ನಳಿನ್​ ಕುಮಾರ್​ ಕಟೀಲ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕಿನಲ್ಲಿ ಇರುವ ಸೀಕ್ರೇಟ್ ಏನು? ಇಲ್ಲಿದೆ ಸಂಪೂರ್ಣ ವಿವರ

ಇಡೀ ಟೀಮನ್ನೇ ತೆಗೆದುಹಾಕಲಾಗುತ್ತದೆ, ಹೊಸ ಟೀಮ್ ಮಾಡ್ತಾರೆ. ಮೂರು ಹೆಸರು ಇದೆ, ಯಾರಾದಾರೂ ಆಗಲು ಚಾನ್ಸ್ ಇದೆ. ಇಲ್ಲಿಯವರನ್ನು ಯಾರನ್ನೂ ಮಾಡಲ್ಲ, ದೆಹಲಿಯಿಂದಲೇ ಎಲ್ಲವೂ ಆಗುತ್ತೆ ಎಂದು ಹೇಳಿರುವ ಮಾತುಗಳು ಬಿಜೆಪಿಯಲ್ಲಿ ಘಟಿಸಲಿರುವ ಮಹತ್ತರ ಬದಲಾವಣೆಗಳನ್ನು ಸೂಚಿಸುತ್ತಿದೆ.

ನಳಿನ್​ ಕುಮಾರ್​ ಕಟೀಲ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕಿನಲ್ಲಿ ಇರುವ ಸೀಕ್ರೇಟ್ ಏನು?  ಇಲ್ಲಿದೆ ಸಂಪೂರ್ಣ ವಿವರ
ನಳಿನ್​ ಕುಮಾರ್ ಕಟೀಲ್ (ಸಂಗ್ರಹ ಚಿತ್ರ)
TV9kannada Web Team

| Edited By: Skanda

Jul 19, 2021 | 11:30 AM

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel)​ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗಳು ಹುಟ್ಟಿಕೊಂಡಿವೆ. ತುಳು ಭಾಷೆಯಲ್ಲಿ ಮಾತನಾಡಿರುವ ಆಡಿಯೋ ರೆಕಾರ್ಡಿಂಗ್ ವೈರಲ್ (Audio Viral) ಆಗಿದ್ದು, ಅದರಲ್ಲಿ ಆಡಲಾದ ಮಾತುಗಳೇನು ಎಂದು ಅನೇಕರು ಕುತೂಹಲಗೊಂಡಿದ್ದಾರೆ. ಬಿಜೆಪಿಯ (BJP) ಆಂತರಿಕ ಬೆಳವಣಿಗೆಗಳಿಗೆ ಸಂಬಂಧಿಸಿದ ಆಡಿಯೋದಲ್ಲಿ ಇರುವ ಮಾತುಗಳು ಹೀಗಿವೆ.

‘ಯಾರಿಗೂ ಹೇಳೋಕೆ ಹೋಗ್ಬೇಡ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಆ ಟೀಮನ್ನೇ ತೆಗೆಯೋದು. ಎಲ್ಲಾ ಹೊಸ ಟೀಮ್ ಮಾಡ್ತಾ ಇದ್ದೇವೆ. ಯಾರಿಗೂ ಹೇಳ್ಬೇಡ. ಏನೂ ತೊಂದ್ರೆ ಇಲ್ಲ. ಹೆದರ್ಬೇಡ, ಇದ್ದೇವೆ. ಎಲ್ರೂ ನಮ್ಮ ಕೈಯಲ್ಲೇ ಇನ್ನು‌. ಮೂರು ಹೆಸರಿದೆ, ಯಾರೂ ಆಗುವ ಚಾನ್ಸ್ ಇದೆ.‌ ಇಲ್ಲಿನವ್ರನ್ನ ಯಾರನ್ನೂ ಮಾಡಲ್ಲ. ಡೆಲ್ಲಿಯಿಂದನೇ ಹಾಕ್ತಾರೆ’. ಇದು ವೈರಲ್​ ಆಗಿರುವ ಆಡಿಯೋದಲ್ಲಿ ಹೇಳಲಾದ ಮಾತುಗಳು.

ಇಡೀ ಟೀಮನ್ನೇ ತೆಗೆದುಹಾಕಲಾಗುತ್ತದೆ, ಹೊಸ ಟೀಮ್ ಮಾಡ್ತಾರೆ. ಮೂರು ಹೆಸರು ಇದೆ, ಯಾರಾದಾರೂ ಆಗಲು ಚಾನ್ಸ್ ಇದೆ. ಇಲ್ಲಿಯವರನ್ನು ಯಾರನ್ನೂ ಮಾಡಲ್ಲ, ದೆಹಲಿಯಿಂದಲೇ ಎಲ್ಲವೂ ಆಗುತ್ತೆ ಎಂದು ಹೇಳಿರುವ ಮಾತುಗಳು ಬಿಜೆಪಿಯಲ್ಲಿ ಘಟಿಸಲಿರುವ ಮಹತ್ತರ ಬದಲಾವಣೆಗಳನ್ನು ಸೂಚಿಸುತ್ತಿದ್ದು, ಹೊಸ ಮುಖಗಳಿಗೆ ಹೈಕಮಾಂಡ್ ಮಣೆ ಹಾಕಲಿದೆ ಎಂಬುದನ್ನು ತಿಳಿಸುವ ಕಾರಣದಿಂದಲೇ ಸಾಕಷ್ಟು ಅನುಮಾನ ಹಾಗೂ ಚರ್ಚೆಗಳಿಗೆ ಕಾರಣವಾಗಿದೆ.

ಆದರೆ, ನಳಿನ್ ಕುಮಾರ್ ಕಟೀಲ್ ಈ ಧ್ವನಿ ನನ್ನದಲ್ಲವೇ ಅಲ್ಲ ಎಂದು ಹೇಳಿದ್ದು, ಈ ಬಗ್ಗೆ ತನಿಖೆ ನಡೆಯಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಮನವಿ ಮಾಡುವುದಾಗಿಯೂ ಹೇಳಿದ್ದಾರೆ. ಇನ್ನೊಂದೆಡೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ, ಯಾರು ಆಡಿಯೋ ವೈರಲ್ ಮಾಡಿದ್ದಾರೆ ಎನ್ನುವ ಬಗ್ಗೆ ತನಿಖೆಯಾಗಲಿದೆ. ನಳಿನ್ ಕುಮಾರ್‌ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ಅವರನ್ನು ಬಲಿಪಶು ಮಾಡಲು ಹೊರಟಿದ್ದಾರೆ. ಯಾರೋ ಹುಚ್ಚರು ಆಡಿಯೋವನ್ನು ಸೃಷ್ಟಿ ಮಾಡಿದ್ದಾರೆ. ನಳಿನ್ ಕುಮಾರ್ ಕಟೀಲ್ ಆಡಿಯೋ ನನ್ನದಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ಅಗತ್ಯವಿಲ್ಲ. ಬದಲಾಗಿ ಆಡಿಯೋ ಯಾರು ವೈರಲ್ ಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್: ಅದು ನನ್ನ ದನಿಯಲ್ಲ ಎಂದ ಕಟೀಲ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada