ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್ ಹೇಳಿದ್ದಿಷ್ಟು
ಶಾಸಕ ಬಸನಗೌಡ ಯತ್ನಾಳ್ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರನ್ನು ಅಪ್ರಬುದ್ಧರೆಂದು ಕರೆದ ಯತ್ನಾಳ್, ಅವರ ವಿರುದ್ಧ ಹೋರಾಡಿದ್ದಕ್ಕೆ ವಿಜಯಪುರದ ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ನಾಯಕರು ತಮಗೆ ಬೆಂಬಲ ನೀಡಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.
ವಿಜಯಪುರ, ಫೆಬ್ರವರಿ 07: ನಮಗೆ ಏನೂ ಅಪಮಾನ ಆಗಿಲ್ಲ. ನಮಗೆ ಏನೂ ಆಗಿಲ್ಲ, ನಾವು ಇನ್ನೂ ಗಟ್ಟಿಯಾಗಿದ್ದೇವೆ ಎಂದು ಶಾಸಕ ಬಸನಗೌಡ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ. ದೆಹಲಿ ನಾಯಕರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ವಿಜಯದ ಸಂಕೇತ ಇಟ್ಟುಕೊಂಡು ಬಂದಿದ್ದೇವೆ. ವರಿಷ್ಠರು ನಮಗೆ ಏನು ಹೇಳಬೇಕೋ ಅದನ್ನ ಹೇಳಿದ್ದಾರೆ. ಕೇಂದ್ರದ ನಾಯಕರು ನಮಗೆ ಸ್ಪಂದಿಸಿದ್ದಾರೆ. ಯಾರ ಭೇಟಿ ಎಂಬುದು ಗುಪ್ತವಾಗಿಡುವಂತೆ ಹೇಳಿದ್ದಾರೆ. ವಿಜಯೇಂದ್ರ ವಿರೋಧಿ ಬಣ ದಿನದಿಂದ ದಿನ ಹೆಚ್ಚುತ್ತಿದೆ. ಎಲ್ಲರ ಮನಸ್ಸಿನಲ್ಲೂ ವಿಜಯೇಂದ್ರ ಬೇಡ ಅಂತ ಇದೆ. ವಿಜಯೇಂದ್ರ ಅಪ್ರಬುದ್ಧ. ಅವರ ಅಪ್ಪ ಸಿಎಂ ಆಗಿದ್ದ ವೇಳೆ ವಸೂಲಿ ಮಾಡಿದ್ದಾರೆ. ವಿಜಯೇಂದ್ರ ಸುಮ್ಮನಿರಲಿ ಎಂದು ವಾಗ್ದಾಳಿ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
