ಸದಾನಂದ ಗೌಡ ರಾಜ್ಯ ರಾಜಕಾರಣಕ್ಕೆ ಬರುತ್ತಾರಾ? ಡಾ. ಅಶ್ವತ್ಥ್ ನಾರಾಯಣ ಏನಂತಾರೆ?
DV Sadananda gowda: ಡಿವಿ ಸದಾನಂದ ಗೌಡ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ವಿಚಾರವಾಗಿ ರಾಜಕೀಯದಲ್ಲಿ ಯಾವಾಗ ಏನು ಜವಾಬ್ದಾರಿ ಬರುತ್ತೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ಏನು ಅವಕಾಶ ಕೊಡುತ್ತಾರೋ ಗೊತ್ತಿಲ್ಲ ಎಂದು ರಾಮನಗರದಲ್ಲಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ರಾಮನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟದಿಂದ ಹೊರಗುಳಿದ ಡಿವಿ ಸದಾನಂದ ಗೌಡ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರಾ ಎಂಬುದು ಈಗ ಹೆಚ್ಚು ಚಾಲ್ತಿಗೆ ಬಂದಿರುವ ವಿಚಾರ. ಅತ್ತ ಇಂದು ಮಧ್ಯಾಹ್ನ ದಿಲ್ಲಿಯಲ್ಲಿ ಮೋದಿ ಕ್ಯಾಬಿನೆಟ್ಗೆ ರಾಜೀನಾಮೆ ನೀಡುತ್ತಿದ್ದಂತೆ ರಸಗೊಬ್ಬರ ಸಚಿವರಾಗಿದ್ದ ಡಿವಿ ಸದಾನಂದ ಗೌಡ ಅವರು ನೇರವಾಗಿ ಕರ್ನಾಟಕ ಪಾಲಿಟಿಟಕ್ಸ್ನಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸುತ್ತಾರಾ? ಎಂಬುದು ರಾಜ್ಯ ಬಿಜೆಪಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಮನಗರದಲ್ಲಿ ಈ ಬಗ್ಗೆ ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಅವರು ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದು, ರಾಜಕೀಯದಲ್ಲಿ ಯಾವುದೂ ಮೊದಲಿಲ್ಲ, ಕೊನೆಯೂ ಇಲ್ಲ ಎಂದಿದ್ದಾರೆ.
ಡಿವಿ ಸದಾನಂದ ಗೌಡ ಅವರು ರಾಜ್ಯದಲ್ಲಿ ಕೆಲಸ ಮಾಡಿದ್ದಾರೆ, ಸಾಧನೆ ಮಾಡಿದ್ದಾರೆ. ಮುಂದೆ ಎಲ್ಲಿ ಏನು ಬೇಕಾದರೂ ಆಗಬಹುದು ಎಂದು ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್ ಕ್ಲುಪ್ತವಾಗಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರದಲ್ಲಿ, ನಮ್ಮ ಪಕ್ಷದಲ್ಲಿ ಏನು ಅವಕಾಶ ಕೊಡುತ್ತಾರೋ ಗೊತ್ತಿಲ್ಲ. ಇದುವರೆಗೂ ಒಳ್ಳೇಯ ಕೆಲಸ ಮಾಡಿರುವುದನ್ನ ಗುರುತಿಸಬೇಕಾಗುತ್ತದೆ. ರಾಜಕೀಯದಲ್ಲಿ ಯಾವಾಗ ಏನು ಜವಾಬ್ದಾರಿ ಬರುತ್ತೆ ಗೊತ್ತಿಲ್ಲ ಎಂದು ರಾಮನಗರದಲ್ಲಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಅಸಮರ್ಥತೆ, ಅದಕ್ಷತೆ, ಅನಾರೋಗ್ಯ ಕಾರಣ ಮೋದಿ ಸಂಪುಟದಿಂದ ಅನೇಕರಿಗೆ ಗೇಟ್ ಪಾಸ್; ಸದಾನಂದ ಗೌಡ ಔಟ್ ಏಕೆ?
(will DV Sadananda gowda join karnataka bjp politics dcm Dr. C. N. Ashwathnarayan reaction)
Published On - 5:06 pm, Wed, 7 July 21