ಅ.28ರಂದು ಮುಡಾ ಕೇಸ್​​ಗೆ ಹೊಸ ರೂಪ: ಹೊಸ ಬಾಂಬ್ ಸಿಡಿಸಿದ ದೂರುದಾರ ಅಬ್ರಾಹಂ!

ಮುಡಾ ಹಗರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದಸರಾ ಉದ್ಘಾಟನೆ ವೇದಿಕೆಯಲ್ಲಿ ಮುಡಾ ರಾಜಕೀಯ ಮಾತನಾಡಿದ್ದನ್ನ ವಿಪಕ್ಷಗಳು ಖಂಡಿಸಿದ್ದು, ಸಿಎಂ ಪರ ಜಿಟಿ ದೇವೇಗೌಡ ಆಡಿದ ಮಾತನ್ನೂ ವಿರೋಧಿಸಿವೆ. ಈ ಮಧ್ಯೆ ದೂರುದಾರ ಸ್ನಹಮಯಿ ಕೃಷ್ಣ ಪ್ರತಿಕ್ರಿಯಿಸಿ, ಮುಡಾದಲ್ಲಿ ಜಿ.ಟಿ.ದೇವೇಗೌಡರದ್ದೂ ಅಕ್ರಮ ಇರಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದೆಲ್ಲರದ ಮಧ್ಯ ಇದೀಗ ಮತ್ತೋರ್ವ ದೂರುದಾರ ಟಿ.ಜೆ ಅಬ್ರಾಹಂ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಅ.28ರಂದು ಮುಡಾ ಕೇಸ್​​ಗೆ ಹೊಸ ರೂಪ: ಹೊಸ ಬಾಂಬ್ ಸಿಡಿಸಿದ ದೂರುದಾರ ಅಬ್ರಾಹಂ!
ಸಿದ್ದರಾಮಯ್ಯ-ಟಿಜೆ ಅಬ್ರಾಹಂ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Oct 04, 2024 | 6:57 PM

ಬೆಂಗಳೂರು, (ಅಕ್ಟೋಬರ್ 04): ಮುಡಾ ಹಗರಣದ ಕೇಂದ್ರ ಬಿಂದವೇ ಮೈಸೂರಿನ ವಿಜಯನಗರದಲ್ಲಿರೋ ಈ 14 ಸೈಟ್‌ಗಳು. ಇದೀಗ ಸಿಎಂ ಪತ್ನಿ ಪಾರ್ವತಿ ಹೆಸರಿನಲ್ಲಿ ಇದ್ದ ಇದೇ ನಿವೇಶನಗಳ ಮರಳಿ ಮುಡಾ ಪಾಲಾಗಿವೆ. ಆದ್ರೆ, ತನಿಖೆ ಮಾತ್ರ ಮುಂದುವರಿದಿದೆ. ಇಂದು ಲೋಕಾಯುಕ್ತ ಎಸ್‌ಪಿ ಟಿ.ಜೆ ಉದೇಶ್‌ ನೇತೃತ್ವದಲ್ಲಿ 14 ಸೈಟ್‌ಗಳ ಮಹಜರು ನಡೆಯಲಾಯ್ತು. ದೂರುದಾರ ಸ್ನೇಹಿಮಯಿ ಕೃಷ್ಣ ಸಮ್ಮುಖದಲ್ಲೇ ಸ್ಥಳ ಮಹಜರು ಆಗಿತ್ತು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಟಿ.ಜೆ ಅಬ್ರಾಹಂ ಪ್ರತಿಕ್ರಿಯಿಸಿ, ಅಕ್ಟೋಬರ್ 28ರಂದು ಪ್ರಕರಣಕ್ಕೆ ನಾವು ಹೊಸ ರೂಪ ಕೊಡುತ್ತಿದ್ದೇವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಬಗ್ಗೆ ಇಂದು(ಅ.04) ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ,ನಾನು ಸಿಎಂ ಪತ್ನಿ ವಾಪಸ್ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿಲ್ಲ. ಮುಡಾ ವಾಪಸ್ ಪಡೆದಿರೋದಕ್ಕೆ ಧನ್ಯವಾದ ಹೇಳಿದ್ದೇನೆ. ಸೈಟ್ ವಾಪಸ್ ಕೊಟ್ಟಿದ್ದಕ್ಕೆ ಹೋರಾಟ ನಿಲ್ಲಿಸುವುದಿಲ್ಲ. ದಾಖಲೆಗಳು ಇದೆ. ತಲೆ ಕೆಳಗೆ ನಿಂತರೂ ಕೇಸ್ ಬೀಳುವುದಿಲ್ಲ. ದಾಖಲೆಗಳ ಮೇಲೆ ಕೋರ್ಟ್ ಆದೇಶ ಕೊಟ್ಟಿದೆ. ಅಕ್ಟೋಬರ್ 28ರಂದ ಕೇಸ್ ಗೆ ಹೊಸ ರೂಪ ಕೊಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಮುಡಾ ಹಗರಣ: ಪ್ರಕರಣ ಎಲ್ಲಿಗೆ ಬಂತು? ಇಂದಿನ ಬೆಳವಣಿಗೆಯ ಡಿಟೇಲ್ಸ್ ಇಲ್ಲಿದೆ

ಸಿಬಿಐನವರಿಗೆ ಕೊಂಬಿದ್ಯಾ? ಆಕಾಶದಿಂದ ಬರುತ್ತಾರಾ?

ಸ್ನೇಹಮಯಿ ಕೃಷ್ಣ ಹೊರಾಟದ ಬಗ್ಗೆ ನಾನು ಮಾತನಾಡುವುದಿಲ್ಲ. ಹೈಕೊರ್ಟ್ ಆದೇಶ ನನ್ನ ದೂರಿನ ಮೇಲೆ ಕೊಟ್ಟಿದೆ. ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಒಂದು ತಿಂಗಳು ಟೈಮ್ ಕೇಳಿದ್ದೆ. ಲೋಕಯುಕ್ತ ಪೊಲೀಸರು ನಮ್ಮವರು. ಸಿಬಿಐನವರು ಯಾರು, ದಾಖಲೆಗಳು ಆರ್ ಟಿಸಿ, ದಾನ‌ಪತ್ರ ಕನ್ನಡದಲ್ಲಿವೆ. ಇದನ್ನ ಓದುವವರು ಕರ್ನಾಟಕದ ಅಧಿಕಾರಿಗಳು. ಸಿಬಿಐನವರಿಗೆ ಕೊಂಬಿದ್ಯಾ? ಆಕಾಶದಿಂದ ಬರುತ್ತಾರಾ? ಸಿಬಿಐ ಸೋತಿರುವ ಕೇಸ್ ಗಳನ್ನ ಲೋಕಾಯುಕ್ತಕ್ಕೆ ಕೊಡಲಿ. ಲೋಕಾಯುಕ್ತ ಪೊಲೀಸ್ ಅನ್ನೋದು ಡಿಫರೆಂಟ್ ವಿಂಗ್. ಅವರು ಸಿಎಂ, ಗೃಹ ಸಚಿವರಿಗೆ ರಿಪೊರ್ಟ್ ಮಾಡಬೇಕಂತ ಇಲ್ಲ. ಲೋಕಾಯುಕ್ತದಲ್ಲಿ ಒಳ್ಳೆ ಅಧಿಕಾರಿಗಳಿದ್ದಾರೆ. ನಮ್ಮಲ್ಲಿ ಆಗದಿದ್ದನ್ನ ಹಿಂದಿ ಬರೋರು ಏನ್ ಮಾಡ್ತಾರೆ? ಎಂದು ಪ್ರಶ್ನಿಸಿದರು. ಈ ಮೂಲಕ ಅಬ್ರಾಹಂ ಲೋಕಾಯುಕ್ತ ತನಿಖೆ ಸೂಕ್ತ ಎಂದು ಸ್ಪಷ್ಟಪಡಿಸಿದ್ದು, ಸಿಬಿಐ ತನಿಖೆಗೆ ವಿರೋಧಿಸಿದ್ದಾರೆ.

ವಿಪಕ್ಷಗಳು ಹಾಗೂ ಈ ಪ್ರಕರಣದ ಮತ್ತೋರ್ವ ದೂರುದಾರ ಸ್ನೇಹಮಣಿ ಕೃಷ್ಣ ಅವರು ಇಡಿ ಮತ್ತು ಸಿಬಿಐ ತನಿಖೆಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ. ಆದ್ರೆ, ಇನ್ನೋರ್ವ ದೂರುದಾರ ಟಿಜೆ ಅಬ್ರಾಹಂ ಸಿಬಿಐ ತನಿಖೆಗೆ ಆಕ್ಷೇಪ ವ್ಯಕ್ತಡಿಸಿದ್ದು, ಲೋಕಾಯುಕ್ತ ತನಿಖೆ ಸಾಕು ಎನ್ನುವ ಅರ್ಥದಲ್ಲಿ ಹೇಳಿದ್ದು, ಅಬ್ರಾಹಂ ಅವರ ಈ ನಡೆ ಅಚ್ಚರಿಗೆ ಕಾರಣವಾಗಿದೆ.

ಇನ್ನು ಅಕ್ಟೋಬರ್ 28ರಂದು ಮುಡಾ ಕೇಸ್​ಗೆ ಹೊಸ ರೂಪ ಕೊಡುತ್ತೇವೆ ಎಂದಿರುವ ಭಾರೀ ಸಂಚಲನಕ್ಕೆ ಕಾರಣವಾಗಿದ್ದು ಆ ಹೊಸ ರೂಪ ಏನು ಎನ್ನುವುದೇ ಕುತೂಹಲ ಮೂಡಿಸಿದೆ. ಅಬ್ರಾಹಂ ಅವರ ಹೊಸ ರೂಪದಿಂದ ಸಿಎಂಗೆ ಏನಾದರೂ ಕಂಟಕ ಎದುರಾಗುತ್ತಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