ನಳಿನ್ ಕುಮಾರ್ ಕಟೀಲ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್: ಅದು ನನ್ನ ದನಿಯಲ್ಲ ಎಂದ ಕಟೀಲ್

ಆಡಿಯೊದಲ್ಲಿರುವ ದನಿ ನನ್ನದಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ನಾನೇ ಮುಖ್ಯಮಂತ್ರಿಗೆ ದೂರು ನೀಡುತ್ತೇನೆ ಎಂದು ನಳಿನ್ ಕುಮಾರ್ ಟಿವಿ9 ಪ್ರತಿನಿಧಿಗೆ ಸ್ಪಷ್ಟನೆ ನೀಡಿದ್ದಾರೆ.

  • Publish Date - 11:02 pm, Sun, 18 July 21 Edited By: Ghanashyam D M | ಡಿ.ಎಂ.ಘನಶ್ಯಾಮ
ನಳಿನ್ ಕುಮಾರ್ ಕಟೀಲ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್: ಅದು ನನ್ನ ದನಿಯಲ್ಲ ಎಂದ ಕಟೀಲ್
ನಳಿನ್ ಕುಮಾರ್‌ ಕಟೀಲ್

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ತುಣುಕು ಭಾನುವಾರ ವೈರಲ್ ಆಗಿದೆ. ಆದರೆ ಆಡಿಯೊದಲ್ಲಿರುವ ದನಿ ನನ್ನದಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ನಾನೇ ಮುಖ್ಯಮಂತ್ರಿಗೆ ದೂರು ನೀಡುತ್ತೇನೆ ಎಂದು ನಳಿನ್ ಕುಮಾರ್ ಟಿವಿ9 ಪ್ರತಿನಿಧಿಗೆ ಸ್ಪಷ್ಟನೆ ನೀಡಿದ್ದಾರೆ.

‘ಯಾರಿಗೂ ಹೇಳಬೇಡಿ ಈಶ್ವರಪ್ಪ, ಶೆಟ್ಟರ್ ಟೀಂ ತೆಗೆಯುತ್ತೇವೆ. ಪೂರ್ತಿ ಹೊಸ ಟೀಂ ಮಾಡ್ತಿದ್ದೇವೆ. ಈಗ ಸದ್ಯಕ್ಕೆ ಇನ್ನು ಯಾರಿಗೂ ಕೊಡಬೇಡಿ. ಏನೂ ತೊಂದರೆ ಇಲ್ಲ,‌ ಹೆದರಬೇಡಿ‌ ನಾವಿದ್ದೇವೆ. ಯಾರಾದ್ರೂ ಕೂಡ ನಮ್ಮ ಕೈಯಲ್ಲೇ ಇನ್ನೂ ಇರುತ್ತದೆ. ಮೂವರ ಹೆಸರಿದೆ, ಯಾವುದು ಬೇಕಾದ್ರೂ ಆಗಲು ಚಾನ್ಸ್​ ಇದೆ. ಇಲ್ಲಿನವರನ್ನು ಯಾರನ್ನೂ ಮಾಡಲ್ಲ,‌ ದೆಹಲಿಯಿಂದ್ಲೇ ಹಾಕ್ತಾರೆ’ ಎಂಬ ಮಾತುಗಳು ನಳಿನ್ ಕುಮಾರ್ ಅವರದ್ದು ಎನ್ನಲಾದ ಆಡಿಯೊ ಕ್ಲಿಪ್​ನಲ್ಲಿ ಇವೆ.

ಆಡಿಯೊ ಕ್ಲಿಪ್​ನಲ್ಲಿರುವ ಧ್ವನಿ ಮತ್ತು ಮಾಹಿತಿಯನ್ನು ನಳೀನ್ ಕುಮಾರ್ ಕಟೀಲ್ ನಿರಾಕರಿಸಿದ್ದಾರೆ. ಈ ಕುರಿತು ಟಿವಿ9ಗೆ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ನಾನು ಆ ರೀತಿ ಎಲ್ಲೂ ಮಾತನಾಡಿಲ್ಲ ಎಂದು ಹೇಳಿದ್ದಾರೆ.

ಯಾರೋ ಹುಚ್ಚರು ಈ ರೀತಿ ಮಾತನಾಡಿದ್ದಾರೆ. ಈ ಬಗ್ಗೆ ನಾನು ಮುಖ್ಯಮಂತ್ರಿಗೆ ದೂರು ನೀಡುತ್ತೇನೆ. ಈ ಆಡಿಯೋ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರುತ್ತೇನೆ ಎಂದು ಮಂಗಳೂರಿನಲ್ಲಿ ಮಂಗಳೂರಿನಲ್ಲಿ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

(Nalin Kumar Kateel Responds about alleged viral audio clip)

ಇದನ್ನೂ ಓದಿ: ಗದ್ದೆಗಿಳಿದು ಕೃಷಿಕರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಇದನ್ನೂ ಓದಿ: ದಾರಿಯಲ್ಲಿ ಮಾತನಾಡಿದರೆ ನಾಯಕತ್ವ ಬದಲಾವಣೆ ಆಗೋದಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್