ಕಾರವಾರದಲ್ಲಿ ಆತಂಕ ಸೃಷ್ಠಿಸಿದ ಜಿಪಿಎಸ್ ಟ್ರಾನ್ಸ್​ಮಿಟರ್ ಟ್ಯಾಗ್ ಹೊಂದಿದ ರಣಹದ್ದು

| Updated By: ವಿವೇಕ ಬಿರಾದಾರ

Updated on: Nov 11, 2024 | 12:30 PM

ಕಾರವಾರದ ಬಳಿ ಜಿಪಿಎಸ್ ಟ್ರಾನ್ಸ್‌ಮೀಟರ್ ಹೊಂದಿದ ರಣಹದ್ದು ಕಂಡು ಜನರಲ್ಲಿ ಆತಂಕ ಮೂಡಿತ್ತು. ಆದರೆ, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸಂಶೋಧನಾ ಯೋಜನೆಯ ಭಾಗವಾಗಿ ಈ ರಣಹದ್ದನ್ನು ತಾಡೋಬಾ ಅರಣ್ಯದಿಂದ ಬಿಡಲಾಗಿತ್ತು ಎಂದು ತಿಳಿದುಬಂದಿದೆ. ಸದ್ಯ ವಿಷಯ ತಿಳಿದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕಾರವಾರದಲ್ಲಿ ಆತಂಕ ಸೃಷ್ಠಿಸಿದ ಜಿಪಿಎಸ್ ಟ್ರಾನ್ಸ್​ಮಿಟರ್ ಟ್ಯಾಗ್ ಹೊಂದಿದ ರಣಹದ್ದು
ಕಾರವಾರದಲ್ಲಿ ಆತಂಕ ಸೃಷ್ಠಿಸಿದ ಜಿಪಿಎಸ್ ಟ್ರಾನ್ಸ್‌ಮೀಟರ್ ಟ್ಯಾಗ್ ಹೊಂದಿದ ರಣಹದ್ದು
Follow us on

ಕಾರವಾರ, ನವೆಂಬರ್​ 10: ನಗರದಲ್ಲಿ ಅದೊಂದು ರಣಹದ್ದಿನಿಂದಾಗಿ (Vulture) ಜನರಲ್ಲಿ ಆತಂಕ ಮನೆ ಮಾಡಿದೆ. ಜಿಪಿಎಸ್ ಟ್ರಾನ್ಸ್​ಮಿಟರ್, ಟ್ಯಾಗ್ ಹೊಂದಿದ್ದ ರಣಹದ್ದು ಕಾರವಾರ ಬಳಿಯ ಕೋಡಿಭಾಗ್‌ನ ನದಿ ಸುತ್ತ ಕಳೆದ 5 ದಿನದಿಂದ ಹಾರಾಟ ನಡೆಸುತ್ತಿದೆ. ಕ್ಯಾಮರಾ ಮೂಲಕ ಜೂಮ್‌ ಮಾಡಿ ನೋಡಿದಾಗ ಜಿಪಿಎಸ್ ಟ್ರಾನ್ಸ್‌ಮೀಟರ್ ಹೊಂದಿರುವುದು ಬಹಿರಂಗವಾಗಿದೆ.

ಶತ್ರು ದೇಶ, ಉಗ್ರರು ಹಾರಿಸಿರಬಹುದೆಂದು ಜನರ ಶಂಕೆ

ರಣಹದ್ದಿನ ಕಾಲಿನಲ್ಲಿ ಟ್ಯಾಗ್‌, ಬೆನ್ನಿನ ಮೇಲೆ ಟ್ರಾನ್ಸ್​ಮಿಟರ್​ ನೋಡಿದ ಸ್ಥಳೀಯರು ಆತಂಕಗೊಂಡಿದ್ದು, ಶತ್ರು ದೇಶದವರು, ಉಗ್ರರು ಹಾರಿಸಿರಬಹುದೆಂದು ಶಂಕಿಸಿದ್ದಾರೆ. ಕಾರವಾರದಲ್ಲಿ ಅಣುಸ್ಥಾವರ, ನೌಕಾನೆಲೆ ಇರುವುದಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಉತ್ತರ ಕನ್ನಡ: ಟಿವಿ9 ವರದಿ ಫಲಶ್ರುತಿ, ಜೋಯಿಡಾದ ಆ ಗ್ರಾಮಗಳಿಗೆ ಕೊನೆಗೂ ಬಂತು ಬಸ್

