayapura Woman dedication silver crown to huvinahalli Devi From gruha lakshmi scheme money News In kannada
ಗೃಹಲಕ್ಷ್ಮಿ ಯೋಜನೆ ಹಣದಿಂದ ದೇವಿಗೆ ಬೆಳ್ಳಿ ಕಿರೀಟ ಮಾಡಿಸಿದ ವಿಜಯಪುರದ ಮಹಿಳೆ..!
ಯಾರೇನೇ ಹೇಳಲಿ, ಸಿದ್ದರಾಮಯ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಹಣವನ್ನು ಕೆಲ ಗೃಹಿಣಿಯರು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇಂದು (ಅ,11) ಆಯುಧ ಪೂಜೆ ದಿನದಂದು ಬೆಳಗಾವಿ ಜಿಲ್ಲೆಯ ಮಹಿಳೆಯೊಬ್ಬರು ಕೂಡಿಟ್ಟಿದ್ದ ಗೃಹಲಕ್ಷ್ಮಿ ಹಣದಿಂದಲೇ ತನ್ನ ಮಗನಿಗೆ ಬೈಕ್ ಕೊಡಿಸಿದ್ದಾರೆ. ಈಗ ವಿಜಯಪುರದಲ್ಲಿ ಯಜಮಾನಿ ನಾಡದೇವಿಗೆ ಕಿರೀಟ ಮಾಡಿಸಿ ನೀಡಿದ್ದಾರೆ.
Updated on: Oct 11, 2024 | 6:02 PM

ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಬೆಳಗಾವಿ ಜಿಲ್ಲೆಯ ಅಜ್ಜಿಯೊಬ್ಬರು ಮುತ್ತೈದೆಯರಿಗೆ ಉಡಿ ತುಂಬಿ, ಹೋಳಿಗೆ ಊಟ ಹಾಕಿಸಿದರು. ಇಂದು ಅದೇ ಬೆಳಗಾವಿ ಜಿಲ್ಲೆಯ ಮತ್ತೋರ್ವ ಮಹಿಳೆ ಕೂಡಿಟ್ಟಿದ್ದ ಗೃಹಲಕ್ಷ್ಮಿ ಹಣದಿಂದ ಪುತ್ರನಿಗೆ ಹೊಸ ಬೈಕ್ ಕೊಡಿಸಿದ್ದಾರೆ. ಈಗ ವಿಜಯಪುರ ಜಿಲ್ಲೆಯ ಯಜಮಾನಿಯೊಬ್ಬರು ಕೂಡಿಟ್ಟಿದ್ದ ಇದೇ ಗೃಹಲಕ್ಷ್ಮಿ ಹಣದಿಂದಲೇ ನಾಡದೇವಿಗೆ ಬೆಳ್ಳಿ ಕಿರೀಟ ಮಾಡಿಸಿದ್ದಾರೆ

ಕಳೆದ ಒಂದೂವರೆ ವರ್ಷದಿಂದ ಬಂದ ಭಾಗ್ಯಲಕ್ಷ್ಕೀ ಯೋಜನೆ ಹಣ ಕೂಡಿಟ್ಟಿದ್ದ ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಹೂವಿನಹಳ್ಳಿಯ ಮಹಿಳೆ ಭಾಗಮ್ಮ, ದೇವಿಗೆ 250 ಗ್ರಾಂ ತೂಕದ ಬೆಳ್ಳಿ ಕಿರೀಟ ನೀಡಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಬಂದ ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟ 250 ಗ್ರಾಮ ತೂಕದ ಬೆಳ್ಳಿ ಕಿರೀಟ ಮಾಡಿಸಿದ್ದ ಭಾಗಮ್ಮ ಬಿರಾದಾರ, ಇಂದು(ಅಕ್ಟೋಬರ್ 11) ದಸರಾ ಆಯುಧ ಪೂಜೆ ದಿನದಂದು ನಾಡದೇವಿಗೆ ಬೆಳ್ಳಿ ಕಿರೀಟ ಅರ್ಪಣೆ ಮಾಡಿದರು

ದೇವಿಗೆ ಬೆಳ್ಳಿ ಕಿರೀಟ ಅರ್ಪಣೆ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭಾಗಮ್ಮ, ಸಿಎಂ ಸಿದ್ದರಾಮಯ್ಯ ನೇತೃತ್ಬದ ಕಾಂಗ್ರೆಸ್ ಸರ್ಕಾರದಿಂದ ಸಾಕಷ್ಟು ಅನುಕೂಲವಾಗಿದೆ ಎಂದಿದ್ದಾರೆ.

250 ಗ್ರಾಮ ತೂಕದ ಬೆಳ್ಳಿ ಕಿರೀಟ ಮಾಡಿಸಿದ್ದ ಭಾಗಮ್ಮ ಬಿರಾದಾರ, ಇಂದು(ಅಕ್ಟೋಬರ್ 11) ದಸರಾ ಆಯುಧ ಪೂಜೆ ದಿನದಂದು ನಾಡದೇವಿಗೆ ಬೆಳ್ಳಿ ಕಿರೀಟ ಅರ್ಪಣೆ ಮಾಡಿ ಆಶೀರ್ವಾದ ಪಡೆದರು.

ಇನ್ನು ಭಾಗಮ್ಮ ಬಿರಾದಾರ ಅವರು ಈ ಕಾರ್ಯಕ್ಕೆ ಸ್ಥಳೀಯ ಮುಖಂಡರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ಅಲ್ಲದೇ ಸಿಂದಗಿ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ಭಾಗಮ್ಮ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.

ಗೃಹ ಲಕ್ಷ್ಮೀ ಯೊಜನೆಯ ಹಣದಿಂದ ಅದೆಷ್ಟೋ ಕುಟುಂಬ ನಿರ್ವಹಣೆಗೆ ಸಹಾಯಕವಾಗಿದೆ. ಸಿಎಂ ಸಿದ್ದರಾಮಯ್ಯನವರಿಗೆ ನಾಡದೇವಿ ಆಶಿರ್ವಾದ ಇರಲಿ. ಸಿದ್ದರಾಮಯ್ಯ ಸರ್ಕಾರದ ಸೇವೆ ಹಿಗೇ ಮುಂದುವರೆಯಲಿ ಎಂದು ಅಭಿಲಾಷೆ ವ್ಯಕ್ತಪಡಿಸಿದರು.



















