ಶಿರೂರಿನಲ್ಲಿ ಗ್ರಾಮೀಣ ಕ್ರೀಡೆ ಮೋಡಿ, ಶಕ್ತಿಪ್ರದರ್ಶನ ತೋರಿಸಿದ ಹಳ್ಳಿಹೈದರು

|

Updated on: Dec 17, 2019 | 7:39 PM

ಬಾಗಲಕೋಟೆ: ತೋಳಲ್ಲಿ ತಾಕತ್ತು, ರಗಡ್ ಮೈಕಟ್ಟು. ಅದೆಂಥದ್ದೇ ಸ್ಪರ್ಧೆ ಆದ್ರೂ ಗೆದ್ದು ಬೀಗ್ತೀನಿ ಅನ್ನೋ ಹುಮ್ಮಸ್ಸು. ಅಖಾಡಕ್ಕಿಳಿದ್ರೆ ಎದುರಾಳಿ ಅದುರ್ಬೇಕು. ತೊಡೆ ತಟ್ಟಿ ನಿಂತ್ರೆ ಗೆಲುವು ಒಲಿದು ಬರ್ಬೇಕು. ಅದೇ ಖದರ್​ನಲ್ಲಿರೋ ಈ ರಣಕಲಿಗಳೆಲ್ಲಾ ಹೇಗೆ ಸಾಹಸ ಮೆರೀತಿದ್ದಾರೆ ನೋಡಿ. ಅತ್ತ ಜಬರ್ದಸ್ತ್ ಕಾಂಪಿಟೇಷನ್ ನಡೀತಿದ್ರೆ, ಇತ್ತ ಫನ್ನಿ ಗೇಮ್ಸ್ ನೋಡುಗರ ಹೊಟ್ಟೆ ಹುಣ್ಣಾಗಿಸುವಂತಿತ್ತು. ಕಾಲಿಗೆ ಚೀಲ ಏರುಸ್ಕೊಂಡು ಓಡೋರ ಸರ್ಕಸ್ ನೋಡೋದೇ ಸಿಕ್ಕಾಪಟ್ಟೆ ಮಜಾ ಕೊಟ್ಟಿತ್ತು. ಗೆಲುವಿನ ಗುರಿ ಮುಟ್ಟೋ ಸಾಹಸದಲ್ಲಿ ಕೆಲವ್ರು ದಬ್ಬಾಕ್ಕೊಂಡಿದ್ರು. ಸಾಹಸ […]

ಶಿರೂರಿನಲ್ಲಿ ಗ್ರಾಮೀಣ ಕ್ರೀಡೆ ಮೋಡಿ, ಶಕ್ತಿಪ್ರದರ್ಶನ ತೋರಿಸಿದ ಹಳ್ಳಿಹೈದರು
Follow us on

ಬಾಗಲಕೋಟೆ: ತೋಳಲ್ಲಿ ತಾಕತ್ತು, ರಗಡ್ ಮೈಕಟ್ಟು. ಅದೆಂಥದ್ದೇ ಸ್ಪರ್ಧೆ ಆದ್ರೂ ಗೆದ್ದು ಬೀಗ್ತೀನಿ ಅನ್ನೋ ಹುಮ್ಮಸ್ಸು. ಅಖಾಡಕ್ಕಿಳಿದ್ರೆ ಎದುರಾಳಿ ಅದುರ್ಬೇಕು. ತೊಡೆ ತಟ್ಟಿ ನಿಂತ್ರೆ ಗೆಲುವು ಒಲಿದು ಬರ್ಬೇಕು. ಅದೇ ಖದರ್​ನಲ್ಲಿರೋ ಈ ರಣಕಲಿಗಳೆಲ್ಲಾ ಹೇಗೆ ಸಾಹಸ ಮೆರೀತಿದ್ದಾರೆ ನೋಡಿ.

ಅತ್ತ ಜಬರ್ದಸ್ತ್ ಕಾಂಪಿಟೇಷನ್ ನಡೀತಿದ್ರೆ, ಇತ್ತ ಫನ್ನಿ ಗೇಮ್ಸ್ ನೋಡುಗರ ಹೊಟ್ಟೆ ಹುಣ್ಣಾಗಿಸುವಂತಿತ್ತು. ಕಾಲಿಗೆ ಚೀಲ ಏರುಸ್ಕೊಂಡು ಓಡೋರ ಸರ್ಕಸ್ ನೋಡೋದೇ ಸಿಕ್ಕಾಪಟ್ಟೆ ಮಜಾ ಕೊಟ್ಟಿತ್ತು. ಗೆಲುವಿನ ಗುರಿ ಮುಟ್ಟೋ ಸಾಹಸದಲ್ಲಿ ಕೆಲವ್ರು ದಬ್ಬಾಕ್ಕೊಂಡಿದ್ರು.

