ಕಾಡು ಪ್ರಾಣಿಗಳ ವಸ್ತು ಇಟ್ಟುಕೊಳ್ಳುವ ಬಗ್ಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹೇಳುವುದೇನು, ನಿಯಮ ಪಾಲಿಸದಿದ್ದರೆ ಏನೆಲ್ಲಾ ಶಿಕ್ಷೆ?

ಸ್ಟಾರ್​ಗಳ ವಿರುದ್ಧ ಅರಣ್ಯ ಇಲಾಖೆ ವನ್ಯಜೀವ ಸಂರಕ್ಷಣಾ ಕಾಯ್ದೆ ನಿಯಮಗಳ ಅನುಸಾರ ಕ್ರಮಕ್ಕೆ ಮುಂದಾಗಿದೆ. ಕಾಡು ಪ್ರಾಣಿಗಳ ವಸ್ತುಗಳನ್ನು ಇಟ್ಟುಕೊಳ್ಳುವ ಬಗ್ಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಏನು ಹೇಳುತ್ತದೆ? ನಿಯಮ ಪಾಲಿಸದಿದ್ದರೆ ಏನೆಲ್ಲಾ ಶಿಕ್ಷೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಕಾಡು ಪ್ರಾಣಿಗಳ ವಸ್ತು ಇಟ್ಟುಕೊಳ್ಳುವ ಬಗ್ಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹೇಳುವುದೇನು, ನಿಯಮ ಪಾಲಿಸದಿದ್ದರೆ ಏನೆಲ್ಲಾ ಶಿಕ್ಷೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Oct 25, 2023 | 7:44 PM

ಬೆಂಗಳೂರು, ಅಕ್ಟೋಬರ್ 25: ಬಿಗ್​ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ಹುಲಿ ಉಗುರು (Tiger Nail) ಪೆಂಡೆಂಟ್​ ಧರಿಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್​, ದರ್ಶನ್​, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್, ನಿಖಿಲ್​ ಕುಮಾರಸ್ವಾಮಿ ಸೇರಿ ಹಲವು ಗಣ್ಯರು (Celebrities) ಹುಲಿ ಉಗುರಿನ ಪೆಂಡೆಂಟ್​ ಧರಿಸಿರೋ ಫೋಟೋ ಹಾಗೂ ವಿಡಿಯೋಗಳು ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟಿನ ಚರ್ಚೆ ಹುಟ್ಟು ಹಾಕಿದೆ. ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಧರಿಸಿರಬಹುದು ಅಂತ ಒಂದು ವರ್ಗ ಹೇಳ್ತಿದರೆ, ಮತ್ತೊಂದು ವರ್ಗ ಸ್ಟಾರ್​ ನಟರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದೆ ಈ ನಡುವೆ ಅರಣ್ಯ ಇಲಾಖೆ ವನ್ಯಜೀವ ಸಂರಕ್ಷಣಾ ಕಾಯ್ದೆ (Wildlife Protection Act) ನಿಯಮಗಳ ಅನುಸಾರ ಕ್ರಮಕ್ಕೆ ಮುಂದಾಗಿದೆ.

ಹಾಗಾದರೆ ಕಾಡು ಪ್ರಾಣಿಗಳ ವಸ್ತುಗಳನ್ನು ಇಟ್ಟುಕೊಳ್ಳುವ ಬಗ್ಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಏನು ಹೇಳುತ್ತದೆ? ನಿಯಮ ಪಾಲಿಸದಿದ್ದರೆ ಏನೆಲ್ಲಾ ಶಿಕ್ಷೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಸತ್ತ ಕಾಡು ಪ್ರಾಣಿಗಳ ವಸ್ತುಗಳನ್ನು ಇಟ್ಟುಕೊಳ್ಳಬೇಕು ಅಂದರೆ ವನ್ಯ ಸಂರಕ್ಷಣ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕಾಗುತ್ತೆ. ಒಂದುವೇಳೆ ಲೈಸೆನ್ಸ್​ ಇಲ್ಲದಿದ್ರೆ ಸೆಕ್ಷನ್​ 12ರ ಪ್ರಕಾರ ವನ್ಯಜೀವಿ ಅಧಿಕಾರಿಗಳ ಬಳಿ ವಿಶೇಷ ಅನುಮತಿಗೆ ಅವಕಾಶ ಇರುತ್ತದೆ. ವನ್ಯ ಜೀವಿಗೆ ಸಂಬಂಧಿಸಿದ ದೇಹದ ಅಂಗಾಂಗ ಸರ್ಕಾರಕ್ಕೆ ಸೇರುತ್ತದೆ. ಈ ಕಾರಣಕ್ಕಾಗಿ ವನ್ಯಜೀವಿಗಳ ದೇಹದ ವಸ್ತುಗಳನ್ನು ಬಳಸಬಾರದು. ಸತ್ತ ಆನೆಗಳ ಯಾವ ಅಂಗಾಂಗಳನ್ನು ಇಟ್ಟುಕೊಳ್ಳೋಕೆ ಅವಕಾಶವಿಲ್ಲ. ಒಂದ್ವೇಳೆ ಆನೆ ಸತ್ತರೆ ಉಗುರು, ಕೂದಲು, ದಂತಗಳನ್ನು ಬಳಸಬಾರದು. ನಿಯಮ ಮರೆತು ಬಳಕೆ ಮಾಡಿದ್ರೆ ವನ್ಯಜೀವ ಕಾಯ್ದೆ ಪ್ರಕಾರ ಶಿಕ್ಷೆ ಆಗಲಿದೆ. ಆನೆ ಸತ್ತರೆ ಅದನ್ನು ಹೂಳಬಾರದು, ಸತ್ತ ಆನೆಯ ಕಳೇಬರ ಸುಡಲೇಬೇಕು. ಆನೆ ದೇಹ ಸಂಪೂರ್ಣವಾಗಿ ಸುಟ್ಟು ಹೋಗೋವರೆಗೆ ನಿಗಾ ಇಡಬೇಕು. ಆನೆ ದೇಹ ಸುಟ್ಟ ನಂತರ ಅದರ ಮೂಳೆಗಳನ್ನ ನೀರಿನಲ್ಲಿ ಬಿಡಬೇಕು ಎಂದು ನಿಯಮ ಹೇಳುತ್ತದೆ.

