ಪರ ಸ್ತ್ರೀಯೊಂದಿಗೆ ಸಲುಗೆ: ಸುಪಾರಿ ನೀಡಿ ಪತಿಯ ಎರಡು ಕಾಲು ಮುರಿಸಿದ ಪತ್ನಿ!

ವ್ಯಕ್ತಿಯೋರ್ವ ಪರಸ್ತ್ರಿಯೊಂದಿಗೆ ಬಹಳ ಸಲುಗೆಯಿಂದ ಇರುವುದು ಹೆಂಡತಿ ಕೆಂಗಣ್ಣಿಗೆ ಗುರಿಯಾಗಿದೆ. ಈ ಸಂಬಂಧ ಪತ್ನಿ ಪ್ರಶ್ನಿಸಿದ್ದು, ಆಕೆಯೊಂದಿಗಿನ ಸ್ನೇಹ ಬಿಡಬೇಕೆಂದು ಆಗ್ರಹಿಸಿದ್ದಾಳೆ. ಆದರೂ ಹೆಂಡ್ತಿ ಮಾತು ಕೇಳದ ಪತಿ ಪರಸ್ತ್ರಿಯೊಂದಿಗಿನ ಸ್ನೇಹ ಮುಂದುವರಿಸಿದ್ದಾನೆ. ಇದರಿಂದ ಕೆರಳದ ಪತ್ನಿ ಮನೆಯಿಂದ ಆಚೆ ಹೋಗಲು ಆಗಬಾರದು ಎಂದು ಹೆಂಡ್ತಿ, ಸುಪಾರಿ ನೀಡಿ ಗಂಡನ ಕಾಲು ಮುರಿಸಿದ್ದಾಳೆ.

ಪರ ಸ್ತ್ರೀಯೊಂದಿಗೆ ಸಲುಗೆ: ಸುಪಾರಿ ನೀಡಿ ಪತಿಯ ಎರಡು ಕಾಲು ಮುರಿಸಿದ ಪತ್ನಿ!
Kalaburagi
Edited By:

Updated on: Feb 07, 2025 | 12:07 PM

ಕಲಬುರಗಿ, (ಫೆಬ್ರವರಿ 07): ಪರ ಸ್ತ್ರೀ ಜೊತೆ ಸಲುಗೆಯಿಂದ ಇದ್ದ ಪತಿಯ ಎರಡು ಕಾಲು ಮುರಿಯಲು ಆತನ ಪತ್ನಿಯೇ ಸುಪಾರಿ ನೀಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ವೆಂಕಟೇಶ್ ಎಂಬಾತ ಎರಡು ಕಾಲು ಮುರಿತಕ್ಕೆ ಒಳಗಾದ ಪತಿ. ಇನ್ನು ಈ ಸಂಬಂಧ ಸುಪಾರಿ ನೀಡಿದ ಪತ್ನಿ ಉಮಾದೇವಿ ಹಾಗೂ ಸುಪಾರಿ ತೆಗೆದುಕೊಂಡು ವೆಂಕಟೇಶನ ಕಾಲು ಮುರಿದ ಆರೀಫ್, ಮನಹೋರ, ಸುನೀಲ್ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್ ಕೆಲ ತಿಂಗಳಿನಿಂದ ಓರ್ವ ಮಹಿಳೆಯ ಜೊತೆಗೆ ಸಲುಗೆಯಿಂದ ವರ್ತಿಸುತ್ತಿದ್ದ, ಈ ಸಂಬಂಧ ಕೋಪಗೊಂಡಿದ್ದ ಪತ್ನಿ ಉಮಾದೇವಿ, ಮಹಿಳೆ ಜೊತೆಗಿನ ಸ್ನೇಹ ಬಿಡುವಂತೆ ಒತ್ತಾಯಿಸಿದ್ದಾಳೆ. ಆದರೂ ವೆಂಕಟೇಶ್ ತನ್ನ ಸಲುಗೆ ಮುಂದುವರಿಸಿದ್ದಾನೆ. ಇದರಿಂದ ಕೆರಳಿ ಪತ್ನಿ ಉಮಾದೇವಿ ಸುಪಾರಿ ನೀಡಿ ವೆಂಕಟೇಶನ ಎರಡು ಕಾಲುಗಳನ್ನ ಮುರಿಸಿದ್ದಾಳೆ.

ವೆಂಕಟೇಶ ಮಹಿಳೆಯೊಂದಿಗಿನ ಸಲುಗೆ ಬಗ್ಗೆ ಹೆಂಡ್ತಿ ಪ್ರಶ್ನಿಸಿದ್ದಳು. ಅವಳ ಸ್ನೇಹ ಬಿಡುವಂತೆ ಆಗ್ರಹಿಸಿದ್ದಳು. ಆದರೂ ಹೆಂಡ್ತಿ ಮಾತು ಕೇಳದ ವೆಂಕಟೇಶ ತನ್ನ ಸ್ನೇಹ ಮುಂದುವರಿಸಿದ್ದಾನೆ. ಇದರಿಂದ ವೆಂಕಟೇಶ್ ಹಾಗೂ ಉಮಾದೇವಿ ನಡುವೆ ನಡುವೆ ಹಲವು ಬಾರಿ ಜಗಳವಾಗಿತ್ತು. ಆದರೂ ಮಾತು ಕೇಳದ ವೆಂಕಟೇಶನ ಕಾಲು ಮುರಿಸಿದರೆ ಮನೆಯಲ್ಲೇ ಬಿದ್ದಿರುತ್ತಾನೆಂದು ಪ್ಲ್ಯಾನ್ ಮಾಡಿದ ಉಮಾದೇವಿ ಬೇರೆಯವರಿಗೆ 5 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಾಳೆ.

ಇದನ್ನೂ ಓದಿ: ಸ್ನೇಹಿತನೊಂದಿಗೆ ಸರಸ, ಸಂಸಾರದಲ್ಲಿ ವಿರಸ: ಪತ್ನಿಯನ್ನ ಏಳೆಂಟು ಬಾರಿ ಚುಚ್ಚಿ…ಚುಚ್ಚಿ ಕೊಂದ

ಉಮಾದೇವಿ ನೀಡಿದ ಸುಪಾರಿ ಮೇರೆಗೆ ಆರೀಫ್, ಮನಹೋರ, ಸುನೀಲ್ ಎನ್ನುವರು ವೆಂಕಟೇಶನ ಎರಡೂ ಕಾಲು ಮುರಿದಿದ್ದಾರೆ. ಬಳಿಕ ವೆಂಕಟೇಶ್‌ ಮಗ ಇದು ದರೋಡೆ ಪ್ರಕರಣದ ವೇಳೆ ಕಾಲು ಮುರಿತ ಎಂದು ದೂರು ನೀಡಿದ್ದ. ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾಗ ಉಮಾದೇವಿಯ ಅಸಲಿ ಬಣ್ಣ ಬಯಲಾಗಿದೆ. ಸದ್ಯ ಸುಪಾರಿ ನೀಡಿದ ಪತ್ನಿ ಸೇರಿದಂತೆ ಕಾಲು ಮುರಿದ ಆರೋಪಿಗಳನ್ನ ಸಹ ಬ್ರಹ್ಮಪೂರ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