ಶೀಘ್ರವೇ 1500 ವೈದ್ಯರನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ- ಸಿಎಂ ಬಿಎಸ್ ಯಡಿಯೂರಪ್ಪ
ಇಂಥ ತುರ್ತು ಸಂದರ್ಭದಲ್ಲಿ 950 ಆರೋಗ್ಯ ಕೇಂದ್ರಗಳು 24 ಗಂಟೆಗಳ ಸತತ ಸೇವೆ ನೀಡುತ್ತಿವೆ. ಶೀಘ್ರವೇ ಹೊಸದಾಗಿ 1500 ವೈದ್ಯರನ್ನು ನಾವು ನೇಮಕ ಮಾಡಿಕೊಳ್ಳುತ್ತೇವೆ ಎಂದು ಬಿಎಸ್ವೈ ಹೇಳಿದರು.
ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ 1500 ವೈದ್ಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಈ ಮೂಲಕ ಕೊರೊನಾದಂತಹ ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ಕ್ಷೇತ್ರವನ್ನು ಬಲಗೊಳಿಸಲು ಒತ್ತು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ವೈದ್ಯಕೀಯ ತುರ್ತು ಸಂದರ್ಭದಲ್ಲಿ 950 ಆರೋಗ್ಯ ಕೇಂದ್ರಗಳು 24 ಗಂಟೆಗಳ ಸತತ ಸೇವೆ ನೀಡುತ್ತಿವೆ. ಶೀಘ್ರವೇ ಹೊಸದಾಗಿ 1500 ವೈದ್ಯರನ್ನು ನಾವು ನೇಮಕ ಮಾಡಿಕೊಳ್ಳುತ್ತೇವೆ ಎಂದಿರುವ ಬಿಎಸ್ವೈ, ವೈದ್ಯರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಆದ್ಯತೆ ನೀಡಬೇಕು ಎಂದು ಕರೆ ನೀಡಿದ್ದಾರೆ.
ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರನ್ನು ಬಿಎಸ್ ಯಡಿಯೂರಪ್ಪ ಅವರು ಹಾಡಿ ಹೊಗಳಿದ್ದಾರೆ. ಕೊವಿಡ್ ವೇಳೆ ಸುಧಾಕರ್ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಎಲ್ಲರೂ ಈ ರೀತಿ ಕೆಲಸ ಮಾಡಬೇಕು. ಆರೋಗ್ಯ ಇಲಾಖೆಯ ಅವಶ್ಯಕತೆಗಳನ್ನು ಸರ್ಕಾರ ನೆರವೇರಿಸಲಿದೆ ಎಂದು ಅವರು ಭರವಸೆ ನೀಡಿದರು.
ಶಾಲೆ ಪುನರಾರಂಭ ಜನವರಿ 1ಕ್ಕೆ ಫಿಕ್ಸ್; ಯಾವುದೇ ಬದಲಾವಣೆ ಇಲ್ಲ.. ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