ಪಿಎಂ ಬಂದರೆ ಅವರನ್ನು ಮೆಚ್ಚಿಸಲು ರಸ್ತೆ ಸರಿ ಮಾಡ್ತೀರಾ ಎಂದು ಉಲ್ಲೇಖಿಸಿ ಬಿಡಿಎಗೆ ಹೈಕೋರ್ಟ್ ತರಾಟೆ

ಪಿಎಂ ಬಂದರೆ ಅವರನ್ನು ಮೆಚ್ಚಿಸಲು ರಸ್ತೆ ಸರಿ ಮಾಡ್ತೀರಾ ಎಂದು ಉಲ್ಲೇಖಿಸಿ ಬಿಡಿಎಗೆ ಹೈಕೋರ್ಟ್ ತರಾಟೆ
ಕರ್ನಾಟಕ ಹೈಕೋರ್ಟ್

2 ವಾರದಲ್ಲಿ ಅರ್ಜಿದಾರರ ನಿವೇಶನಕ್ಕೆ ಸೌಕರ್ಯ ಒದಗಿಸಿ ಎಂದು ಬಿಡಿಎಗೆ ಕೋರ್ಟ್ ಸೂಚನೆ ನೀಡಿದೆ. ವಿಶ್ವೇಶ್ವರಯ್ಯ ಬಡಾವಣೆ ನಿವೇಶನಕ್ಕೆ ಸೌಕರ್ಯ ಕಲ್ಪಿಸದ ಹಿನ್ನೆಲೆ ಪಿ.ಶಾರದಮ್ಮ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿದ್ದರು.

TV9kannada Web Team

| Edited By: Ayesha Banu

Jun 23, 2022 | 3:15 PM

ಬೆಂಗಳೂರು: ಬೆಂಗಳೂರಿನ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸದ ಹಿನ್ನೆಲೆ ಕ್ರಮ ಕೈಗೊಳ್ಳದ ಬಿಡಿಎಗೆ(BDA) ಹೈಕೋರ್ಟ್(High Court) ತರಾಟೆಗೆ ತೆಗೆದುಕೊಂಡಿದೆ. ಕೋರ್ಟ್ ಆದೇಶಕ್ಕೆ ಬಿಡಿಎ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಆಗಾಗ ಪ್ರಧಾನಮಂತ್ರಿ(PM Narendra Modi) ಬಂದರೆ ರಸ್ತೆಗಳು ಸರಿಹೋಗಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ.

ಆಗಾಗ ಪಿಎಂ, ರಾಷ್ಟ್ರಪತಿ ಬಂದ್ರೆ ರಸ್ತೆ ಉತ್ತಮಗೊಳ್ಳಬಹುದು. ಮೊನ್ನೆ 23 ಕೋಟಿ ಖರ್ಚು ಮಾಡಿ ಗುಂಡಿ ಮುಚ್ಚಿದ್ದೀರಾ. ಪ್ರತಿಬಾರಿ ಬೇರೆ ಬೇರೆ ಮಾರ್ಗವಾಗಿ ಪಿಎಂ ಬಂದರೆ ಉತ್ತಮ. ಅವರನ್ನು ಮೆಚ್ಚಿಸಲಾದರೂ ರಸ್ತೆಗಳನ್ನು ಸರಿಪಡಿಸಬಹುದು ಎಂದು ನ್ಯಾ.ಬಿ.ವೀರಪ್ಪ, ನ್ಯಾ.K.S.ಹೇಮಲೇಖಾರ ಪೀಠ ಅಭಿಪ್ರಾಯ ಪಟ್ಟಿದೆ. ಹಾಗೂ 2 ವಾರದಲ್ಲಿ ಅರ್ಜಿದಾರರ ನಿವೇಶನಕ್ಕೆ ಸೌಕರ್ಯ ಒದಗಿಸಿ ಎಂದು ಬಿಡಿಎಗೆ ಕೋರ್ಟ್ ಸೂಚನೆ ನೀಡಿದೆ. ವಿಶ್ವೇಶ್ವರಯ್ಯ ಬಡಾವಣೆ ನಿವೇಶನಕ್ಕೆ ಸೌಕರ್ಯ ಕಲ್ಪಿಸದ ಹಿನ್ನೆಲೆ ಪಿ.ಶಾರದಮ್ಮ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿದ್ದರು. ಈ ವಿಚಾರವಾಗಿ ವಿಚಾರಣೆ ನಡೆಸಿದ ಹೈಕೋರ್ಟ್ ಕ್ರಮ ಕೈಗೊಳ್ಳದ ಬಿಡಿಎಗೆ ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಒಡಿಷಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ರನ್ನು ಭೇಟಿಯಾದರು!

ಬೆಂಗಳೂರಿನಲ್ಲಿ ಮೋದಿ ಸಂಚರಿಸುವ ರಸ್ತೆ ಕಾಮಗಾರಿಗೆ ಬಿಬಿಎಂಪಿ ಖರ್ಚು ಮಾಡಿದ್ದು ಎಷ್ಟು ಕೋಟಿ ರೂ. ಗೊತ್ತಾ? ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ದೇಶದ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದರು. ನಿನ್ನೆ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಬೆಂಗಳೂರಿಗೆ ಬಂದಿಳಿದಿದ್ದರು. ಬಳಿಕ ಕೆಲ ಯೋಜನೆಗಳಿಗೆ ಚಾಲನೆ ನೀಡಿ ಮೈಸೂರಿಗೆ ತೆರಳಿದ್ದರು. ಮೈಸೂರಿನಲ್ಲಿ ಇಂದು ಬೆಳಿಗ್ಗೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೆಹಲಿಗೆ ತೆರಳಿದ್ದಾರೆ. ಇನ್ನು ಮೋದಿ ರಾಜ್ಯಕ್ಕೆ ಆಗಮಿಸುತ್ತಾರೆಂದು ಬಿಬಿಎಂಪಿ ಬೆಂಗಳೂರಿನಲ್ಲಿ ಕೆಲ ರಸ್ತೆಗಳನ್ನ ಸರಿಪಡಿಸಿದೆ. ಮೋದಿ ಸಂಚರಿಸಿದ್ದ ರಸ್ತೆಮಾರ್ಗ ಅಭಿವೃದ್ಧಿಗೆಂದು ಬಿಬಿಎಂಪಿ ಒಟ್ಟು 23 ಕೋಟಿ ರೂ. ಖರ್ಚು ಮಾಡಿದೆ ಎಂದು ತಿಳಿದುಬಂದಿದೆ.

ಮೋದಿ ಸಂಚರಿಸಲು ನಗರದಲ್ಲಿ 14 ಕಿ.ಮೀ. ರಸ್ತೆ ಡಾಂಬರೀಕರಣ, ಫುಟ್ಪಾತ್ ಸ್ಲ್ಯಾಬ್, ಬೀದಿ ದೀಪ, ಮರಗಳ ರೆಂಬೆ ಕಟ್, ಚರಂಡಿ ಸ್ವಚ್ಛತೆಗೆ ಬಿಬಿಎಂಪಿ ಸುಮಾರು 23 ಕೋಟಿ ರೂ. ಖರ್ಚು ಮಾಡಿದೆ. ಮುಖ್ಯ ಆಯುಕ್ತರ ವಿವೇಚನಾ ಅನುದಾನದಡಿಯಲ್ಲಿ ಹಣ ಖರ್ಚಾಗಿದ್ದು, ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada