ಕನಕಪುರ ತಾಲೂಕಿನಲ್ಲಿ ಕಾಡಾನೆಗಳಿಂದ ದಾಳಿ: ಅಪಾರ ಬೆಳೆ ನಾಶ
ಕನಕಪುರ ತಾಲೂಕಿನ ಗ್ರಾಮಗಳಾದ ಹೊಸದೊಡ್ಡಿ, ಕೂನುರು ಬಳಿ ಕಾಡಾನೆ ಹಿಂಡು ದಾಳಿ ನಡೆಸಿದೆ. ಇದರ ಪರಿಣಾಮ ರೈತರು ಬೆಳೆದಿದ್ದ ರಾಗಿ, ಭತ್ತ, ಬಾಳೆ, ಮಾವು, ತೊಗರಿ ಬೆಳೆ ನಾಶವಾಗಿದೆ.
ರಾಮನಗರ: ಕನಕಪುರ ತಾಲೂಕಿನ ಗ್ರಾಮಗಳಾದ ಹೊಸದೊಡ್ಡಿ, ಕೂನೂರು ಬಳಿ ಕಾಡಾನೆ ಹಿಂಡು ದಾಳಿ ನಡೆಸಿದೆ. ಇದರ ಪರಿಣಾಮ ರೈತರು ಬೆಳೆದಿದ್ದ ರಾಗಿ, ಭತ್ತ, ಬಾಳೆ, ಮಾವು, ತೊಗರಿ ಬೆಳೆ ನಾಶವಾಗಿದೆ.
ರಾಮೇಗೌಡ, ನರಸೇಗೌಡ, ಬಸವೇಗೌಡರ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ನಾಶವಾಗಿವೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸಾತನೂರು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.