ವಿರಾಜಪೇಟೆ: ಗ್ರಾಮ‌ ಪಂಚಾಯಿತಿ ಸದಸ್ಯೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು, ನಾಲ್ಕು ದಿನಗಳ ಬಳಿಕ ಸಾವು

| Updated By: ಸಾಧು ಶ್ರೀನಾಥ್​

Updated on: Oct 18, 2021 | 9:17 AM

ರಮ್ಯ ಅರ್ವತೊಕ್ಲು ಗ್ರಾಮ ಪಂಚಾಯತಿ ಸದಸ್ಯೆಯಾಗಿದ್ದರು. ಆತ್ಮಹತ್ಯೆಗೆ ಸಾಂಸಾರಿಕ ಕಲಹ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿದ್ದ ರಮ್ಯಾ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲಾಗಿದ್ದರು. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿರಾಜಪೇಟೆ: ಗ್ರಾಮ‌ ಪಂಚಾಯಿತಿ ಸದಸ್ಯೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು, ನಾಲ್ಕು ದಿನಗಳ ಬಳಿಕ ಸಾವು
ವಿರಾಜಪೇಟೆ: ಗ್ರಾಮ‌ ಪಂಚಾಯಿತಿ ಸದಸ್ಯೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು
Follow us on

ಕೊಡಗು: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೈಕೇರಿಯಲ್ಲಿ ಘಟನೆ ಗ್ರಾಮ‌ ಪಂಚಾಯಿತಿ ಸದಸ್ಯೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಮ್ಯಾ ಹೆಚ್ ಎಸ್ (28) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು. ರಮ್ಯ ಅರ್ವತೊಕ್ಲು ಗ್ರಾಮ ಪಂಚಾಯತಿ ಸದಸ್ಯೆಯಾಗಿದ್ದರು. ಆತ್ಮಹತ್ಯೆಗೆ ಸಾಂಸಾರಿಕ ಕಲಹ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿದ್ದ ರಮ್ಯಾ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಗ್ರಾ. ಪಂ‌. ಸದಸ್ಯೆ ರಮ್ಯಾಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಉಲ್ಬಣಿಸಿ ಕೊನೆಯುಸಿರೆಳೆದಿದ್ದಾರೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಬ್ಬಕ್ಕೆ ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದ ಯುವಕ 3 ದಿನದ ನಂತರ ಶವವಾಗಿ ಪತ್ತೆ:

ದೊಡ್ಡಬಳ್ಳಾಪುರ: ಊರು ದಿನದ ಹಿಂದೆ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಹಬ್ಬದ ದಿನ ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದ ಯುವಕ ಮೂರು ದಿನದ ನಂತರ ಗ್ರಾಮದ ನೀರಿನ ಕಟ್ಟೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಸೂಲಕುಂಟೆ ಗ್ರಾಮದ ನಿವಾಸಿ ಆನಂದ್ (23) ಮೃತ ಯುವಕ.

ಆನಂದ್ ಬೆಂಗಳೂರಿಗೆ ಸ್ನೇಹಿತರ ಮನೆಗೆ ಹೋಗಿಬರುವುದಾಗಿ ಹೇಳಿ ಹೋಗಿದ್ದ. ನೀರಿನಲ್ಲಿ ತೇಲಿ ಬಂದ ಶವ ಕಂಡು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆನಂದ್ ಪ್ರೇಮ ವೈಫಲ್ಯದಿಂದ ಮನ ನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

(virajpet aruvathoklu gram panchayat woman member ramya commits suicide)

Published On - 9:07 am, Mon, 18 October 21