ಇನ್ನು ಪೊಲೀಸರು, ಅರಣ್ಯ ಇಲಾಖೆ, ರಾಜ್ಯ, ಕೇಂದ್ರ ಐಬಿ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದ್ದು, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಂಶೋಧನೆ ಉದ್ದೇಶಕ್ಕಾಗಿ ತಾಡೋಬಾ-ಅಂಧೇರಿ ಹುಲಿ ಸಂರಕ್ಷಿತಾರಣ್ಯದಿಂದ ರಣಹದ್ದು ಹಾರಿಸಲಾಗಿತ್ತು ಎಂಬುವುದು ತಿಳಿದು ಬಂದಿದೆ.

ರಣಹದ್ದುಗಳ ಜೀವನದ ಬಗ್ಗೆ ಅಧ್ಯಯನ ನಡೆಸುವ ಉದ್ದೇಶದಿಂದ Mahaforest.gov.in ಎಂದು ಬರೆದಿರುವ ಟ್ರಾನ್ಸ್​ಮಿಟರ್​ ಅಳವಡಿಕೆ ಮಾಡಿ ಹಾರಿಬಿಡಲಾಗಿದೆ. ವಿಚಾರ ತಿಳಿದ ಬಳಿಕ ಸದ್ಯ ಅರಣ್ಯ ಇಲಾಖೆ ಸಿಬ್ಬಂದಿಗಳು ರಣಹದ್ದಿಗೆ ಆಹಾರ ನೀಡಲು ಮುಂದಾಗಿದ್ದಾರೆ. ಸ್ಥಳೀಯರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.

ಸುಂದರ ಪರಿಸರದಲ್ಲಿ ಗೀಜಗ ಹಕ್ಕಿಯ ಕಲರವ

ಬೀದರ್: ಬೀದರ್ ತಾಲೂಕಿನ ಕಾಶೆಂಪುರ ಗ್ರಾಮಕ್ಕೆ ಹೋಗು ರಸ್ತೆಯುದ್ದಕ್ಕೂ ನೂರಾರು ಗೀಜಗನ ಹಕ್ಕಿಗಳು ಗಿಡಗಳಿಗೆ ಗೂಡು ಕಟ್ಟುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿದೆ. ಚಿಲಿಪಿಲಿ ಗುಟ್ಟುತ್ತಾ ಅತ್ತಿಂದಿತ್ತ ಓಡುವ ಈ ಹಕ್ಕಿಯ ಗೆಳೆಯರ ಸೊಬಗು ಜನರ ಮನಸ್ಸಿಗೆ ಹಿತ ನೀಡುತ್ತದೆ.

ಇದನ್ನೂ ಓದಿ: ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಉತ್ತರ ಕನ್ನಡ ಜಿಲ್ಲೆ ಜನರ ಪರಿಸ್ಥಿತಿ: ಯಾಕೆ ಗೊತ್ತಾ? ಈ ಸ್ಟೋರಿ ಓದಿ

ರಸ್ತೆಯಲ್ಲಿ ಹೋಗುವ ಜನರು ವಾಹನ ಸವಾರರು ಒಂದಿಷ್ಟು ಸಮಯ ದಾರಿಯಲ್ಲಿ ನಿಂತುಕೊಂಡು ಈ ಹಕ್ಕಿಗಳ ಗೂಡು ಕಟ್ಟುವುದನ್ನ ಅವುಗಳು ಚಿಲಿಪಿಲಿ ಗುಟ್ಟುವ ಸೌಂಡ್ ನೋಡುತ್ತಾ ತಮ್ಮನೇ ತಾವು ಮರೆತು ಬಿಡುತ್ತಿದ್ದಾರೆ. ಇನ್ನೂ ಕೆಲವರು ಅವುಗಳ ಗೂಡುಕಟ್ಟುವುದನ್ನ ವಿಡಿಯೋ ಮಾಡಿ ಖಷಿ ಪಟ್ಟರೆ ಇನ್ನೂ ಕೆಲವರು ಅವುಗಳು ಕಟ್ಟಿದ ಗೂಡಿನ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:43 pm, Sun, 10 November 24