ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದಲ್ಲಿ ಅರ್ಧ ಮೊಟ್ಟೆ ನೀಡಿದ್ದಕ್ಕೆ ಗ್ರಾಮಸ್ಥರು ಆಕ್ರೋಶ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

| Updated By: ಆಯೇಷಾ ಬಾನು

Updated on: Jun 23, 2022 | 3:57 PM

ಮಕ್ಕಳಿಗೆ ವಿತರಿಸಬೇಕಾದ ಮೊಟ್ಟೆಯನ್ನು ಮುಖ್ಯ ಶಿಕ್ಷಕ ಖಾಸಗಿ ಅಂಗಡಿಗಳಿಗೆ ಮಾರಾಟ ಮಾಡ್ತಿದ್ದಾನೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಸರ್ಕಾರ ಕೊಟ್ಟರು ಶಾಲೆ ಶಿಕ್ಷಕ ಮಕ್ಕಳಿಗೆ ಸಂಪೂರ್ಣ ಮೊಟ್ಟೆ ಕೊಡ್ತಿಲ್ಲ ಎಂದು ಮೊಟ್ಟೆ ವಿತರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದಲ್ಲಿ ಅರ್ಧ ಮೊಟ್ಟೆ ನೀಡಿದ್ದಕ್ಕೆ ಗ್ರಾಮಸ್ಥರು ಆಕ್ರೋಶ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಮೊಟ್ಟೆ
Follow us on

ಯಾದಗಿರಿ: ಬಿಸಿಯೂಟದಲ್ಲಿ(Midday Meal Scheme) ಅರ್ಧ ಮೊಟ್ಟೆ(Egg) ನೀಡಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೀರಗಾರದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ(Government School) ನಡೆದಿದೆ. ಮಧ್ಯಾಹ್ನದ ವೇಳೆ ಶಾಲೆಯಲ್ಲಿ ಬಿಸಿ ಊಟದ ಜೊತೆ ಅರ್ಧ ಮೊಟ್ಟೆ ವಿತರಣೆ ಮಾಡಲಾಗಿತ್ತು. ಶಾಲೆಯಲ್ಲಿ ಒಟ್ಟು 80 ವಿದ್ಯಾರ್ಥಿಗಳ ಪೈಕಿ, 40 ಮೊಟ್ಟೆಯಲ್ಲಿ ಅರ್ಧಭಾಗ ಮಾಡಿ ವಿತರಣೆ ಮಾಡಲಾಗಿದೆ ಎಂದು ಮುಖ್ಯ ಶಿಕ್ಷಕರಿಗೆ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ. ಆಗ ಸರ್ಕಾರದಿಂದ ಮೊಟ್ಟೆ ಸರಬರಾಜು ಅರ್ಧದಷ್ಟು ಮಾತ್ರ ಆಗ್ತಿದೆ ಎಂದು ಮುಖ್ಯ ಶಿಕ್ಷಕ ಉಡಾಫೆಯಾಗಿ ಮಾತನಾಡಿದ್ದಾರೆ.

ಮಕ್ಕಳಿಗೆ ವಿತರಿಸಬೇಕಾದ ಮೊಟ್ಟೆಯನ್ನು ಮುಖ್ಯ ಶಿಕ್ಷಕ ಖಾಸಗಿ ಅಂಗಡಿಗಳಿಗೆ ಮಾರಾಟ ಮಾಡ್ತಿದ್ದಾನೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಸರ್ಕಾರ ಕೊಟ್ಟರು ಶಾಲೆ ಶಿಕ್ಷಕ ಮಕ್ಕಳಿಗೆ ಸಂಪೂರ್ಣ ಮೊಟ್ಟೆ ಕೊಡ್ತಿಲ್ಲ ಎಂದು ಮೊಟ್ಟೆ ವಿತರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.

ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದರಾ ಗ್ರಾಮ ಪಂಚಾಯತಿ ಅಧ್ಯಕ್ಷೆ?
ರಾಯಚೂರು: ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ತೋರಣದಿನ್ನಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದಮ್ಮ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿ ದರ್ಪ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಕೋಲಾರ ಜಿಲ್ಲಾಧಿಕಾರಿ ಸಹಿಯನ್ನೇ ನಕಲು ಮಾಡಿ ಭೂ ಮಂಜೂರಿಗೆ ದಾಖಲೆ ಸೃಷ್ಟಿ! ಕುಣಿಗಲ್ ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿಯೇ ಕಳ್ಳತನ!

