ತಮ್ಮ ಮದುವೆಯಾಗಿ 17 ವರ್ಷ ಆಯಿತು ಅಂತ ಪ್ರೇಮ್ ಹೇಳಿದಾಗ ರಕ್ಷಿತಾ ಕೂಡಲೇ 17 ಅಲ್ಲ 18 ಅಂದರು!
ರಕ್ಷಿತಾ-ಪ್ರೇಮ್ ಮದುವೆಯಲ್ಲಿ ದಂಪತಿಗೆ ವಿಷ್ಣುವರ್ಧನ್, ಅಂಬರೀಶ್ ಮತ್ತು ರವಿಚಂದ್ರನ್ ದಾಂಪತ್ಯ ಬದುಕಿನ ಬಗ್ಗೆ ಹೇಳಿದ್ದರಂತೆ. ಅದನ್ನು ಪ್ರೇಮ್ ನೆನಪು ಮಾಡಿಕೊಳ್ಳುತ್ತಾರೆ. ಪ್ರೇಮ್ ಒಬ್ಬ ನಿರ್ದೇಶಕನಾಗಿರುವುದರಿಂದ ಮನೆಯಿಂದ ಹೊರಗೆ ಹೋಗುವಾಗ ಯಾವುದೇ ನಿರ್ಬಂಧ ಹೇರದೆ ಮನೆಗೆ ವಾಪಸ್ಸಾದ ನಂತರ ನಿನ್ನ ಮನಸ್ಸಿಗೆ ಸರಿಯೆನಿಸುವ ರೀತಿ ಆಟವಾಡಿಸು ಎಂದು ರಕ್ಷಿತಾಗೆ ಅಂಬರೀಶ್ ಹೇಳಿದ್ದರಂತೆ!
ಬೆಂಗಳೂರು: ಸ್ಯಾಂಡಲ್ವುಡ್ ಜನಪ್ರಿಯ ಗಂಡ-ಹೆಂಡತಿ ಜೋಡಿಗಳಲ್ಲಿ ಪ್ರೇಮ್-ರಕ್ಷಿತಾ ಜೋಡಿಯೂ ಒಂದು. ಇವತ್ತು ರಕ್ಷಿತಾ ಸಹೋದರ ಮತ್ತು ನಟ ರಾಣಾನ ಮದುವೆಯ ನಂತರ ವಧು-ವರರಿಗೆ ದಾಂಪತ್ಯ ಬದುಕಿನ ಬಗ್ಗೆ ಕಿವಿಮಾತು, ಸಲಹೆಗಳನ್ನು ನೀಡಲು ಕುಳಿತ ಪ್ರೇಮ್ ತಮ್ಮ ಮದುವೆ ದಿನಗಳನ್ನು ಮೆಲಕು ಹಾಕಿದರು. ಮಾತಿನ ಭರದಲ್ಲಿ ತಮ್ಮ ಮದುವೆಯಾಗಿ 17 ವರ್ಷಗಳಾದವು ಅಂದಾಗ ರಕ್ಷಿತಾ 17 ಅಲ್ಲ 18 ಅಂತ ತಿದ್ದುತ್ತಾರೆ. ಪ್ರೇಮ್ ನಗುತ್ತಾ ತಮ್ಮ ತಪ್ಪನ್ನು ಅಂಗೀಕರಿಸುತ್ತಾರೆ. ನಂತರ ತಮ್ಮ ಹೆಂಡತಿಯನ್ನು ಚಿನ್ನ ರನ್ನ ಅಂತ ಹೊಗಳಿ ಮೈಮೇಲೆ ಹಾಕ್ಕೊಂಡಿರೋ ಚಿನ್ನ ಅಲ್ಲ, ಆಕೆಯ ಹೃದಯ ಚಿನ್ನದಂಥದ್ದು ಎನ್ನುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