ಸತ್ತ ಹುಲಿಯ ಅಂಗಾಂಗ ಇಟ್ಟುಕೊಳ್ಳಬಹುದೇ?

ವನ್ಯಜೀವಿ ಅಂಗಾಗಗಳನ್ನು ಹೊಂದುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಕಲಂ 9, 19, 40, 42, 44, 48 ಎ, 49ಎ, 49ಬಿ, 51:52 58 ರ ಪ್ರಕಾರ ಅಪರಾಧವಾಗಿದೆ. ಇದರಂತೆ, ಸತ್ತ ಹುಲಿಯ ಯಾವ ಭಾಗಗಳನ್ನೂ ಇಟ್ಟುಕೊಳ್ಳಲು ಕಾನೂನಿನಡಿ ಅವಕಾಶ ಇಲ್ಲ. ಮೃತ ಜಿಂಕೆಯ ಯಾವ ಭಾಗಗಳನ್ನೂ ಇಟ್ಟುಕೊಳ್ಳಲು ಅವಕಾಶ ಇಲ್ಲ. ಕೃಷ್ಣಮೃಗ, ಪಚ್ಚೆ ಜಿಂಕೆ ಇದರ ಅಂಗಗಳನ್ನೂ ಇಟ್ಟುಕೊಳ್ಳುವಂತಿಲ್ಲ. ಇತ್ತೀಚಿಗೆ ಜಿಂಕೆಗಳ ಕೊಂಬುಗಳನ್ನು ಗೋಡೆಯ ಮೇಲೆ ಹಾಕಿರುವುದನ್ನು ಕಾಣಬಹುದು. ಅದಕ್ಕೂ ವಲಯದ ಅರಣ್ಯ ಅಧಿಕಾರಿಗಳಿಂದ ಅನುಮತಿ ಕಡ್ಡಾಯ. ಅನುಮತಿ ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಎದುರಿಸಬೇಕಾಗುತ್ತದೆ. ನವಿಲು ಗರಿಯನ್ನು ಇಟ್ಟುಕೊಳ್ಳುವುದಕ್ಕೆ ಅವಕಾಶ ಇದೆ. ಆದರೆ ನವಿಲನ್ನು ಹತ್ಯೆ ಮಾಡಿ ಗರಿಗಳನ್ನು ಇಟ್ಕೊಳ್ಳುವಂತಿಲ್ಲ.

ಇದನ್ನೂ ಓದಿ: ಅರಣ್ಯಾಧಿಕಾರಿ ಖಡಕ್ ಮಾತು: ಹುಲಿ ಉಗುರು ಲಾಕೆಟ್​ ಧರಿಸಿದವರಿಗೆ ಶುರುವಾಯ್ತು ಸಂಕಷ್ಟ!

ಯಾವುದೇ ವನ್ಯ ಪ್ರಾಣಿಯನ್ನು ಹತ್ಯೆ ಮಾಡಿದರೂ ಶಿಕ್ಷೆಯಾಗಲಿದೆ. ವನ್ಯ ಪ್ರಾಣಿಗಳನ್ನು ಕೊಂದರೆ ಮೂರು ವರ್ಷ ಶಿಕ್ಷೆ ಅಂತ ಕಾಯ್ದೆಯಲ್ಲಿ ಉಲ್ಲೇಖವಾಗಿದೆ.

ಮೃತ ಹುಲಿಯ ಅಂಗಾಗಗಳಿಗಿದೆ ಭಾರೀ ಬೇಡಿಕೆ

ಮೃತ ಹುಲಿಯ ಅಂಗಾಂಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಹಾಗೆಂದು ಹುಲಿ ಚರ್ಮ, ಉಗುರು, ಕೂದಲುಗಳನ್ನು ಬಳಸಿದರೆ 3 ವರ್ಷ ಜೈಲು ಖಂಡಿತ. ಆನೆಗಳ ವಿಚಾರವಾಗಿ ವಿಶೇಷವಾದಂತಹ ಯಾವ ಕಾಯ್ದೆಯೂ ಇಲ್ಲ. ಹುಲಿಗೆ ಅನುಸರಿಸಲಾಗುವ ಕಾಯ್ದೆಯೇ ಆನೆಗಳಿಗೂ ಅನ್ವಯಿಸುತ್ತದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಏನು ಹೇಳುತ್ತೆ?

ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹಿಸುವುದು ತಪ್ಪಾಗುತ್ತದೆ. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:03 pm, Wed, 25 October 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್