ಅಧ್ಯಕ್ಷೆ ಆಗಿ ಮೂರೇ ದಿನಕ್ಕೆ ಆಟಾಟೋಪ. ಪಂಚಾಯತಿ ಕಸ ವಿಲೇವಾರಿ ವಾಹನ ಚಾಲಕರ ನೇಮಕ ಕುರಿತು ಗಲಾಟೆ ಮಾಡಿದ್ದಾರೆ. ಕಸ ವಿಲೇವಾರಿ ವಾಹನದ ಕೀ ತೆಗೆದುಕೊಂಡಿದ್ದ ಅಧ್ಯಕ್ಷೆ ಚಂದಮ್ಮ, ತನ್ನ ಅಳಿಯನನ್ನೇ ಕಸ ವಿಲೇವಾರಿ ವಾಹನದ ಚಾಲಕನನ್ನಾಗಿ ನೇಮಕ ಮಾಡಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದ್ದ ಸ್ಥಳೀಯರು ಹಾಗೂ ಗ್ರಾ.ಪಂ.ಸದಸ್ಯರನ್ನು ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿ, ದರ್ಪ ತೋರಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷೆಯ ದರ್ಪ, ದೌರ್ಜನ್ಯದ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸಕ್ಕಾಗಿ ಕಾರ್ಮಿಕರ ಪರದಾಟ
ಗದಗ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡದಿದ್ದಕ್ಕೆ ಆಕ್ರೋಶಗೊಂಡು ರೋಣ ತಾಲೂಕಿನ ಸೂಡಿ ಗ್ರಾಮ ಪಂಚಾಯತಿ ಕಚೇರಿಗೆ ರೈತರು ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಕೆಲಸಕ್ಕೆ ಕರೆದು ಕೆಲಸ ನೀಡದೇ ವಾಪಸ್ ಕಳಿಸಿದ್ದಾರೆ ಎಂದು ಕಾರ್ಮಿಕರು ಆಕ್ರೋಶ ಹೊರ ಹಾಕಿದ್ದಾರೆ. ಸಲಕೆ, ಗುದ್ಲಿ ಹಾಗೂ ಪುಟ್ಟಿಗಳ ಸಮೇತ ಗ್ರಾಮ‌ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

ಪಿಡಿಓ ಕೆಲಸ ಇಲ್ಲಾ ಅಂದ್ರೆ, ಸದಸ್ಯರು ನಮ್ಮ ವಾರ್ಡ್ ಗಳಲ್ಲಿ ಕೆಲಸ ಇದೆ ಅಂತಿದ್ದಾರೆ. ಹೀಗಾಗಿ ಸದಸ್ಯರ ಪಿಡಿಓ ಗುದ್ದಾಟದ ನಡುವೆ ಕಾರ್ಮಿಕರ ಹೊಟ್ಟೆ ಮೇಲೆ‌ ಹೊಡೆಯುತ್ತಿದ್ದಾರೆ ಅಂತ ಗ್ರಾಮಸ್ಥರು ಕಿಡಿಕಾರಿದ್ದಾರೆ. ಹೀಗಾಗಿ ಜಿಲ್ಲಾ ಪಂಚಾಯತಿ ಸಿಇಓ ಮೇಡಂ ಗಮನಹರಿಸಬೇಕು ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪಾಲಿಕೆಯ ಆಯುಕ್ತರ ವಿರುದ್ಧ ಮೇಯರ್ ಹಾಗೂ ಸದಸ್ಯರ ಪ್ರತಿಭಟನೆ
ಬಳ್ಳಾರಿ: ಜಿಲ್ಲೆಯ ಪಾಲಿಕೆಯ ಕಚೇರಿಯಲ್ಲೇ ಮಹಾನಗರ ಪಾಲಿಕೆಯ ಆಯುಕ್ತರ ವಿರುದ್ಧ ಮೇಯರ್ ಹಾಗೂ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಮಿಷನರ್ ಮತ್ತು ಸದಸ್ಯರ ಮಧ್ಯೆ ವಾಗ್ವಾದ ಕೂಡ ನಡೆದಿದೆ. ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತಂತೆ ಸಭೆ ಆಯೋಜನೆ ಮಾಡಲಾಗಿತ್ತು. ಸಭೆಗೆ ಮೇಯರ್ ಬಂದೂ ಕಾಯ್ದರು ಸಭೆಗೆ ಆಯುಕ್ತರು ಗೈರಾಗಿದ್ದರು. ಹೀಗಾಗಿ ಬೇರೊಂದು ಕಾರ್ಯಕ್ರಮಕ್ಕೆ ಮೇಯರ್ ತೆರಳಿದ್ರು. ಆಗ ಮೇಯರ್ ಅನುಪಸ್ಥಿತಿಯಲ್ಲಿ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋತ್ ಸಭೆ ಆರಂಭಿಸಿದ್ದಾರೆ. ಇದನ್ನೂ ಓದಿ: Trending: ಅಪ್ಪ ಸಾರಿಗೆ ಬಸ್ ಚಾಲಕ, ಐಪಿಎಸ್ ಹುದ್ದೆಗೆ ಏರಲು ಸಜ್ಜಾಗುತ್ತಿರುವ ಮಗ!