ಸಾಹಸ ಮೆರೆದ ಹಳ್ಳಿಹೈದರು:
ಶಿರೂರು ಗ್ರಾಮದ ಸಿದ್ದೇಶ್ವರ ಜಾತ್ರೆ ಪ್ರಯುಕ್ತ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಮೊದಲು ನಡೆದ ಗೋಣಿಚೀಲದ ಕಾಂಗರೂ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಂದಿ ಭಾಗಿಯಾಗಿ ಖದರ್ ತೋರಿಸಿದ್ರು. ಕೆಲವರು ವೇಗವಾಗಿ ಓಡಿ ಗುರಿ ಮುಟ್ಟಿದ್ರೆ ಇನ್ನೂ ಕೆಲವ್ರು ಮುಗ್ಗರಿಸಿ ಬಿದ್ದಿದ್ರು. ಇದಾದ ಬಳಿಕ ನಡೆದಿದ್ದೇ ನೋಡಿ ಶಕ್ತಿಪ್ರದರ್ಶನ. ಮೂರು ಕ್ವಿಂಟಲ್ ಜೋಳದ ಚೀಲ ತುಂಬಿದ್ದ ಚಕ್ಕಡಿಯನ್ನು ಎದೆಯಿಂದ ಹಿಂಬದಿ ತಳ್ಳುವ ಸ್ಪರ್ಧೆಯಲ್ಲಿ ಹಳ್ಳಿಹೈದರು ಸಾಹಸ ಮೆರೆದ್ರು. ಅವ್ರ ಶಕ್ತಿನೋಡಿ ಹಳ್ಳಿಗರು ಹುಬ್ಬೇರಿಸಿದ್ರು.

ಗ್ರಾಮೀಣ ಕ್ರೀಡೆಯಲ್ಲಿ ಗೆದ್ದವರಿಗೆ ಬಹುಮಾನ: 
ಇನ್ನು ಪ್ರತೀವರ್ಷ ಜಾತ್ರೆ ವೇಳೆ ಇಂತಹ ಗ್ರಾಮೀಣ ಕ್ರೀಡೆಗಳನ್ನ ನಡೆಸಿಕೊಂಡು ಬರಲಾಗ್ತಿದ್ದು, ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ ಸಾಹಸಿಗಳು ಭಾಗಿಯಾಗಿದ್ರು. ಅತಿ ಕಡಿಮೆ ಸಮಯದಲ್ಲಿ ಚಕ್ಕಡಿ ತಳ್ಳುವ ಸ್ಪರ್ಧೆಯಲ್ಲಿ ಯಾರು ಗುರಿ ತಲುಪುತ್ತಾರೋ ಅವರಿಗೆ ಮೊದಲ ಬಹುಮಾನವಾಗಿ 5 ಸಾವಿರ ನೀಡಿದ್ರು. ಹಾಗೇ ಗೋಣಿಚೀಲದ ಓಟದಲ್ಲೂ ಫಸ್ಟ್ ಬಂದೋರಿಗೆ ಒಂದೂವರೆ ಸಾವಿರ ಬಹುಮಾನ ನೀಡಲಾಯ್ತು. ಹಳ್ಳಿ ಲೈಫೇ ಒಂಥರಾ ಖುಷಿ. ಅದ್ರಲ್ಲೂ ವರ್ಷಕ್ಕೊಮ್ಮೆ ಬರೋ ಜಾತ್ರೆಗಳು ಮತ್ತಷ್ಟು ರಂಗು ನೀಡುತ್ವೆ. ಜತೆಗೆ ಇಂಥಾ ಕಾಂಪಿಟೇಷನ್​ಗಳು ತಮ್ಮ ತಾಕತ್ತು ಪ್ರದರ್ಶನದ ಜೊತೆ ನೋಡುಗರಿಗೆ ಸಖತ್ ಕಿಕ್ ಕೊಡ್ತವೆ.

Published On - 7:38 pm, Tue, 17 December 19