ಮೇಯರ್ ರಾಜೇಶ್ವರಿ ವಾಪಸ್ ಬರೋದ್ರೊಳಗೆ ಸಭೆ ಶುರು ಮಾಡಿದ್ದಾರೆ. ಮೇಯರ್, ಉಪಮೇಯರ್ ಗೈರು ಹಾಜರಿಯಲ್ಲಿ ಸಭೆ ನಡೆಸಿದ್ದಕ್ಕೆ ಸದಸ್ಯರು ಆಕ್ರೋಶಗೊಂಡಿದ್ದಾರೆ. ಆಕ್ರೋಶಗೊಂಡ ಮೇಯರ್, ಉಪಮೇಯರ್ ಸೇರಿದಂತೆ ಪಾಲಿಕೆ ಸದಸ್ಯರಿಂದ ಪ್ರತಿಭಟನೆ ನಡೆದಿದೆ. ಸಾಕಷ್ಟು ಸಮಯ ದಿಕ್ಕಾರವೆಂದು ಕೂಗಿದ್ರೂ ಸಭೆ ಮುಗಿಯೋವರೆಗೂ ಕಮಿಷನರ್ ಹೊರಗೆ ಬಂದಿಲ್ಲ. ಕಮಿಷನರ್ ಪ್ರೀತಿ ಗೆಹ್ಲೋತ್ ವಿರುದ್ದ ಮೇಯರ್, ಉಪಮೇಯರ್ ಸದಸ್ಯರು ಗರಂ ಆಗಿದ್ದಾರೆ.

ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ಧರಣಿಗೆ ಮುಂದಾದ ರೋಗಿಗಳು
ಚಾಮರಾಜನಗರ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ಡಿಸಿ ಕಚೇರಿ ಬಳಿ 20 ರೋಗಿಗಳು ಜಮಾಯಿಸಿದ್ದಾರೆ. ನಿತ್ಯ ಡಯಾಲಿಸಿಸ್ ಮಾಡದಿದ್ರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಉಬ್ಬಿದ ಕಾಲು, ಕೈ ಸಮಸ್ಯೆಗಳಿಂದ ರೋಗಿಗಳು ಬಳಲುತ್ತಿದ್ದಾರೆ. ಆದರೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ಸೌಲಭ್ಯವಿಲ್ಲ ಎಂದು ಡಿಹೆಚ್​ಒ ಡಾ.ವಿಶ್ವೇಶ್ವರಯ್ಯ ಮುಂದೆ ರೋಗಿಗಳು ಕಣ್ಣೀರಿಟ್ಟಿದ್ದಾರೆ. ಆಸ್ಪತ್ರೆಯ ಡಯಾಲಿಸಿಸ್ ಸಿಬ್ಬಂದಿ ಬೆಂಗಳೂರಿಗೆ ಹೋಗಿದ್ದಾರೆ. ತಮ್ಮ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಬೆಂಗಳೂರಿಗೆ ತೆರಳಿದ್ದಾರೆ. ನಮಗೆ ಡಯಾಲಿಸಿಸ್ ಮಾಡದಿದ್ರೆ ಜೀವಕ್ಕೆ ಕುತ್ತಾಗುವ ಸಂಭವವಿದೆ. ಆಸ್ಪತ್ರೆ ಆಡಳಿತ ಮಂಡಳಿ ಬಡವರ ಪ್ರಾಣದೊಂದಿಗೆ ಚೆಲ್ಲಾಟ ಆಡ್ತಿದೆ ಎಂದು ಡಿಸಿ ಕಚೇರಿ ಬಳಿ ಜಿಲ್ಲಾಸ್ಪತ್ರೆ ವಿರುದ್ಧ ರೋಗಿಗಳು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಮನವಿ ಸ್ವೀಕರಿಸಿ ಡಯಾಲಿಸಿಸ್ ಮಾಡಿಸುವುದಾಗಿ ಡಿಹೆಚ್​ಒ ಭರವಸೆ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:16 pm, Thu, 23 June 22